Homeಮುಖಪುಟಪ್ರಯಾಣಕ್ಕೂ ಮುನ್ನ ಯೋಚಿಸಿ: ಬುಕ್‌ ಮಾಡಿದ ಟ್ರೈನ್‌ ಟಿಕೆಟ್‌ ರದ್ದುಗೊಳಿಸಿದರೆ ಜಿಎಸ್‌ಟಿ ಭಾರ!

ಪ್ರಯಾಣಕ್ಕೂ ಮುನ್ನ ಯೋಚಿಸಿ: ಬುಕ್‌ ಮಾಡಿದ ಟ್ರೈನ್‌ ಟಿಕೆಟ್‌ ರದ್ದುಗೊಳಿಸಿದರೆ ಜಿಎಸ್‌ಟಿ ಭಾರ!

- Advertisement -
- Advertisement -

ಬುಕ್ಕಿಂಗ್‌ ಮಾಡಲಾದ ಟ್ರೈನ್‌ ಟಿಕೆಟ್ ರದ್ದು ಮಾಡಿದರೆ ಗ್ರಾಹಕರು ನಿರ್ದಿಷ್ಟ ಪ್ರಮಾಣದ ಜಿಎಸ್‌ಟಿ ಭಾರವನ್ನು ಹೊರಬೇಕಾಗಿದೆ. ಆಗಸ್ಟ್ 3 ರಂದು ಹಣಕಾಸು ಸಚಿವಾಲಯ ಹೊರಡಿಸಿದ ಸುತ್ತೋಲೆ ಈ ಕುರಿತು ತಿಳಿಸಿದೆ.

ಹಣಕಾಸು ಸಚಿವಾಲಯದ ತೆರಿಗೆ ಸಂಶೋಧನಾ ಘಟಕವು ಹೊರಡಿಸಿದ ಸುತ್ತೋಲೆಯ ಪ್ರಕಾರ, ಬುಕಿಂಗ್ ಟಿಕೆಟ್‌ಗಳು ‘ಒಪ್ಪಂದ’ ಆಧಾರದಲ್ಲಿ ಆಗಿರುತ್ತವೆ. ಅದರ ಅಡಿಯಲ್ಲಿ ಐಆರ್‌ಸಿಟಿಸಿ/ಭಾರತೀಯ ರೈಲ್ವೆ ಗ್ರಾಹಕರಿಗೆ ಸೇವೆಗಳನ್ನು ಒದಗಿಸುವುದಾಗಿ ಭರವಸೆ ನೀಡಿರುತ್ತದೆ ಎಂದು ಪ್ರಸ್ತಾಪಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅಧಿಸೂಚನೆಯ ಪ್ರಕಾರ ಫಸ್ಟ್ ಕ್ಲಾಸ್ ಅಥವಾ ಎಸಿ ಕೋಚ್ ಟಿಕೆಟ್‌ ರದ್ದು ಮಾಡಿದರೆ ಶೇಕಡಾ 5 ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಇದೇ ನಿಯಮ ವಿಮಾನ ಪ್ರಯಾಣ ಅಥವಾ ಹೋಟೆಲ್ ವಾಸ್ತವ್ಯದ ಬುಕ್ಕಿಂಗ್‌ ರದ್ದತಿಗೂ ಅನ್ವಯವಾಗುತ್ತದೆ.

ರದ್ದತಿ ಶುಲ್ಕವು ಒಪ್ಪಂದದ ಉಲ್ಲಂಘನೆಯ ಬದಲಿಗೆ ನೀಡುವ ಪಾವತಿಯಾಗಿರುತ್ತದೆ. ಆದ್ದರಿಂದ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಟಿಕೆಟ್ ರದ್ದುಗೊಳಿಸಿದರೆ ರದ್ದತಿ ಶುಲ್ಕದ ಮೇಲೆ ಶೇಕಡಾ 5 ರಷ್ಟು ಜಿಎಸ್‌ಪಿ ಪಾವತಿಸಬೇಕಾಗುತ್ತದೆ.

“ಪ್ರಯಾಣಿಕರಿಂದ ಒಪ್ಪಂದದ ಉಲ್ಲಂಘನೆಯಾದಾಗ ಸೇವಾ ಪೂರೈಕೆದಾರರಿಗೆ ಸಣ್ಣ ಮೊತ್ತದಲ್ಲಿ ಪರಿಹಾರವನ್ನು ನೀಡಲಾಗುತ್ತದೆ. ರದ್ದತಿ ಶುಲ್ಕವಾಗಿ ಅದನ್ನು ಸಂಗ್ರಹಿಸಲಾಗುತ್ತದೆ. ರದ್ದತಿ ಶುಲ್ಕವು ಪಾವತಿಯಾಗುವುದರಿಂದ ಒಪ್ಪಂದದ ಉಲ್ಲಂಘನೆಯಾಗುವುದಿಲ್ಲ” ಎಂದು ಅಧಿಸೂಚನೆಯನ್ನು ತಿಳಿಸಲಾಗಿದೆ.

ಇದನ್ನೂ ಓದಿರಿ: ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯರಿಗೆ ‘ನ್ಯಾಯ’ ದೊರಕಬೇಕು: ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದ ಲೆಹರ್‌ ಸಿಂಗ್‌

ರೈಲಿನ ಹೊರಡುವ 48 ಗಂಟೆಗಳು ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಮೊದಲು ಟಿಕೆಟ್ ಅನ್ನು ರದ್ದುಗೊಳಿಸಿದಾಗ ಭಾರತೀಯ ರೈಲ್ವೆಯು ರದ್ದತಿಗೆ 240 ರೂಪಾಯಿಗಳನ್ನು ವಿಧಿಸುತ್ತದೆ. ರೈಲು ಹೊರಡುವ 48 ಗಂಟೆಗಳಿಂದ 12 ಗಂಟೆಗಳ ಒಳಗೆ ಟಿಕೆಟ್‌ ರದ್ದುಗೊಳಿಸಿದರೆ, ಟಿಕೆಟ್ ಮೊತ್ತದ ಶೇಕಡಾ 25ರಷ್ಟನ್ನು ರದ್ದತಿ ಶುಲ್ಕವಾಗಿ ವಿಧಿಸಲಾಗುತ್ತದೆ.

ಪ್ರಥಮ ದರ್ಜೆ ಅಥವಾ ಹವಾನಿಯಂತ್ರಿತ ಕೋಚ್ ಟಿಕೆಟ್‌ಗಳ ಮೇಲೆ 5 ಪ್ರತಿಶತ GST ವಿಧಿಸಲಾಗುತ್ತದೆ. ಆದ್ದರಿಂದ ಅದೇ ದರದಲ್ಲಿ ಜಿಎಸ್‌ಟಿಯನ್ನು ರದ್ದತಿ ಶುಲ್ಕವಾಗಿ ಅನ್ವಯಿಸುತ್ತದೆ. ಈ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಪ್ರಯಾಣಿಕರು ಶೇ 5ರಷ್ಟು ಜಿಎಸ್‌ಟಿ ಪಾವತಿಸಿರುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...