Homeಮುಖಪುಟ"ಅವರು ನನ್ನನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಲು ಮುಂದಾಗಿದ್ದರು": ಗೋಮಾಂಸ ಶಂಕೆಯಿಂದ ಹಲ್ಲೆಗೊಳಗಾದ ಮುಸ್ಲಿಂ ವೃದ್ದ

“ಅವರು ನನ್ನನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಲು ಮುಂದಾಗಿದ್ದರು”: ಗೋಮಾಂಸ ಶಂಕೆಯಿಂದ ಹಲ್ಲೆಗೊಳಗಾದ ಮುಸ್ಲಿಂ ವೃದ್ದ

- Advertisement -
- Advertisement -

ಅವರ ಹೆಸರು ಅಶ್ರಫ್ ಅಲೀ ಸೈಯ್ಯದ್ ಹುಸೈನ್, ವಯಸ್ಸು 72 ವರ್ಷ. ಮಹಾರಾಷ್ಟ್ರದ ಜಲಗಾಂವ್‌ನಿಂದ ಕಲ್ಯಾಣ್‌ಗೆ ರೈಲಿನ ಮೂಲಕ ಆಗಾಗ ಪ್ರಯಾಣಿಸುತ್ತಿದ್ದರು. ಕಲ್ಯಾಣ್‌ ಜಂಕ್ಷನ್ ರೈಲು ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಆಟೋ ರಿಕ್ಷಾ ಹಿಡಿದು ನಾಲಕ್ಕು ಕಿ.ಮೀ ಪ್ರಯಾಣಿಸಿ ನಗರದ ಹೊರಗಿನ ಕೊಂಗಾವ್ ಎಂಬ ಹಳ್ಳಿಗೆ ತಲುಪುತ್ತಿದ್ದರು. ಅಲ್ಲಿ ಅವರ ಮಗಳ ಮನೆಯಿತ್ತು.

ಪ್ರತೀ ಬಾರಿ ರೈಲಿನ ಮೂಲಕ ಮಗಳ ಮನೆಗೆ ತೆರಳುತ್ತಿದ್ದ ಅಶ್ರಫ್ ಅಲೀ ಅವರಿಗೆ ಆಗಸ್ಟ್ 30ರಂದು ಆಘಾತ ಕಾದಿತ್ತು. ರೈಲಿನಲ್ಲಿ ಅವರ ಮುಂದಿನ ಆಸನದಲ್ಲಿ ಕುಳಿತಿದ್ದ ಸುಮಾರು 20-25 ವರ್ಷ ಆಸುಪಾಸಿನ ಯುವಕರ ಗುಂಪೊಂದು ಗೋಮಾಂಸ ಸಾಗಾಟದ ಆರೋಪ ಹೊರಿಸಿ ವಯಸ್ಸಿನ ಹಿರಿತನ ನೋಡದೆ ಅಶ್ರಫ್ ಅಲೀ ಅವರಿಗೆ ಥಳಿಸಿದ್ದರು. ಅದಕ್ಕಿಂತಲೂ ಹೆಚ್ಚಾಗಿ ಇತರ ಪ್ರಯಾಣಿಕರ ಮುಂದೆ ಅವಮಾನಿಸಿ ಮಾನಸಿಕ ಹಿಂಸೆ ನೀಡಿದ್ದರು. ಹಲ್ಲೆ ಮಾಡಿದವರೆಲ್ಲರೂ ಪೊಲೀಸ್ ಹುದ್ದೆಯ ಪರೀಕ್ಷೆ ಬರೆಯಲು ಮುಂಬೈಗೆ ತೆರಳುತ್ತಿದ್ದವರು ಎಂಬುವುದು ಆತಂಕದ ವಿಷಯ.

ಅಶ್ರಫ್ ಅಲೀ ಅವರಿಗೆ ಹಲ್ಲೆ ಮಾಡಿದವರು ಪೊಲೀಸರಾಗಿ ಸಂವಿಧಾನದಡಿ ಕಾನೂನು ಕಾಪಾಡಲು ಹೊರಟವರಾಗಿದ್ದರು. ಆದರೆ, ಅವರೇ ಗೋಮಾಂಸದ ಆರೋಪ ಹೊರಿಸಿ ಅಶ್ರಫ್ ಅಲೀ ಅವರ ಮುಖ, ಎದೆ, ಹೊಟ್ಟೆ ಎಂದು ನೋಡದೆ ಥಳಿಸಿದ್ದರು. ಅಶ್ರಫ್ ಅಲೀ ಅವರ ಮೊಬೈಲ್ ಫೋನ್ ಕಸಿದುಕೊಂಡಿದ್ದರು. ತಮ್ಮ ದುಷ್ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು.

ಈ ಘಟನೆ ಸಂಬಂಧ ಥಾಣೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರಂಭದಲ್ಲಿ ಆಕಾಶ್ ಅಹ್ವಾದ್, ನೀಲೇಶ್ ಅಹಿರೆ ಮತ್ತು ಜಯೇಶ್ ಮೋಹಿತೆ ಎಂಬ ಮೂವರನ್ನು ಬಂಧಿಸಿದ್ದರು. ಆದರೆ, ಹಲ್ಲೆ ನಡೆಸಿರುವ ವಿಡಿಯೋ ಸಾಕ್ಷಿಯ ಹೊರತಾಗಿಯೂ ಆರೋಪಿಗಳ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದರು. ಹಾಗಾಗಿ, ಆರೋಪಿಗಳು ಬಂಧನಕ್ಕೊಳಗಾದ ಮರುದಿನವೇ ಬಿಡುಗಡೆಯಾಗಿದ್ದಾರೆ.

ತನ್ನ ಮೇಲಿನ ಹಲ್ಲೆ ಘಟನೆಯನ್ನು ದಿ ವೈರ್  ಸುದ್ದಿ ಸಂಸ್ಥೆಗೆ ವಿವರಿಸಿರುವ ಅಶ್ರಫ್ ಅಲೀ “ನನ್ನ ಮೇಲಿನ ದಾಳಿ ಅಪ್ರಚೋದಿತವಾಗಿದೆ. ಜಲಗಾಂವ್‌ನ ಚಾಲಿಸ್‌ಗಾಂವ್ ನಿಲ್ದಾಣದಲ್ಲಿ ನಾನು ರೈಲು ಹತ್ತಿದ್ದೆ. ರೈಲಿನಲ್ಲಿ ಜನಸಂದಣಿ ಇತ್ತು. ಹಾಗಾಗಿ ರೈಲು ನಾಸಿಕ್ ರೈಲು ನಿಲ್ದಾಣಕ್ಕೆ ಹತ್ತಿರವಾಗುವವರೆಗೂ ನಿಂತುಕೊಂಡೇ ಇದ್ದೆ. ನಂತರ ಮೇಲಿನ ಬರ್ತ್‌ನಲ್ಲಿ ಕುಳಿತಿದ್ದ ಒಬ್ಬಳು ಹುಡುಗಿ ತನ್ನ ಸೀಟಿನಿಂದ ಇಳಿದಳು. ನಾನು ಆ ಸ್ಥಳಕ್ಕೆ ಹೋದೆ. ಆಗ ನನ್ನ ಪಕ್ಕದಲ್ಲಿ ನಿಂತಿದ್ದ ಸುಮಾರು 24-25 ವರ್ಷ ವಯಸ್ಸಿನ ಯುವಕ, ತನಗೆ ಜಾಗ ಕೊಡಿ ಎಂದು ಕೇಳಿದ. ಇನ್ನೊಬ್ಬ ವ್ಯಕ್ತಿ ಕೂರಲು ಜಾಗ ಇಲ್ಲದ ಕಾರಣ ನಾನು ಮಡಿಲಲ್ಲಿ ಕೂರುತ್ತೀರಾ? ಎಂದು ಆ ಯುವಕನಿಗೆ ಕೇಳಿದೆ. ಅದು ಆ ಯುವಕ ಮತ್ತು ಆತನ ಜೊತೆ ನಿಂತಿದ್ದವರಿಗೆ ಕೋಪ ತರಿಸಿತು” ಎಂದಿದ್ದಾರೆ.

ಮುಂದುವರಿದು “ನಾನು ಇಳಿಯಬೇಕಿದ್ದ ನಿಲ್ದಾಣ ಕಲ್ಯಾಣ್‌ಗೆ ರೈಲು ಬರುವವರೆಗೂ ಕುಳಿತಿದ್ದೆ. ನನ್ನ ಜೊತೆ ಚೀಲವೊಂದಿತ್ತು. ಅದರಲ್ಲಿ ಎರಡು ಪ್ಲಾಸ್ಟಿಕ್‌ ಡಬ್ಬಗಳಲ್ಲಿ ಎಮ್ಮೆ ಮಾಂಸ ಇತ್ತು. ಮಹಾರಾಷ್ಟ್ರದಲ್ಲಿ ಎಮ್ಮೆ ಮಾಂಸ ಸೇವನೆ ಕಾನೂನು ಬದ್ಧವಾಗಿದೆ. ಯುವಕರ ಗುಂಪು ಏಕಾಏಕಿ ನನ್ನ ಬ್ಯಾಗ್ ತೆರೆದು ಅವರಿಗೆ ತೋರಿಸಲು ಒತ್ತಾಯಿಸಿದರು. ನನ್ನನ್ನು ದಬಾಯಿಸಲು ಪ್ರಾರಂಭಿಸಿದರು. ಬ್ಯಾಗ್‌ನಲ್ಲಿ ಏನಿದೆ? ಎಂದು ಕೇಳಿದರು. ನನಗೆ ಗೊಂದಲವುಂಟಾಯಿತು. ಗೂಳಿ ಮಾಂಸ ಎಂದೆ. ತಕ್ಷಣ ಯುವಕರು ನನಗೆ ಥಳಿಸಲು ಪ್ರಾರಂಭಿಸಿದರು” ಎಂದು ಹುಸೈನ್‌ ಎಫ್‌ಐಆರ್‌ನಲ್ಲಿ ವಿವರಿಸಿದ್ದಾರೆ ಎಂದು ದಿ ವೈರ್ ಹೇಳಿದೆ.

“ಅವನನ್ನು ರೈಲಿನಿಂದ ಹೊರಕ್ಕೆ ತಳ್ಳಿ”

“ರೈಲು ಕಲ್ಯಾಣ್ ನಿಲ್ದಾಣಕ್ಕೆ ಸಮೀಪಿಸುತ್ತಿದ್ದಂತೆ ನಾನು ಇಳಿಯಲು ಮುಂದಾದೆ. ಆದರೆ, ಆ ಯುವಕರು ನನ್ನನ್ನು ಬಿಡಲಿಲ್ಲ. ಅವರಲ್ಲಿ ಕೆಲವರು ” ಅವನನ್ನು ರೈಲಿನಿಂದ ಹೊರಕ್ಕೆ ತಳ್ಳಿ” ಎಂದರು. ರೈಲಿನಲ್ಲಿದ್ದ ಕೆಲವರು ನನಗೆ ಹೊಡೆಯದಂತೆ ಕೇಳಿಕೊಂಡರೂ, ಯುವಕರು ತಲೆಕೆಡಿಸಿಕೊಳ್ಳದೆ ಹಲ್ಲೆ ಮಾಡುವುದನ್ನು ಮುಂದುವರೆಸಿದರು” ಎಂದು ಅಶ್ರಫ್ ಅಲೀ ನೆನಪಿಸಿಕೊಂಡಿದ್ದಾರೆ.

“ಆರೋಪಿಗಳು ಪೊಲೀಸರಿಗೆ ದೂರು ನೀಡಿದರೆ ನನ್ನನ್ನು ಕೊಲ್ಲುವುದಾಗಿ ಮತ್ತು ನನ್ನ ಕುಟುಂಬದ ಮಹಿಳೆಯರನ್ನು ಅತ್ಯಾಚಾರವೆಸಗುವುದಾಗಿ ಬೆದರಿಕೆ ಹಾಕಿದ್ದಾರೆ. ಅವರು ದೇಶದ ಹಲವೆಡೆ ಗುಂಪು ಹತ್ಯೆಗಳನ್ನು ನಡೆಸುತ್ತಿರುವ ಸ್ವಯಂ ಘೋಷಿತ ಗೋರಕ್ಷರು ಮತ್ತು ಬಜರಂಗದಳದ ಜೊತೆಗಿನ ತಮ್ಮ ಸಂಪರ್ಕದ ಬಗ್ಗೆ ಹೇಳಿ ಹೆಮ್ಮೆಪಟ್ಟುಕೊಳ್ಳುತ್ತಿದ್ದರು” ಎಂದು ಅಶ್ರಫ್ ಅಲೀ ಹೇಳಿದ್ದಾರೆ.

“ಕಲ್ಯಾಣ್ ನಿಲ್ದಾಣದಲ್ಲಿ ರೈಲಿನಿಂದ ಇಳಿಯಬೇಕಾಗಿದ್ದ ನಾನು ಕೊನೆಗೆ ಥಾಣೆ ನಿಲ್ದಾಣದಲ್ಲಿ ಇಳಿದೆ. ಬಳಿಕ ಪೊಲೀಸ್ ಠಾಣೆಗೆ ಹೋದೆ. ನನಗೆ ಥಳಿಸಿದ್ದಾರೆ ಎಂದು ಪೊಲೀಸರಿಗೆ ಹೇಳಿದೆ. ನನ್ನ ಮುಖ ಊದಿಕೊಂಡಿತ್ತು. ದೇಹದ ತುಂಬಾ ನೋವಿತ್ತು. ಕಣ್ಣಿನ ಕುಳಿ ಕಪ್ಪು ಬಣ್ಣಕ್ಕೆ ತಿರುಗಿತ್ತು. ಆದರೆ, ಪೊಲೀಸರು ನನ್ನ ಪರಿಸ್ಥಿತಿಯನ್ನು ನಿರ್ಲಕ್ಷಿಸಿದರು. ಕೋಮು ಆಯಾಮದಲ್ಲಿ ನನ್ನ ಮೇಲೆ ನಡೆದ ದಾಳಿಯನ್ನು ಸಾಮಾನ್ಯ ಹಲ್ಲೆ ಘಟನೆಯೆಂದು ಪರಿಗಣಿಸಿದರು. ಸಾಮಾನ್ಯ ಕಾಗದಲ್ಲಿ ಏನೋ ಬರೆದು ಸಹಿ ಮಾಡುವಂತೆ ಹೇಳಿದರು. ನಾನು ಸಹಿ ಮಾಡಿ ಹೊರಟೆ” ಎಂದು ಅಶ್ರಫ್ ಅಲೀ ತಿಳಿಸಿದ್ದಾರೆ.

“ಥಾಣೆಯಿಂದ ನಾನು ವಾಪಸ್ ಕಲ್ಯಾಣ್‌ಗೆ ಬಂದು ಮಗಳ ಊರಾದ ಕೊಂಗಾವ್‌ಗೆ ಹೋದೆ. ಯುವಕರು ನನ್ನ ಮೇಲೆ ಹಲ್ಲೆ ಮಾಡಿರುವುದು ನನ್ನ ಜೊತೆಗಿದ್ದ ಮಾಂಸದ ಕಾರಣಕ್ಕೆ ಎಂದು ನನಗೆ ಗೊತ್ತಾಯಿತು. ಅದಕ್ಕೆ ಆ ಮಾಂಸವನ್ನು ಮಗಳ ಮನೆಯ ದಾರಿ ಮಧ್ಯೆ ಹರಿಯುವ ನೀರಿಗೆ ಎಸೆದೆ. ನನ್ನ ಮೇಲೆ ನಡೆದ ಹಲ್ಲೆಯನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿಟ್ಟಿದ್ದೆ. ಆದರೆ, ಅಷ್ಟರಲ್ಲಿ ವಿಡಿಯೋ ಎಲ್ಲೆಡೆ ಹರಿದಾಡಿತ್ತು” ಎಂದಿದ್ದಾರೆ.

“ಪೊಲೀಸರು ಸರಳ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ”

ಅಶ್ರಫ್ ಅಲೀ ಅವರ ಮೇಲೆ ಕೋಮುದಾಳಿ ನಡೆದಿದೆ. ಅವರು ಮುಸ್ಲಿಂ ಧರ್ಮದವರು ಮತ್ತು ಗೋಮಾಂಸ ಸಾಗಿಸುತ್ತಿದ್ದರು ಎಂದು ಥಳಿಸಲಾಗಿದೆ. ಆದರೆ, ಥಾಣೆ ರೈಲ್ವೆ ಪೊಲೀಸರು ಸಾಮಾನ್ಯ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್‌ಡಿಪಿಐ ಆಕ್ರೋಶ ವ್ಯಕ್ತಪಡಿಸಿದೆ ಎಂದು ದಿ ವೈರ್ ವರದಿ ಮಾಡಿದೆ.

ಕೃಪೆ: thewire.in

ಇದನ್ನೂ ಓದಿ : ಮುಸ್ಲಿಂ ವಿರೋಧಿ ದ್ವೇಷ ಭಾಷಣದ ಆರೋಪ; ಮಹಾರಾಷ್ಟ್ರ ಬಿಜೆಪಿ ಶಾಸಕ ನಿತೇಶ್ ರಾಣೆ ವಿರುದ್ಧ ಎಫ್‌ಐಆರ್‌ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...