Homeಅಂತರಾಷ್ಟ್ರೀಯವಿಶ್ವಸಂಸ್ಥೆ ಆತ್ಮವಿಶ್ವಾಸದ ಬಿಕ್ಕಟ್ಟನ್ನು ಎದುರಿಸುತ್ತಿದೆ: ಪ್ರಧಾನಿ ಮೋದಿ

ವಿಶ್ವಸಂಸ್ಥೆ ಆತ್ಮವಿಶ್ವಾಸದ ಬಿಕ್ಕಟ್ಟನ್ನು ಎದುರಿಸುತ್ತಿದೆ: ಪ್ರಧಾನಿ ಮೋದಿ

- Advertisement -
- Advertisement -

’ವಿಶ್ವಸಂಸ್ಥೆ ಆತ್ಮವಿಶ್ವಾಸದ ಬಿಕ್ಕಟ್ಟನ್ನು ಎದುರಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಭಾರತವು 2021 ರ ಜನವರಿಯಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಅಲ್ಲದ ಚುನಾಯಿತ ಸದಸ್ವತ್ವ ಹುದ್ದೆಯನ್ನು ಹೊಂದಲಿದೆ, ಈ ಹಿನ್ನೆಲೆಯಲ್ಲಿ ಪ್ರಧಾನಿಯ ಈ ಹೇಳಿಕೆ ಮಹತ್ವದ್ದಾಗಿದೆ.

ಅವರು ವಿಶ್ವಸಂಸ್ಥೆಯ 75 ನೇ ವರ್ಷಾಚರಣೆ ಅಂಗವಾಗಿ ನಡೆದ ಜನರಲ್ ಅಸೆಂಬ್ಲಿಯ ಉನ್ನತ ಮಟ್ಟದ ಸಭೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡುತ್ತಿದ್ದರು.

ಇದನ್ನೂ ಓದಿ: ಮೂರೇ ದಿನಕ್ಕೆ ಅಧಿವೇಶನ ಮೊಟಕುಗೊಳಿಸಲು ಮುಂದಾದ ಸಿಎಂ ಬಿಎಸ್‌ವೈ: ಸಿದ್ದರಾಮಯ್ಯ ವಿರೋಧ

ಪ್ರಸ್ತುತ ವಾಸ್ತವತೆಯನ್ನು ಪ್ರತಿನಿಧಿಸುವ, ಎಲ್ಲ ಹಕ್ಕುದಾರರಿಗೆ ಧ್ವನಿ ನೀಡುವ, ಪ್ರಚಲಿತ ಸವಾಲುಗಳನ್ನು ಎದುರಿಸುವ ಮತ್ತು ಮನುಕುಲದ ಕಲ್ಯಾಣವನ್ನು ಬಯಸುವ ಸುಧಾರಿತ ಬಹುತ್ವವಾದ ಇಂದು ವಿಶ್ವಕ್ಕೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಅಪ್ರಸ್ತುತ ಸಂರಚನೆಯಿಂದ ನಾವು ಇಂದಿನ ಸವಾಲುಗಳ ವಿರುದ್ಧ ಹೋರಾಡಲು ಸಾಧ್ಯವಾಗದು. ಸಮಗ್ರ ಸುಧಾರಣೆ ಇಲ್ಲದ ಕಾರಣದಿಂದಾಗಿ ವಿಶ್ವಸಂಸ್ಥೆಯು ಆತ್ಮವಿಶ್ವಾಸದ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ವಿಶ್ವ ಸಂಸ್ಥೆಯ 75 ನೇ ವರ್ಷಾಚಣೆಯ ಜನರಲ್ ಅಸೆಂಬ್ಲಿಯು ಭಯೋತ್ಪಾದನೆ ವಿರುದ್ಧದ ಹೋರಾಟ, ಸುಧಾರಿತ ಬಹುತ್ವವಾದ, ಎಲ್ಲರ ಪಾಲ್ಗೊಳ್ಳುವಿಕೆಯ ಅಭಿವೃದ್ಧಿ ಮತ್ತು ಕೊರೊನಾದಂತ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಕರೆ ನೀಡಿದ್ದು, ದೂರದೃಷ್ಟಿಯ ರಾಜಕೀಯ ಒಪ್ಪಂದವನ್ನು ಆಂಗೀಕರಿಸಿದೆ.

ಇದನ್ನೂ ಓದಿ: ಜಿಡಿಪಿ ಕುಸಿತ: ನರೇಂದ್ರ ಮೋದಿ ಸರ್ಕಾರದ ಅನೀತಿಗಳೇ ಕಾರಣ ಎಂದ ಕಾಂಗ್ರೆಸ್ ನಾಯಕರು

ರೈತ ವಿರೋಧಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅರೆಬೆತ್ತಲೆ ಧರಣಿ ಕೂತ ರೈತರು

ಬೆಂಗಳೂರು: ರೈತವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ, ರಾಜ್ಯದ ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳಿಂದ ಬೃಹತ್ ಹೋರಾಟ

Posted by Naanu Gauri on Monday, September 21, 2020

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರೆಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರೆಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರೆಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...