HomeUncategorizedಬಿಹಾರ ಸಿಎಂ ಯಾರು? | ಇಂದು ತೀರ್ಮಾನ ಕೈಗೊಳ್ಳಿರುವ ಎನ್‌ಡಿಎ!

ಬಿಹಾರ ಸಿಎಂ ಯಾರು? | ಇಂದು ತೀರ್ಮಾನ ಕೈಗೊಳ್ಳಿರುವ ಎನ್‌ಡಿಎ!

ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ತೋರಿದ ಕಳಪೆ ಸಾಧನೆಯಿಂದಾಗಿ, ಸರ್ಕಾರದಲ್ಲಿ ನಿತೀಶ್ ಕುಮಾರ್ ಪಾತ್ರದ ಬಗ್ಗೆ ಊಹಾಪೋಹಗಳು ಹಬ್ಬಿದ್ದವು

- Advertisement -
- Advertisement -

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ನಾಯಕರು ಭಾನುವಾರ ಮಧ್ಯಾಹ್ನ 12.30 ಕ್ಕೆ ಸಭೆ ನಡೆಸಿ ಬಿಹಾರದಲ್ಲಿ ತನ್ನ ನಾಯಕನನ್ನು ಔಪಚಾರಿಕವಾಗಿ ಆಯ್ಕೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.

ಅನೌಪಚಾರಿಕ ಸಂವಾದಕ್ಕಾಗಿ ಎನ್‌ಡಿಎ ನಾಯಕರು ಶುಕ್ರವಾರ ನಿತೀಶ್‌ ಕುಮಾರ್ ನಿವಾಸದಲ್ಲಿ ಸೇರಿದ್ದರು. ನವೆಂಬರ್ 10 ರಂದು ಚುನಾವಣಾ ಫಲಿತಾಂಶಗಳನ್ನು ಘೋಷಿಸಿದ ನಂತರ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲು.

“ನಾವು ಒಟ್ಟಿಗೆ ಕುಳಿತು ಎಲ್ಲಾ ನಾಲ್ಕು ಮೈತ್ರಿ ಒಕ್ಕೂಟದ ಚುನಾಯಿತ ಶಾಸಕರ ಸಭೆಯನ್ನು ನವೆಂಬರ್ 15 ರಂದು ಮಧ್ಯಾಹ್ನ 12.30 ಕ್ಕೆ ಕರೆಯಲು ನಿರ್ಧರಿಸಿದ್ದೇವೆ. ಆ ಸಭೆಯಲ್ಲಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಎನ್‌ಡಿಎ ಮುಖಂಡರ ಸಭೆ ಮತ್ತು ಚುನಾವಣೆಯ ನಂತರ, ನಾವು ಸರ್ಕಾರ ರಚಿಸುತ್ತೇವೆ”ಎಂದು ನಿತೀಶ್‌ ಕುಮಾರ್ ಹೇಳಿದರು.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ತಪ್ಪು ಮಾಹಿತಿ ನೀಡುವ 3 ಲಕ್ಷ ಟ್ವೀಟ್‌ಗಳನ್ನು ನಿರ್ಬಂಧಿಸಿದ ಟ್ವಿಟರ್‌!

ಭಾರತೀಯ ಜನತಾ ಪಕ್ಷ (ಬಿಜೆಪಿ), ಜನತಾದಳ (ಯುನೈಟೆಡ್), ಹಿಂದೂಸ್ತಾನಿ ಏವಂ ಮೋರ್ಚಾ-ಸೆಕ್ಯುಲರ್ (ಎಚ್‌ಎಎಂ) ಮತ್ತು ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಒಳಗೊಂಡ ಎನ್‌ಡಿಎ, 243 ಸದಸ್ಯರ ವಿಧಾನಸಭೆಯಲ್ಲಿ 125 ಸ್ಥಾನಗಳನ್ನು ಗೆದ್ದಿದೆ.

ಬಿಜೆಪಿ ಮಾತ್ರ 74 ಸ್ಥಾನಗಳಲ್ಲಿ ಜಯಗಳಿಸಿದೆ. 2015 ರಲ್ಲಿ 71 ಶಾಸಕರನ್ನು ಹೊಂದಿದ್ದ ಜೆಡಿಯು 43 ಸ್ಥಾನಗಳಿಗೆ ಸಂತೃಪ್ತಿಪಟ್ಟುಕೊಂಡಿದೆ. ಎಚ್‌ಎಎಂ-ಎಸ್ ಮತ್ತು ವಿಐಪಿ ತಲಾ ನಾಲ್ಕು ಸ್ಥಾನಗಳನ್ನು ಗೆದ್ದಿವೆ.

ಇದನ್ನೂ ಓದಿ: ಬಿಜೆಪಿಯ ಫ್ಯಾಸಿಸ್ಟ್ ಆಕ್ರಮಣವನ್ನು ಹಿಮ್ಮೆಟ್ಟಿಸಲು ಹೋರಾಟಕ್ಕೆ ಸಿದ್ಧರಾಗಿ: ಬಿಹಾರದ ಮುಂಚೂಣಿ ಎಡಪಕ್ಷ ಸಿಪಿಐ(ಎಂಎಲ್) ಕರೆ

ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ತೋರಿದ ಕಳಪೆ ಸಾಧನೆಯಿಂದಾಗಿ, ಸರ್ಕಾರದಲ್ಲಿ ನಿತೀಶ್ ಕುಮಾರ್ ಪಾತ್ರದ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಆದರೆ, ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಭರವಸೆಯನ್ನು ಅಮಿತ್ ಶಾ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಹಲವಾರು ಸಂದರ್ಭಗಳಲ್ಲಿ ಖಚಿತಪಡಿಸಿದ್ದಾರೆ.

ಭಾನುವಾರದ ಸಭೆ ನಿತೀಶ್ ಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಮತ್ತೊಮ್ಮೆ ಆಯ್ಕೆ ಮಾಡಲು ಮತ್ತು ಪ್ರಮಾಣವಚನ ಸಮಾರಂಭದ ದಿನಾಂಕವನ್ನು ನಿರ್ಧರಿಸಲು ಒಂದು ಘಟನೆಯಾಗಿರಬಹುದು. ಸಭೆಯಲ್ಲಿ ಮೈತ್ರಿಕೂಟಕ್ಕೆ ಸಂಬಂಧಿಸಿದ ನಿರ್ಣಾಯಕ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.


ಇದನ್ನೂ ಓದಿ: ನೆರೆ ಪರಿಹಾರ ಕೊಡದಿದ್ದರೆ ರಾಜ್ಯದಾದ್ಯಂತ ತೀವ್ರ ಹೋರಾಟ – ಕರವೇ ಟಿ.ಎ.ನಾರಾಯಣಗೌಡರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...