Homeಕರ್ನಾಟಕಈ ಬಾರಿಯ ಬಜೆಟ್ ಗಾತ್ರ 3.35 ಲಕ್ಷ ಕೋಟಿಗೆ ಏರಿಕೆ ಸಾಧ್ಯತೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ ಬಜೆಟ್ ಗಾತ್ರ 3.35 ಲಕ್ಷ ಕೋಟಿಗೆ ಏರಿಕೆ ಸಾಧ್ಯತೆ: ಸಿಎಂ ಸಿದ್ದರಾಮಯ್ಯ

- Advertisement -
- Advertisement -

ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಬಜೆಟ್ ಮಂಡನೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಈ ಕುರಿತು ಆರ್ಥಿಕ ಇಲಾಖೆಯ ಜವಾಬ್ದಾರಿ ನಿರ್ವಹಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರೇ ಕೆಲ ಸುಳಿವುಗಳನ್ನು ಖುದ್ದು ಬಿಟ್ಟುಕೊಟ್ಟಿದ್ದಾರೆ. ಈ ಬಾರಿ ಬಜೆಟ್ ಗಾತ್ರ 3.35 ಲಕ್ಷ ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

”ಕೆಂಗಲ್ ಹನುಮಂತಯ್ಯ ಬಜೆಟ್ ಮಂಡಿಸುವಾಗ ಕರ್ನಾಟಕದ ಬಜೆಟ್ ಗಾತ್ರ 21 ಕೋಟಿ ರೂಪಾಯಿ ಇತ್ತು. ಇತ್ತೀಚೆಗೆ ಮಂಡಿಸಲಾಗ ಬಜೆಟ್ ಗಾತ್ರ 3.9 ಲಕ್ಷ ಕೋಟಿ ರೂಪಾಯಿ. ಆದರೆ ಈ ಬಾರಿ ಮಂಡಿಸಲಿರುವ ಬಜೆಟ್ ಗಾತ್ರ 30 ರಿಂದ 35 ಸಾವಿರ ಕೋಟಿ ರೂಪಾಯಿ ಹೆಚ್ಚಾಗಲಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

”ನಾವು 5 ಗ್ಯಾರೆಂಟಿ ಘೋಷಣೆ ಮಾಡಿದ್ದೇವೆ. ಇದಕ್ಕಾಗಿ ಹಣ ಹೊಂದಿಸಬೇಕಿದೆ. ಹೀಗಾಗಿ ಬಜೆಟ್ ಗಾತ್ರ ವಿಸ್ತರಣೆಯಾಗಲಿದೆ. 5 ಗ್ಯಾರಂಟಿ ಜಾರಿಗೆ ಸುಮಾರು 59-60 ಸಾವಿರ ಕೋಟಿ ರೂಪಾಯಿ ಹಣ ಬೇಕಾಗಲಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

”ಆದಾಯದ ವೃದ್ಧಿಗೆ ಸಾಮಾನ್ಯ ಜನರಿಗೆ ಹೊರೆಯಾಗದಂತೆ ಹೇಗೆ ತೆರಿಗೆ ವಿಧಿಸಬೇಕು ಎನ್ನುವುದನ್ನು ಮಹಾಭಾರತದ ಭೀಷ್ಮ, ಯುಧಿಷ್ಠರನಿಗೆ ಬೋಧಿಸಿದ್ದಾರೆ. ರಾಜ್ಯ ಸರ್ಕಾರವೂ ತೆರಿಗೆ ಭರಿಸುವ ಶಕ್ತಿ ಇರುವವರಿಂದ ತೆರಿಗೆ ಸಂಗ್ರಹಿಸಲು ಆದ್ಯತೆ ನೀಡಲಿದೆ. ಬಸವಣ್ಣನವರು ಹೇಳಿದಂತೆ ಕಾಯಕ ಮತ್ತು ದಾಸೋಹ ಬಜೆಟ್‌ನ ಪ್ರಮುಖ ಸಂಗತಿಗಳು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ” ಎಂದು ವಿಶ್ಲೇಷಿಸಿದರು.

”1994ರಲ್ಲಿ ಮೊದಲ ಬಾರಿ ಹಣಕಾಸು ಸಚಿವನಾಗಿ ಬಜೆಟ್ ಮಂಡಿಸುವಾಗ ಪತ್ರಿಕೆಯೊಂದು ಲೇವಡಿ ಮಾಡಿತ್ತು. 100 ಕುರಿ ಎಣಿಸಲು ಬಾರದವರು ಬಜೆಟ್‌ ಮಂಡಿಸಲಿದ್ದಾರೆ ಎಂಬ ಟೀಕೆಯನ್ನು ಸವಾಲಾಗಿ ಸ್ವೀಕರಿಸಿದ್ದೆ. ಆರ್ಥಿಕ ತಜ್ಞರು, ಚಿಂತಕರ ಸಲಹೆ, ಸಹಕಾರ ಪಡೆದು ರಾಜ್ಯದ ಆರ್ಥಿಕತೆಯನ್ನು ಯಶಸ್ವಿಯಾಗಿ ನಿಭಾಯಿಸಿದೆ. ಇನ್ನೊಂದು ಪತ್ರಿಕೆ ಅತ್ಯುತ್ತಮ ಬಜೆಟ್ ಎಂದು ಶ್ಲಾಘಿಸಿ ಸಂಪಾದಕೀಯ ಬರೆಯಿತು. ಆ ಸಮಯದಲ್ಲಿ ವಾಟಾಳ್, ಜಯಪ್ರಕಾಶ್ ರೆಡ್ಡಿ, ಮಾಧುಸ್ವಾಮಿ ಕೂಡ ಇದ್ದರು” ಎಂದು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು.

ಜುಲೈ ತಿಂಗಳಲ್ಲಿ ನೂತನ ಬಜೆಟ್ ಮಂಡಿಸಲಾಗುತ್ತದೆ. ಅದು ಆಗಸ್ಟ್ 1ರಿಂದ ಜಾರಿಯಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಸದನದಲ್ಲಿನ ಹಾಜರಾತಿ, ನೂತನ ಶಾಸಕರ ಕಾರ್ಯಗಳು, ಜನಸ್ಪಂದನೆ, ಕೆಲಸಗಳ ಅಚ್ಚಕಟ್ಟಾಗಿ ಮಾಡುವ ರೀತಿ ಕುರಿತು ಸಲಹೆ ನೀಡಿದ್ದಾರೆ.

”ನಾನು ಸಿಎಂ ಆಗಿ ಕಾರ್ಯನಿರ್ವಹಿಸಿದ್ದೇನೆ,ವಿರೋಧ ಪಕ್ಷದ ನಾಯಕನಾಗಿಯೂ ಸೇವೆ ಸಲ್ಲಿಸಿದ್ದೇನೆ. ಈ ಅನುಭವದ ಮೂಲಕ ಹೇಳುತ್ತೇನೆ. ನನ್ನ ಮಾತು ಯಾವಾಗಲು ಒರಟು, ಆದರೆ ಸತ್ಯವಾಗಿರುತ್ತದೆ ಎಂದು ಸಿದ್ದು ಹೇಳಿದ್ದಾರೆ. ನೂತನ ಶಾಸಕರಿಗೆ ವಾಟಾಳ್ ನಾಗರಾಜ್ ಶಾಸಕರಾಗಿ ಸದನದಲ್ಲಿ ನಡೆದುಕೊಂಡ ರೀತಿಯನ್ನು ಹೇಳಿದ್ದಾರೆ. ವಾಟಾಳ್ ನಾಗರಾಜ್ ಯಾವಾಗಲೂ ಸದನ ಬಿಟ್ಟು ಹೋಗುತ್ತಿರಲ್ಲಿಲ್ಲ. ನಾನು ಇಷ್ಟು ದಿನ ಶಾಸಕನಾಗಿದ್ದೇನೆ ಅಲ್ವಾ ಕೇವಲ 4-5 ದಿನ ಮಾತ್ರ ಬಂದಿರಲಿಲ್ಲ. ಎಲ್ಲರೂ ಸದನಕ್ಕೆ ತಪ್ಪದೆ ಬರಬೇಕು. ಸರ್ಕಾರದ ಕೆಲಸದಲ್ಲಿ ನಿರಂತರವಾಗಿ ಸ್ಪಂದಿಸಬೇಕು” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...