Homeಮುಖಪುಟಇದು ಮೋದಿ ಕಲ್ಪನೆಯ ಭಾರತವಲ್ಲ: ಗೋವಾ ತೊರೆದ ಫ್ರೆಂಚ್ ನಟಿ

ಇದು ಮೋದಿ ಕಲ್ಪನೆಯ ಭಾರತವಲ್ಲ: ಗೋವಾ ತೊರೆದ ಫ್ರೆಂಚ್ ನಟಿ

- Advertisement -
- Advertisement -

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಗೋವಾದ ತನ್ನ ಸ್ವಂತ ಮನೆಯಲ್ಲಿ ತನ್ನನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂದು 75 ವರ್ಷದ ಫ್ರೆಂಚ್ ನಟಿ ಆರೋಪಿಸಿದ್ದಾರೆ. ಇದೀಗ ಅವರು ಆವರಣವನ್ನು ತೊರೆದಿದ್ದಾರೆ ಮತ್ತು ಭಾರತದ ಪ್ರವಾಸೋದ್ಯಮ ಸ್ನೇಹಿ ಚಿತ್ರಣವನ್ನು ರಚಿಸಲು ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳ ಹೊರತಾಗಿಯೂ ಅವರು ನಿರಾಶೆಗೊಂಡಿದ್ದಾರೆ.

ಮೇರಿಯಾನ್ನೆ ಬೊರ್ಗೊ ಗುರುವಾರ ರಾತ್ರಿ ಈ ವಿಚಾರ ಹೊರಹಾಕಿದ್ದು, ‘ಪ್ರವಾಸಿಗರಲ್ಲಿ ಜನಪ್ರಿಯವಾಗಿರುವ ಪಣಜಿ ಬಳಿಯ ಕಡಲತೀರದ ಪಟ್ಟಣ ಕ್ಯಾಲಂಗುಟ್‌ನಲ್ಲಿರುವ ಬಂಗಲೆಯನ್ನು ಬಿಡುತ್ತಿದ್ದೇನೆ. ಏಕೆಂದರೆ ಹಿಂದಿನ ಮಾಲೀಕರ ಹೆಂಡತಿ 11-ದಿನಗಳ ದಿಗ್ಬಂಧನದಲ್ಲಿಟ್ಟಿದ್ದರು ಎಂದು ಆರೋಪಿಸಿದ್ದಾರೆ..

ತನ್ನ ಮನೆಯಲ್ಲೇ ತನ್ನನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. ಆಕೆಯ ಆಸ್ತಿಯ ಮೇಲೆ ಹಕ್ಕು ಸಾಧಿಸಿದ ಜನರು ಮನೆಯ ವಿದ್ಯುತ್ ಮತ್ತು ನೀರಿನ ಸಂಪರ್ಕಗಳನ್ನು ಕಡಿತಗೊಳಿಸಿದ್ದಾರೆ. ಇದರಿಂದ ಅವಳನ್ನು ಕತ್ತಲೆಯಲ್ಲಿ ಬದುಕಬೇಕು ಎಂದು ಕಳೆದ ವಾರ ಆಕೆ ಆರೋಪಿಸಿದ್ದಳು.

ಮೇರಿಯಾನ್ನೆ ಬೊರ್ಗೊ ಅವರು ಸರಿಯಾದ ಸ್ನಾನವಿಲ್ಲದೆ ಇನ್ನು ಮುಂದೆ ಇರಲು ಸಾಧ್ಯವಿಲ್ಲ ಮತ್ತು ಪ್ರಸ್ತುತ ಪರಿಸ್ಥಿತಿಗಳಿಂದಾಗಿ ಅವರ ಆರೋಗ್ಯವು ಹದಗೆಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: 500ಕ್ಕೂ ಹೆಚ್ಚು ವಿಜ್ಞಾನಿಗಳು, ಶಿಕ್ಷಣತಜ್ಞರಿಂದ ಖಂಡನೆ

”ಇದು ಮೋದಿಯವರ ಭಾರತದ ಕಲ್ಪನೆಯಲ್ಲ. ಅವರು ಸಕಾರಾತ್ಮಕ ಪ್ರವಾಸೋದ್ಯಮ ಸ್ನೇಹಿ ಚಿತ್ರಣವನ್ನು ಸೃಷ್ಟಿಸಲು ಪ್ರಪಂಚದಾದ್ಯಂತ ಕೆಲಸ ಮಾಡುತ್ತಿದ್ದಾರೆ ಆದರೆ ಇತ್ತೀಚಿನ ಘಟನೆಗಳು ನನಗೆ ನಿರಾಶೆಯನ್ನುಂಟು ಮಾಡಿದೆ, ಏಕೆಂದರೆ ಮೋದಿ ಸಾಧನೆಗಳು ಗೋವಾದಂತಹ ರಾಜ್ಯ ಮಟ್ಟಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿವಾದ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸ್ಥಳೀಯ ಪೊಲೀಸರು ಪ್ರತಿಪಾದಿಸಿದ್ದರು.

ಬೋರ್ಗೊ (ಚಿಚೆರಿಯೊ) ಅವರು 2008 ರಲ್ಲಿ ಫ್ರಾನ್ಸಿಸ್ಕೊ ​​ಸೌಸಾ ಎಂಬ ವಕೀಲರಿಂದ ವಿಶಾಲವಾದ ಮನೆಯನ್ನು ಖರೀದಿಸಿದರು ಆದರೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸೌಸಾ ನಿಧನರಾದ ನಂತರ ಇವರಿಗೆ ಕೆಟ್ಟ ದಿನಗಳು ಶುರುವಾದವು.

ಬೊರ್ಗೊ ಅವರು, ಪ್ಯಾರಿಸ್ ಮೂಲದ ಸೆಂಟರ್ ಡಿ ಆರ್ಟೆ ಡ್ರಾಮಾಟಿಕ್ ಮತ್ತು ಕನ್ಸರ್ವೇಟೋಯರ್ ನ್ಯಾಷನಲ್ ಡಿ ಆರ್ಟೆ ಡ್ರಾಮಾಟಿಕ್ (ನ್ಯಾಷನಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್)ನಲ್ಲಿ ತರಬೇತಿ ಪಡೆದಿದ್ದಾರೆ. ಯುರೋಪ್ ಮತ್ತು ಭಾರತದಾದ್ಯಂತ ಚಲನಚಿತ್ರಗಳು, ದೂರದರ್ಶನ ಮತ್ತು ರಂಗಭೂಮಿಯಲ್ಲಿ ವ್ಯಾಪಕವಾಗಿ ಅವರು ಕೆಲಸ ಮಾಡಿದ್ದಾರೆ.

ಅವರು ಫ್ರೆಂಚ್ ಥ್ರಿಲ್ಲರ್ ಸರಣಿ “ಪ್ರೊಫೈಲೇಜ್”ನಲ್ಲಿ ಮರುಕಳಿಸುವ ಪಾತ್ರವಾಗಿದ್ದರು ಮತ್ತು ಇತ್ತೀಚೆಗೆ ಭಾರತೀಯ ನಿರ್ಮಾಣ “ಡ್ಯಾನಿ ಗೋಸ್ ಓಮ್” ನಲ್ಲಿ ನಾಯಕಿಯಾಗಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...