Homeಕರ್ನಾಟಕಕೊಲ್ಲೂರು ಮೂಕಾಂಬಿಕೆ ‘ಸಲಾಂ ಮಂಗಳಾರತಿ’ ಹೆಸರು ಬದಲಾವಣೆಗೆ ಸರ್ಕಾರ ನಿರ್ಧಾರ!

ಕೊಲ್ಲೂರು ಮೂಕಾಂಬಿಕೆ ‘ಸಲಾಂ ಮಂಗಳಾರತಿ’ ಹೆಸರು ಬದಲಾವಣೆಗೆ ಸರ್ಕಾರ ನಿರ್ಧಾರ!

- Advertisement -
- Advertisement -

ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆಗಳ ಒತ್ತಡಕ್ಕೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ‘ಸಲಾಂ ಮಂಗಳಾರತಿ ಪೂಜೆ’ಯ ಹೆಸರನ್ನು ಬದಲಾಯಿಸಲು ಒಪ್ಪಿಕೊಂಡಿದೆ. ಸುಮಾರು 250 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಮಂಗಳಾರತಿ ಪೂಜೆಯನ್ನು ‘ದೀವಟಿಗೆ ಮಂಗಳಾರತಿ ಪೂಜೆ’ ಎಂದು ಮರುನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ.

ಸ್ವಾತಂತ್ಯ್ರ ಹೋರಾಟಗಾರ ಟಿಪ್ಪುಸುಲ್ತಾನ್ 1763 ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ನೆನಪಿಗಾಗಿ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಇರುವ ಮೂಕಾಂಬಿಕೆ ದೇವಸ್ಥಾನದಲ್ಲಿ ‘ಸಲಾಂ ಮಂಗಳಾರತಿ ಪೂಜೆ’ಯ ಆಚರಣೆಯ ಸಂಪ್ರದಾಯವನ್ನು ಪ್ರಾರಂಭಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸರ್ಕಾರ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಇತಿಹಾಸ ತಜ್ಞ ಪ್ರೊ.ನಂಜೇರಾಜ ಅರಸ್, ಓಟ್‌ ಬ್ಯಾಂಕಿಗಾಗಿ ಧರ್ಮ ದ್ವೇಷವನ್ನು ಮುಂದಿಟ್ಟು ಆರತಿಯ ಹೆಸರನ್ನು ಬದಲಾಯಿಸಿದ ಕೂಡಲೇ ದೇವರು ಮೆಚ್ಚುತ್ತಾನೆಯೆ ಎಂದು ಪ್ರಶ್ನಿಸಿದರು.

ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಅವರು,“ತನ್ನ ರಾಜ್ಯದ ಒಳಗಡೆಯಿದ್ದ ಎಲ್ಲಾ ದೇವಸ್ಥಾನಗಳಿಗೆ ಟಿಪ್ಪು ದತ್ತಿಗಳನ್ನು ನೀಡಿದ್ದ. ಅದರಲ್ಲೂ ಕೊಲ್ಲೂರಿನ ಮೂಕಾಂಬಿಕ ದೇವಸ್ಥಾನಕ್ಕೆ ಜಮೀನು, ಪೂಜಾ ಸಾಮಾಗ್ರಿಗಳ ಕೊಡುಗೆ ನೀಡಿದ್ದ. ಹೀಗಾಗಿ ತಮ್ಮ ದೇವಸ್ಥಾನಕ್ಕೆ ರಕ್ಷಣೆ ಮತ್ತು ದತ್ತಿಗಳನ್ನು ನೀಡಿದ ರಾಜನಿಗೆ ಧನ್ಯವಾದ ಸಮರ್ಪಿಸುವ ಸಲುವಾಗಿ ಅವುಗಳನ್ನು ಪ್ರಾರಂಭಿಸಲಾಗಿತ್ತು” ಎಂದು ಹೇಳಿದರು.

ಇದನ್ನೂ ಓದಿ: ನಾನು ದಲಿತ ಎಂಬ ಕಾರಣಕ್ಕೆ ದೇವಾಯಲದ ಹೊರಗೆ ನಿಲ್ಲಿಸಿ ಮಂಗಳಾರತಿ ತರುತ್ತಾರೆ: ಡಾ.ಜಿ. ಪರಮೇಶ್ವರ್‌ ಆಕ್ರೋಶ

“ಟಿಪ್ಪು ಸುಲ್ತಾನ್‌ ಅರ್ಜಿ ಹಾಕಿ ನನ್ನ ಹೆಸರಿನಲ್ಲಿ ಆರತಿ ಮಾಡಿ ಎಂದು ಒತ್ತಾಯ ಮಾಡಿಲ್ಲ. ಜನರಿಗೆ ಒಳ್ಳೆಯ ಮನಸ್ಸಿತ್ತು ಹಾಗಾಗಿ ಮುಸ್ಲಿಂ ರಾಜ ಎಂದು ನೋಡದೆ ತಮಗೆ ರಕ್ಷಣೆ ಒದಗಿಸಿದವರಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಇದನ್ನು ನಿಲ್ಲಿಸಿದ ಕೂಡಲೆ ಇತಿಹಾಸ ಅಳಿಸಿಹೋಗುವುದಿಲ್ಲ” ಎಂದು ಅವರು ಹೇಳಿದರು.

“ಈ ಸರ್ಕಾರಕ್ಕೆ ಕಡಿದು ಕಟ್ಟೆ ಹಾಕಿದ್ದೇವೆ ಎಂದು ಹೇಳಿಕೊಳ್ಳುವ ಯಾವುದೆ ಸಾಧನೆಯ ಕೆಲಸವನ್ನು ಮಾಡಿಲ್ಲ. ಇದು ಹಿಂದೂ ಓಟ್‌ಗಳನ್ನು ಕ್ರೂಡೀಕರಿಸಿ ಚುನಾವಣೆ ಗೆಲ್ಲುವ ತಂತ್ರ ಬಿಟ್ಟರೆ ಇನ್ನೇನಿಲ್ಲ. ಧರ್ಮ ದ್ವೇಷದ ಬೆಂಕಿ ಹಾಕಿಯೆ ಹಿಂದೂ ಓಟ್‌ಗಳನ್ನು ಪಡೆದುಕೊಳ್ಳಲು ಹೊರಟಿದ್ದಾರೆ” ಎಂದು ಪ್ರೊ. ನಂಜರಾಜೆ ಅರಸ್ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮಬ್ಬಕ್ತರಿಗೆ ಗೊತ್ತಿಲ್ಲ ಅನ್ಸುತ್ತೆ ಈ ದೇಶಕ್ಕೆ ಮುಸ್ಲಿಂರು ಬರದಿದ್ರೆ, ಮುಸ್ಲಿಂರ ಕೊಡುಗೆಗಳು ಇಲ್ದಿದ್ರೆ ಈ ದೇಶ ಎಷ್ಟು ಹಿಂದುಳಿದ ದೇಶ ಆಗಿರ್ತಿತ್ತು ಅಂತ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...