Homeಅಂತರಾಷ್ಟ್ರೀಯಲಕ್ಷಾಂತರ ಜೇಡಗಳು ಸೇರಿ ಹೆಣೆದ ಅತಿದೊಡ್ಡ ಬಲೆ ಗೊಸಮೇರ್

ಲಕ್ಷಾಂತರ ಜೇಡಗಳು ಸೇರಿ ಹೆಣೆದ ಅತಿದೊಡ್ಡ ಬಲೆ ಗೊಸಮೇರ್

- Advertisement -
- Advertisement -

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಒಂದು ವಿಸ್ಮಯಕಾರಿ ಘಟನೆ ನಡೆಯಿತು. ಮಳೆಗೆ ಅಡ್ಡಲಾಗಿ ಭೂಮಿಯ ಮೇಲೊಂದು ಬೃಹತ್ ಬಲೆ ನಿರ್ಮಾಣವಾಗಿತ್ತು. ಏನಿದು ಮಾನವ ನಿರ್ಮಿತ ಮಳೆ ತಡೆಗೋಡೆ ಎಂದುಕೊಂಡರೆ ನೀವು ಮೋಸ ಹೋಗುವುದು ಖಂಡಿತ. ಇದು ಜೇಡಗಳು ಅಕಾಲಿಕ ಮಳೆಯ ಸಂದರ್ಭದಲ್ಲಿ ನಿರ್ಮಿಸಿದ ಬಲೆಗಳು. ಇದು ಕೇವಲ ಒಂದು ಜೇಡ ಹೆಣೆದ ಬಲೆಯಲ್ಲ. ಬದಲಾಗಿ ಲಕ್ಷಾಂತರ ಜೇಡಗಳು ಹೆಣೆದ ಬಲೆಗಳು.

ಗೊಸಮೇರ್ ವೆಬ್ ಎಂದು ಕರೆಯಲ್ಪಡುವ ಈ ಬಲೆಯು ಕಿಲೋಮೀಟರ್‌ಗಳಷ್ಟು ದೂರಕ್ಕೆ ವಿಸ್ತರಿಸಿಕೊಂಡಿರುತ್ತದೆ. ವಿಚಿತ್ರ ಎಂದರೆ ಈ ಜೇಡಗಳು ತಮ್ಮನ್ನು ರಕ್ಷಿಸಿಕೊಳ್ಳಲು ಇಂತಹ ಬಲೆಯನ್ನು ಹೆಣೆದುಕೊಳ್ಳುತ್ತವೆ. ನೆಲದ ಮೇಲೆ ವಾಸಿಸುವ ಈ ಜೇಡಗಳು ಅಲೆಮಾರಿ ಜೀವಿಗಳಾಗಿವೆ. ಒಂದು ಪ್ರದೇಶದಲ್ಲಿ ನೆಲೆ ನಿಲ್ಲುವುದಿಲ್ಲ. ವಸಂತ ಕಾಲಕ್ಕೆ ಮುಂಚೆ ಇವು ಹೆಚ್ಚಾಗಿ ಆಗ್ನೇಯ ಆಸ್ಟ್ರೇಲಿಯಾ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ವಿಷಕಾರಿ ಜೇಡಗಳ ಜಾತಿಗೆ ಸೇರಿರುವ ಗೊಸಮೇರ್ ಜೇಡಗಳು ಏಕಾಂಗಿಯಾಗಿ ವಾಸಿಸುವುದಿಲ್ಲ. ಲಕ್ಷಾಂತರ ಸಂಖ್ಯೆಯ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ. ಕಾಣಲಿಕ್ಕೆ ಅತ್ಯಂತ ಚಿಕ್ಕವಾಗಿರುವ ಈ ಜೇಡಗಳು ತಮ್ಮನ್ನು ರಕ್ಷಿಸಿಕೊಳ್ಳಲು ರಚಿಸುವ ಈ ಬೃಹತ್ ಬಲೂನುಗಳು ಪ್ರಕೃತಿಯ ವಿಸ್ಮಯವೇ ಸರಿ.

ಮಳೆಯ ಪ್ರವಾಹದಿಂದ ಕೊಚ್ಚಿ ಹೋಗುವ ಅಪಾಯವನ್ನು ಹೊಂದಿರುವ ಇವು ಮಳೆ ಸುರಿಯುವಾಗ ನೆಲ ಮಟ್ಟದಿಂದ ಎತ್ತರದಲ್ಲಿ ತಾವೇ ಹೆಣೆದ ಬಲೆಗೆ ಗಟ್ಟಿಯಾಗಿ ಅಂಟಿಕೊಡು ಕೂತಿರುತ್ತವೆ. ಆ ಮೂಲಕ ಪ್ರವಾಹಗಳಿಂದ ರಕ್ಷಣೆ ಪಡೆಯುತ್ತವೆ.

ಹೆಚ್ಚಾಗಿ ಹುಲ್ಲುಗಾವಲಿನಲ್ಲಿ ವಾಸಿಸುವ ಗೊಸಮೇರ್ ಜೇಡಗಳು ಹುಲ್ಲಿನ ಕೀಟ, ಚಿಟ್ಟೆಗಳನ್ನು ಬೇಟೆಯಾಡಿ ತಿನ್ನುತ್ತವೆ. ಬೃಹತ್ ಬಲೆಯನ್ನು ಜೇಡಗಳು ತಮ್ಮ ಬೇಟೆಯ ಆಯುಧಗಳನ್ನಾಗಿ ಕೂಡ ಬಳಸಿಕೊಳ್ಳುತ್ತವೆ.


ಇದನ್ನೂ ಓದಿ : ಕೊರೊನಾ ನಿರ್ವಹಣೆ ಲೋಪ ಮುಚ್ಚಿಕೊಳ್ಳಲು ಜಾಹೀರಾತುಗಳಿಗೆ ಹಣ ಸುರಿಯುತ್ತಿರುವ ಕರ್ನಾಟಕ ಮತ್ತು ಉತ್ತರ ಪ್ರದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಪ್ರಕೃತಿಯಲ್ಲಿ ಇನ್ನೂ ಏನೇನು ವಿಸ್ಮಯಗಳು ಅಡಗಿವೆಯೋ ಬಲ್ಲವರಾರು!?

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಆಡಳಿತದ 10 ವರ್ಷಗಳಲ್ಲಿ ‘ED’ ದಾಳಿಗಳಲ್ಲಿ ಹೆಚ್ಚಳ: ವರದಿ

0
ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ ಮತ್ತು, ಆಸ್ತಿಮುಟ್ಟುಗೋಲು ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಬಿಜೆಪಿ ಸರಕಾರ 'ಇಡಿ' ಮತ್ತು ಸಿಬಿಐಯಂತಹ ಸರಕಾರಿ ಸಂಸ್ಥೆಗಳನ್ನು ಪ್ರತಿಪಕ್ಷಗಳ...