ರಕ್ಷಣಾ, ಸಚಿವಾಲಯ
PC: Rajnath Singh/Twitter

ರಕ್ಷಣಾ ಸಚಿವಾಲಯದ 2017 ರ ನಂತರದ ಎಲ್ಲಾ ಮಾಸಿಕ ವರದಿಗಳನ್ನು ವೆಬ್‍ಸೈಟ್‍ನಿಂದ ತೆಗೆದು ಹಾಕಿದೆ ಎಂದು ವರದಿಯಾಗಿದೆ. ಈ ಹಿಂದೆ ಸಚಿವಾಲಯವು ಲಡಾಖ್‍ನಲ್ಲಿ ಚೀನಾದ ಆಕ್ರಮಣದ ಬಗ್ಗೆ ಸೂಚಿಸಿದ್ದ ಮಾಸಿಕ ವರದಿಯನ್ನು ತನ್ನ ವೆಬ್ ಸೈಟ್‍ನಿಂದ ತೆಗೆದು ಹಾಕಿತ್ತು.

ಇದೇಗ ಡಿಲೀಟ್ ಮಾಡಿರುವ ವರದಿಯಲ್ಲಿ 2017 ಡೋಕ್ಲಾಂ ಬಿಕ್ಕಟ್ಟಿನ ವರದಿಗಳೂ ಸೇರಿದೆ. ಇದರಲ್ಲಿ ಭಾರತ-ಚೀನಾ ಸೇನಾ ಪಡೆಗಳ ನಡುವಿನ ಉದ್ವಿಗ್ನತೆಯನ್ನು ಉಲ್ಲೇಖಿಸಿರಲಿಲ್ಲ. ಈ ವರದಿಗಳನ್ನು ಯಾಕೆ ತೆಗೆದು ಹಾಕಲಾಗಿದೆಯೆಂದು ರಕ್ಷಣಾ ಸಚಿವಾಲಯ ಅಧೀಕೃತವಾಗಿ ಹೇಳದಿದ್ದರೂ ಹಳೆಯ ವರದಿಗಳು ಈ ತಿಂಗಳ ಒಳಗೆ ಮತ್ತೆ ವೆಬ್‌ಸೈಟ್‍ನಲ್ಲಿ ಕಾಣಿಸಬಹುದು ಎಂದು ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ:ಚೀನಾ ಭಾರತದ ಭೂಪ್ರದೇಶ ಅತಿಕ್ರಮಿಸಿದೆಯೆಂದು ಒಪ್ಪಿಕೊಂಡ ರಕ್ಷಣಾ ಸಚಿವಾಲಯ: ದಾಖಲೆ ಡಿಲಿಟ್!

ವರದಿಗಳನ್ನು ಹೆಚ್ಚು ವಿಸ್ತೃತ ಹಾಗೂ ಸಮಗ್ರಗೊಳಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆಯಾದರೂ ಈ ವರದಿಗಳು ಪ್ರಮುಖ ಘಟನಾವಳಿಗಳಾದ ಬಾಲಾಕೋಟ್ ವಾಯುದಾಳಿ, ಭಾರತ-ಪಾಕಿಸ್ತಾನದ ನಡುವೆ ನಂತರ ಉಂಟಾದ ಸಂಘರ್ಷಮಯ ವಾತಾವರಣ ಹಾಗೂ ಡೋಕ್ಲಾಂ ಸ್ಥಿತಿಯ ಕುರಿತು ಮೌನ ವಹಿಸಿವೆ.

ಈ ಹಿಂದೆ ಜೂನ್ 2020 ರ ವರದಿಯನ್ನು ಆಗಸ್ಟ್‌ನಲ್ಲಿ ಕಿತ್ತು ಹಾಕಲಾಗಿತ್ತು. ಆ ವರದಿಯಲ್ಲಿ ಮೇ 2020 ರ ನಂತರ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಸಮೀಪದ ಗಲ್ವಾನ್ ಕಣಿವೆಯಲ್ಲಿ ಚೀನೀಯರ ಆಕ್ರಮಣ ಹೆಚ್ಚಾಗುತ್ತಿದೆ ಎಂದು ಉಲ್ಲೇಖಿಸಲಾಗಿತ್ತು. ಚೀನಾದೊಂದಿಗಿನ ನಿಲುವಿನ ಬಗ್ಗೆ ತೀವ್ರವಾಗಿ ಟೀಕಿಸುತ್ತಿದ್ದ ರಾಹುಲ್ ಗಾಂಧಿ ಡಿಲಿಟ್ ಮಾಡಿರುವ ವರದಿಯನ್ನು ಸೂಚಿಸಿ ಪ್ರಧಾನಿ ಯಾಕೆ ಸುಳ್ಳು ಹೇಳುತ್ತದ್ದಾರೆ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ:1962 ರ ನಂತರ ಇದೇ ಮೊದಲ ಬಾರಿಗೆ ಲಡಾಖ್‌ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ; ಒಪ್ಪಿಕೊಂಡ ವಿದೇಶಾಂಗ ಸಚಿವ

ವಿಡಿಯೋ:

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here