Homeರಾಷ್ಟ್ರೀಯಎಟಿಎಂ ದರೋಡೆಗೆ ಜೆಸಿಬಿ ಬಳಸಿದ ಕಳ್ಳರು: ನಿರುದ್ಯೋಗದ ಪರಿಣಾಮ ಎಂದ ನೆಟ್ಟಿಗರು

ಎಟಿಎಂ ದರೋಡೆಗೆ ಜೆಸಿಬಿ ಬಳಸಿದ ಕಳ್ಳರು: ನಿರುದ್ಯೋಗದ ಪರಿಣಾಮ ಎಂದ ನೆಟ್ಟಿಗರು

- Advertisement -
- Advertisement -

ಎಟಿಎಂನಿಂದ ಹಣ ದರೋಡೆ ಮಾಡಲು ಕಳ್ಳರು ಜೆಸಿಬಿಯನ್ನೇ ಬಳಸಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಭಾನುವಾರ ನಡೆದಿದೆ. ಕಳ್ಳರ ಈ ಕೃತ್ಯವು ಎಟಿಎಂ ಬೂತ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಕೃತ್ಯಕ್ಕೆ ಬಳಸಿರುವ ಜೆಸಿಬಿ ಪೆಟ್ರೋಲ್ ಪಂಪ್‌ವೊಂದರ ಹೊರಗೆ ಪತ್ತೆಯಾಗಿದ್ದು, ಎಟಿಎಂನಲ್ಲಿದ್ದ 27 ಲಕ್ಷ ರೂ. ಹಣವನ್ನು ಕಳ್ಳರು ದೋಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ಪತ್ರಕರ್ತರಿಗೆ ತಿಳಿಸಿದ್ದಾರೆ. ಕಳ್ಳರ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಕಳ್ಳರ ಕೈಚಳಕವನ್ನು ವಿನೋದಮಯವಾಗಿ ಕಂಡಿದ್ದು, ಮತ್ತೆ ಕೆಲವರು ಇದು ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗದ ಪರಿಣಾಮ ಎಂದು ದೂರಿದ್ದಾರೆ.

ಕಳೆದ ವಾರ, ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ಹಾರ್ಡ್‌ವೇರ್ ಅಂಗಡಿಯನ್ನು ದರೋಡೆ ಮಾಡಲಾಗಿತ್ತು. ದರೋಡೆ ಮಾಡಿದ ನಂತರ ಕಳ್ಳನೊಬ್ಬ ಡ್ಯಾನ್ಸ್ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಈ ಘಟನೆಯು ಪೊಲೀಸ್ ವರಿಷ್ಠಾಧಿಕಾರಿ ನಿವಾಸದ ಬಳಿ ನಡೆದಿತ್ತು.

ಕಳ್ಳನು ಅಂಗಡಿಯಲ್ಲಿದ್ದ ಎಲ್ಲಾ ನಗದನ್ನು ಕದ್ದಿದ್ದಲ್ಲದೆ, ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿದ್ದಾನೆ ಎಂದು ಅಂಗಡಿ ಮಾಲೀಕ ಅಂಶು ಸಿಂಗ್ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಮರುದಿನ ಷಟರ್ ಮುರಿದಿರುವುದನ್ನು ಗಮನಿಸಿದ ಅಂಶು ಸಿಂಗ್ ಅಂಗಡಿ ತೆರೆದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಪರಾಧ ಬಯಲಾಗಿದೆ.

ಇದನ್ನೂ ಓದಿ: ತಮಿಳುನಾಡು: ತನ್ನ ಕಾರಿಗೆ ತಾನೇ ಬೆಂಕಿ ಹಚ್ಚಿ, ಪೆಟ್ರೋಲ್ ಬಾಂಬ್ ಹಾಕಿದ್ದಾರೆಂದು ನಾಟಕವಾಡಿದ್ದ ಬಿಜೆಪಿ ಮುಖಂಡನ ಬಂಧನ

ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳೀಯ ನಿವಾಸಿಗಳೊಂದಿಗೆ ಶಾಮೀಲಾಗಿ 500 ಟನ್ ತೂಕದ ಸೇತುವೆಯನ್ನು ಕೆಡವಿದ ಕಳ್ಳರ ತಂಡವು ಸರ್ಕಾರಿ ಅಧಿಕಾರಿಗಳಂತೆ ನಟಿಸಿ, ಬಳಕೆಯಲ್ಲಿಲ್ಲದ 60 ಅಡಿ ಉದ್ದದ ಉಕ್ಕಿನ ಸೇತುವೆಯನ್ನು ಕದ್ದಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಿಂದ ವರದಿಯಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...