ವಿಡಿಯೊ➤ ಶಿಕಾರಿಪುರ ಬಂದ್; ಪ್ರಧಾನಿ ಮೋದಿಗೆ ಧಿಕ್ಕಾರ ಕೂಗಿದ ಬಿಎಸ್‌ವೈ ಬೆಂಬಲಿಗರು!ವಿಡಿಯೊ➤ ಶಿಕಾರಿಪುರ ಬಂದ್; ಪ್ರಧಾನಿ ಮೋದಿಗೆ ಧಿಕ್ಕಾರ ಕೂಗಿದ ಬಿಎಸ್‌ವೈ ಬೆಂಬಲಿಗರು!

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಘೋಷಿಸಿದ್ದಾರೆ. ಕಳೆದ ಬುಧವಾರವಷ್ಟೇ ತನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ಬಿಎಸ್‌ವೈ ಹೇಳಿದ್ದರೂ, ಅವರ ಸ್ವಕ್ಷೇತ್ರವಾದ ಶಿವಮೊಗ್ಗದ ಶಿಕಾರಿಪುರದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಶಿಕಾರಿಪುರ ಬಾಗಶಃ ಬಂದ್ ಮಾಡಲಾಗಿದ್ದು, ಬೀದಿಗಿಳಿದಿರುವ ಬಿಎಸ್‌ವೈ ಬೆಂಬಲಿಗರು ಹೈಕಮಾಂಡ್ ಸೇರಿದಂತೆ ಪ್ರಧಾನಿ ಮೋದಿಗೆ ಧಿಕ್ಕಾರ ಕೂಗಿದ್ದಾರೆ.

ಸೋಮವಾರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ 2 ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಊಟದ ನಂತರ ನಾನು ರಾಜ್ಯಪಾಲರನ್ನು ಭೇಟಿಯಾಗುತ್ತೇನೆ, ರಾಜೀನಾಮೆ ಪತ್ರ ಸಲ್ಲಿಸುತ್ತೇವೆ” ಎಂದು ಘೋಷಿಸಿದ್ದರು.

ಇದನ್ನೂ ಓದಿ: ಯಡಿಯೂರಪ್ಪ ರಾಜೀನಾಮೆ; ಮುಂದಿನ ಮುಖ್ಯಮಂತ್ರಿ ಹೆಸರಿನ ಊಹೆಗಿಂತ ಕರ್ನಾಟಕದ ಸ್ಥಿತಿ ಚರ್ಚೆಯಾಗಬೇಕಿದೆ!

ಕಣ್ಣೀರಿಡುತ್ತಾ ಮಾತನಾಡಿದ ಅವರು, “75 ವರ್ಷ ದಾಟಿದ ಯಡಿಯೂರಪ್ಪನವರನ್ನು ಮತ್ತೆ ಎರಡು ವರ್ಷ ಮುಖ್ಯಮಂತ್ರಿ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಅಮಿತ್‌ ಶಾರವರಿಗೆ, ಜೆ.ಪಿ ನಡ್ಡಾರವರಿಗೆ ಧನ್ಯವಾದ ತಿಳಿಸುತ್ತೇನೆ, ಅವರಿಗೆ ನಾನು ಋಣಿಯಾಗಿದ್ದೇನೆ. ಮುಂದೆಯೇ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ಅವರ ನಿರೀಕ್ಷೆಯಂತೆ ಕೆಲಸ ಮಾಡೋಣ. ನಾನು ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ ಬದಲಿಗೆ ಸಂತೋಷದಿಂದ ರಾಜೀನಾಮೆ ನೀಡುತ್ತಿದ್ದೇನೆ” ಎಂದಿದ್ದರು.

ನಂತರ ಟ್ವೀಟ್ ಮಾಡಿದ್ದ ಅವರು, “ನಾನು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ರಾಜ್ಯದ ಜನರ ಬೆಂಬಲದಿಂದ, ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್‌ ಶಾ ಅವರ ಸಹಕಾರದಿಂದ, ಎಲ್ಲಾ ಶಾಸಕರು, ಪಕ್ಷದ ನೆರವಿನಿಂದ 2 ವರ್ಷ ಅಭಿವೃದ್ಧಿ ಪರ ಆಡಳಿತ ನೀಡಲು ಶಕ್ತಿಮೀರಿ ಪ್ರಯತ್ನ ನಡೆಸಿದ ತೃಪ್ತಿ ನನಗಿದೆ” ಎಂದು ಹೇಳಿದ್ದರು.

ಅದರಂತೆ ಅವರು ರಾಜೀನಾಮೆಯನ್ನೂ ಕೂಡಾ ನೀಡಿದ್ದರು. ಕಳೆದೊಂದು ವಾರದಿಂದ ರಾಜೀನಾಮೆ ಚರ್ಚೆ ಗರಿಗೆದರುತ್ತಿದ್ದಾಗಲೇ ಅವರು, “ರಾಜಕೀಯ ಬೆಳವಣಿಗೆಗಳನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ. ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು. ಪಕ್ಷ ನನಗೆ ಮಾತೃ ಸಮಾನ,ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ” ಎಂದು ಹೇಳಿದ್ದರು.

ಇದನ್ನೂ ಓದಿ: ಒಬ್ಬ ಭ್ರಷ್ಟನ ಬದಲು ಮತ್ತೊಬ್ಬ ಭ್ರಷ್ಟ: ಸಿಎಂ ಬದಲಾವಣೆ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ

ಆದರೆ ಅವರ ಹೇಳಿಕೆಯ ಹೊರತಾಗಿಯೂ ಅವರ ಸ್ವಕ್ಷೇತ್ರವಾದ ಶಿಕಾರಿಪುರ ಇಂದು ಭಾಗಶಃ ಬಂದ್ ಆಗಿದೆ. ಅವರ ಬೆಂಗಲಿಗರು ರಸ್ತೆಯಲ್ಲಿ ನೆರೆದು ಬಿಜೆಪಿ ಹೈಕಮಾಂಡ್, ಪ್ರಧಾನಿ ಮೋದಿ ಹಾಗೂ ‘ಬಿಎಸ್‌ವೈಯ ಬೆನ್ನಿಗೆ ಚೂರಿ ಹಾಕಿದವರಿಗೆ’ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ರಾಜೀನಾಮೆ ಶಿಕಾರಿಪುರಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾಡಿದ ಅನ್ಯಾಯ ಎಂದು ಬೆಂಬಲಿಗರು ಪ್ರತಿಪಾದಿಸಿದ್ದಾರೆ.

ಇಷ್ಟೇ ಅಲ್ಲದೆ ರಾಜ್ಯದಾದ್ಯಂತ ಬಿಎಸ್‌ವೈ ಅವರ ಬೆಂಬಲಿಗರು ರಾಜೀನಾಮೆಗೆ ಆಕ್ರೋಶಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ದ ಕಿಡಿಕಾರುತ್ತಿದ್ದಾರೆ. ಅಲ್ಲದೆ ನಿನ್ನೆಯಷ್ಟೇ ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಸಭೆಯನ್ನು ನಡೆಸಿ, ಅವರ ರಾಜೀನಾಮೆ ಪಡೆಯಬಾರದು ಎಂದು ಒತ್ತಾಯಿಸಿದ್ದರು. ಅದಾಗ್ಯೂ ಯಡಿಯೂಪಪ್ಪ ಅವರ ರಾಜೀನಾಮೆ ಪಡೆಯಲಾಗಿದೆ.

ರಾಜೀನಾಮೆ ನಂತರ ಬಿಎಸ್‌ವೈ ಅವರಿಗೆ ಯಾವುದಾದರೂ ರಾಜ್ಯದ ರಾಜ್ಯಪಾಲ ಹುದ್ದೆಯನ್ನು ನೀಡುವುದಾಗಿ ಹೇಳಲಾಗಿತ್ತು. ಆದರೆ ಅವರು ತಾನೂ ರಾಜ್ಯದಲ್ಲೇ ಇರುತ್ತೇನೆ, ತನಗೆ ರಾಜ್ಯಪಾಲ ಹುದ್ದೆ ಬೇಡ ಎಂದು ಹೇಳಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: ಬಿಎಸ್‌ವೈ ರಾಜೀನಾಮೆ: ಮುಂದಿನ ಮುಖ್ಯಮಂತ್ರಿ ಯಾರು?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

1 COMMENT

  1. ಪ್ರಜಾಪ್ರಭುತ್ವದಲ್ಲಿ ಕೂಡಾ,
    1. ಪಕ್ಷದ ನಾಯಕನನ್ನು ಆಯ್ಕೆಯಾದ ವಿಧಾನಸಭಾ ಸದಸ್ಯರ ಬದಲು, ಡಿಕ್ ಮತ್ತು ಹ್ಯಾರಿ ಆಯ್ಕೆ ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ.
    2. ವಿಧಾನಸಭಾ ಸದಸ್ಯ ತನ್ನನ್ನು ಆಯ್ಕೆ ಮಾಡಿದ ಜನರಿಗಲ್ಲದೆ, ಡಿಕ್ ಮತ್ತು ಹ್ಯಾರಿಗೆ ಋಣಿಯಾಗಿರಬೇಕು ಎಂದು ಗೊತ್ತಿರಲಿಲ್ಲ.
    3. ಒಂದು ಪಕ್ಷದ ನಾಯಕನನ್ನು ಜೋಕರ್ ತರಹ ಬಳಸಬಹುದೆಂದು.

    ಭಾರತದ ಹಿಂದೂ ಧರ್ಮದಂತೆ, ಭಾರತದ ಪ್ರಜಾಪ್ರಭುತ್ವ, ಭೂಮಿಕೆಯಲ್ಲಿ ವಿಶಾಲ ಆದರೆ, ವಾಸ್ತವವಾಗಿ ನಪುಂಸಕ!

LEAVE A REPLY

Please enter your comment!
Please enter your name here