Homeಚಳವಳಿಟಿಆರ್‌ಪಿ ಹಿಂದೆ ಬಿದ್ದಿರುವವರು ನನ್ನನ್ನು ತಪ್ಪಿತಸ್ಥಳೆಂದು ಘೋಷಿಸಿದರು: ದಿಶಾ ರವಿ

ಟಿಆರ್‌ಪಿ ಹಿಂದೆ ಬಿದ್ದಿರುವವರು ನನ್ನನ್ನು ತಪ್ಪಿತಸ್ಥಳೆಂದು ಘೋಷಿಸಿದರು: ದಿಶಾ ರವಿ

‘ನಾವು ಪ್ರತಿದಿನ ಬೆದರಿಕೆಗೆ ಒಳಗಾಗುತ್ತಲೆ ಇರುತ್ತೇವೆ, ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ. ಆದರೂ ಹೋರಾಟವನ್ನು ಮುಂದುವರೆಸುತ್ತೇವೆ’ ಎಂದು ಆದಿವಾಸಿ ಹೋರಾಟಗಾರ್ತಿ ಸೋನಿ ಸೂರಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

- Advertisement -
- Advertisement -

ಅಂತಾರಾಷ್ಟ್ರೀಯವಾಗಿ ಸುದ್ದಿಯಾಗಿದ್ದ ಪರಿಸರ ಹೋರಾಟಗಾರ್ತಿ ದಿಶಾ ರವಿ, ಕಳೆದ ತಿಂಗಳು ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಇದೀಗ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ದೇಶದ್ರೋಹದ ಆರೋಪ ಮತ್ತು ಮಾಧ್ಯಮಗಳು ತನ್ನ ಮೇಲೆ ನಡೆಸಿದ ದಾಳಿಯನ್ನು “ಟಿಆರ್‌ಪಿ ಹಿಂದೆ ಬಿದ್ದಿರುವವರು ನನ್ನನ್ನು ತಪ್ಪಿತಸ್ಥಳೆಂದು ಘೋಷಿಸಿದರು” ಎಂದು ದಿಶಾ ರವಿ ಖಂಡಿಸಿದ್ದಾರೆ.

22 ವರ್ಷದ ದಿಶಾ ರವಿ ಅವರನ್ನು ಗ್ರೇಟಾ ಥನ್‌ಬರ್ಗ್ ಕಳೆದ ಫೆಬ್ರವರಿಯಲ್ಲಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಟೂಲ್‌ಕಿಟ್ ಪ್ರಕರಣದಲ್ಲಿ ಬಂದಿಸಲಾಗಿತ್ತು. ದೆಹಲಿ ಪೊಲೀಸರು ಈ ಟೂಲ್‌ಕಿಟ್‌ ದಿಶಾ ರವಿ ತಯಾರಿಸಿದ್ದರು ಎಂದು ಅವರ ವಿರುದ್ದ ದೇಶದ್ರೋಹದ ಆರೋಪ ಹೊರಿಸಿದ್ದರು. ಅವರ ಬಂಧನದಿಂದ ಭಾರತವು ಜಾಗತಿಕ ಮಟ್ಟದಲ್ಲಿ ಟೀಕೆಗೊಳಗಾಗಿತ್ತು. ಬಂಧನಕ್ಕೊಳಗಾದ ಹತ್ತು ದಿನಗಳ ನಂತರ ದೆಹಲಿ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು.

ಇದನ್ನೂ ಓದಿ: ದಿಶಾ ರವಿ ಜಾಮೀನು ವಿಚಾರಣೆಯಲ್ಲಿ ಕೋರ್ಟ್ ಹೇಳಿದ್ದೇನು? 10 ಅಂಶಗಳು

“ತಿಹಾರ್ ಜೈಲಿನಲ್ಲಿದ್ದಾಗ, ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ, ಪ್ರತಿ ಸೆಕೆಂಡಿನ ಬಗ್ಗೆ ನನಗೆ ಅರಿವಿತ್ತು. ನನ್ನನ್ನು ಶೆಲ್ ನಲ್ಲಿ ಕೂಡಿ ಹಾಕಿ ಬೀಗ ಹಾಕಿದರು. ಭೂಮಿಯ ಉಳಿವಿಗಾಗಿ ಯೋಚಿಸುವುದು ಯಾವಾಗಿನಿಂದ ಅಪರಾಧವಾಗಿದೆ ಎಂದು ಅಚ್ಚರಿಯಾಯಿತು. ರೈತರಾಗಿದ್ದ ನನ್ನ ಅಜ್ಜಿ-ತಾತ ನಾನು ಪರಿಸರ ಹೋರಾಟಗಾರ್ತಿಯಾಗಲು ಪ್ರೇರಣೆಯಾಗಿದ್ದರು” ಎಂದು ಅವರು ಬರೆದುಕೊಂಡಿದ್ದಾರೆ.

“ನನ್ನ ಸ್ವಾಯತ್ತತೆಯನ್ನು ಉಲ್ಲಂಘಿಸಲಾಗಿದ್ದು, ಮಾಧ್ಯಮಗಳು ಟಿಆರ್‌ಪಿಗಾಗಿ ನನ್ನ ಚಿತ್ರಗಳನ್ನು ಪದೇಪದೆ ತೋರಿಸಿ ನನ್ನ ಚಟುವಟಿಕೆಗನ್ನು ತಪ್ಪು ಎಂದು ಘೋಷಿಸಿದವಯ. ಆದರೆ ನ್ಯಾಯಾಲಯದಲ್ಲಿ ಅಲ್ಲ. ಮಾಧ್ಯಮಗಳು ಅವರ ತೃಪ್ತಿಗಾಗಿ ನನ್ನ ಬಗ್ಗೆ ಸೃಷ್ಟಿಸಿದ ಸುಳ್ಳುಗಳ ಅರಿವಿಲ್ಲದ ನಾನು ಜೈಲಿನಲ್ಲಿ ಕುಳಿತಿದ್ದೆ” ಎಂದು ಅವರು ತನ್ನ ನಾಲ್ಕು ಪುಟಗಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತನ್ನ ಬೆಂಬಲಕ್ಕೆ ನಿಂತ ಮತ್ತು ಕಾನೂನು ಹೋರಾಟಕ್ಕೆ ಸಹರಿಸಿದ ಎಲ್ಲರಿಗೂ ದಿಶಾ ರವಿ ಕೃತಜ್ಞತೆಯನ್ನು ಸಲ್ಲಿಸಿರುವ ಅವರು, ಪತ್ರದ ಕೊನೆಯಲ್ಲಿ “ನಾವು ಪ್ರತಿದಿನ ಬೆದರಿಕೆಗೆ ಒಳಗಾಗುತ್ತಲೆ ಇರುತ್ತೇವೆ, ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ. ಆದರೂ ಹೋರಾಟವನ್ನು ಮುಂದುವರೆಸುತ್ತೇವೆ’’ ಎಂದು ಚತ್ತೀಸ್‌ಗಡದ ಆದಿವಾಸಿ ಹೋರಾಟಗಾರ್ತಿ ಸೋನಿ ಸೂರಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ‘ಹವಾಮಾನ’ದ ನ್ಯಾಯಕ್ಕಾಗಿ ಹೋರಾಟ ಮುಂದುವರೆಯುತ್ತದೆ ಎಂದು ಅವರು ಪತ್ರವನ್ನು ಮುಗಿಸಿದ್ದಾರೆ.

ಇದನ್ನೂ ಓದಿ: ದಿಶಾ ರವಿಯ ಜಾಮೀನು ಆದೇಶ: ದೇಶದ್ರೋಹದ ಬಗ್ಗೆ ನ್ಯಾಯಾಧೀಶರು ಹೇಳಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...