Homeಅಂತರಾಷ್ಟ್ರೀಯಮತ್ತೆ ಪತನವಾದ ಇಸ್ರೇಲ್ ಸರ್ಕಾರ; ಮಾರ್ಚ್‌ನಲ್ಲಿ ಚುನಾವಣೆ

ಮತ್ತೆ ಪತನವಾದ ಇಸ್ರೇಲ್ ಸರ್ಕಾರ; ಮಾರ್ಚ್‌ನಲ್ಲಿ ಚುನಾವಣೆ

ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ’ಲಿಕುಡ್‌ ಪಾರ್ಟಿ’ಗೆ ಬಹುಮತ ಇಲ್ಲದ ಕಾರಣ ತಮ್ಮ ಎದುರಾಳಿ ಬೆನ್ನಿ ಗಾಂಟ್ಜ್ ‌ಅವರ ಬ್ಲೂ ಆ್ಯಂಡ್‌ ವೈಟ್‌ ಪಾರ್ಟಿ ಸಹಾಯದಿಂದ ಏಳು ತಿಂಗಳ ಹಿಂದೆ ಸರ್ಕಾರ ರಚಿಸಿದ್ದರು.

- Advertisement -
- Advertisement -

ಕಳೆದ ಎರಡು ವರ್ಷಗಳಿಂದ ಮೂರು ಬಾರಿ ಚುನಾವಣೆ ಕಂಡಿರುವ ಇಸ್ರೇಲ್‌ನಲ್ಲಿ ಇದೀಗ ಮತ್ತೇ ಚುನಾವಣೆ ಎದುರಾಗಿದೆ. ಮಂಗಳವಾರ ಮಧ್ಯರಾತ್ರಿ ಇಸ್ರೇಲ್ ಸಂಸತ್ತು ತಾನಾಗಿಯೆ ವಿಸರ್ಜನೆಗೊಂಡಿದೆ. ಹೀಗಾಗಿ ಮತ್ತೆ ಮಾರ್ಚ್‌ನಲ್ಲಿ ಚುನಾವಣೆ ನಿಗದಿಯಾಗಿದೆ.

ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ’ಲಿಕುಡ್‌ ಪಾರ್ಟಿ’ಗೆ ಬಹುಮತ ಇಲ್ಲದ ಕಾರಣ ತಮ್ಮ ಎದುರಾಳಿ ಬೆನ್ನಿ ಗಾಂಟ್ಜ್ ‌ಅವರ ಬ್ಲೂ ಆ್ಯಂಡ್‌ ವೈಟ್‌ ಪಾರ್ಟಿ ಸಹಾಯದಿಂದ ಏಳು ತಿಂಗಳ ಹಿಂದೆ ಸರ್ಕಾರ ರಚಿಸಿದ್ದರು. ಆದರೆ ಮೈತ್ರಿ ಸರ್ಕಾರದ ಆಂತರಿಕ ಕಚ್ಚಾಟದಿಂದ ಇದು ಕೊನೆಯಾಗಿದೆ. ಮುಂದಿನ ಮೂರು ತಿಂಗಳ ಒಳಗಾಗಿ ಚುನಾವಣೆ ನಡೆಯಬೇಕಿರುವುದರಿಂದ ಮಾರ್ಚ್‌ 23 ಕ್ಕೆ ಚುನಾವಣೆ ನಿಗದಿಯಾಗಿದೆ.

ಇದನ್ನೂ ಓದಿ: ಪ್ರತಿಯೊಬ್ಬರ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಲು ಖಾಸಗಿ ಕಂಪನಿಗಳಿಗೆ ಟೆಂಡರ್ ಕರೆದ ಸರ್ಕಾರ!

ಬೆನ್ನಿ ಗಾಂಟ್ಜ್ ಪಕ್ಷದೊಂದಿಗಿನ ಮೈತ್ರಿ ಒಪ್ಪಂದದ ಉಲ್ಲಂಘನೆಯೆ ಇಸ್ರೇಲ್ ಸರ್ಕಾರದ ಪತನಕ್ಕೆ ಕಾರಣ ಎನ್ನಲಾಗಿದ್ದು, ಸಂಸತ್‌ ವಿಸರ್ಜನೆ ಮುಂದೂಡಲು ಪ್ರಯತ್ನಿಸಿದ್ದ ಪ್ರಧಾನಿ ನೆತನ್ಯಾಹು, “ಪ್ರಸ್ತುತ ಅನಗತ್ಯವಾಗಿರುವ ಚುನಾವಣೆಯನ್ನು ತಪ್ಪಿಸಲು ನಾವೆಲ್ಲರೂ ಒಗ್ಗಟ್ಟಾಗಿ ಮಾರ್ಗ ಕಂಡುಕೊಳ್ಳಬೇಕಿದೆ” ಎಂದು ಸಂಸತ್ತಿನಲ್ಲಿ ಹೇಳಿದ್ದರು. ಅದಾಗ್ಯೂ ಸರ್ಕಾರ ಪತನಗೊಂಡಿದೆ.

ಪ್ರಧಾನಿ ನೆತನ್ಯಾಹು ವಿರುದ್ದ ಈ ಹಿಂದಿನಿಂದಲೂ ಭ್ರಷ್ಟಾಚಾರದ ಆರೋಪವಿತ್ತು. ಅವರ ವಿರುದ್ದ ಮೋಸ, ಲಂಚ ಹಾಗೂ ನಂಬಿಕೆ ದ್ರೋಹದ ಪ್ರಕರಣಗಳು ದಾಖಲಾಗಿದ್ದು, ವಿಚಾರಣೆಗಳಿಗೆ ಹಾಜರಾಗಬೇಕಿದೆ. ನೆತನ್ಯಾಹು ಮತ್ತು ಗಾಂಟ್ಜ್ ನಡುವೆ ಭಾರಿ ಕಚ್ಚಾಟಗಳಿದ್ದರೂ, ವಿರೋಧಿ ಪಕ್ಷಗಳು ಮೈತ್ರಿ ಸರ್ಕಾರವನ್ನು ರಚಿಸಿದ್ದವು.


ಇದನ್ನೂ ಓದಿ: ಪಿಸ್ತೂಲ್-ಪೆಟ್ರೋಲ್-ಫಾರ್ಮಾ-ಡ್ರಗ್-ಡಾಲರ್ ಪ್ರಪಂಚವನ್ನು ನಿಯಂತ್ರಿಸುತ್ತಿರುವ ಪಂಚ ಅಸ್ತ್ರಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...