Homeಮುಖಪುಟ‘ನಂದಿಗ್ರಾಮ ದಿವಸ್‌‌’ ಆಚರಣೆ ಪ್ರಣಾಳಿಕೆ ಬಿಡುಗಡೆ ಮಾಡಲಿರುವ ಟಿಎಂಸಿ!

‘ನಂದಿಗ್ರಾಮ ದಿವಸ್‌‌’ ಆಚರಣೆ ಪ್ರಣಾಳಿಕೆ ಬಿಡುಗಡೆ ಮಾಡಲಿರುವ ಟಿಎಂಸಿ!

2007 ರ ಭೂಸ್ವಾಧೀನ ವಿರುದ್ದ ಚಳವಳಿಯ ಸಮಯದಲ್ಲಿ ಪೂರ್ವ ಮಿಡ್ನಾಪುರ್‌ನಲ್ಲಿ ಗುಂಡೇಟಿನಿಂದಾಗಿ ಮೃತಪಟ್ಟ ಗ್ರಾಮಸ್ಥರ ಗೌರವಾರ್ಥವಾಗಿ ಪಕ್ಷವು ಮಾರ್ಚ್‌‌ 17 ನ್ನು ‘ನಂದಿಗ್ರಾಮ‌ ದಿವಸ್’ ಎಂದು ಆಚರಿಸುತ್ತಾ ಬರುತ್ತಿದೆ.

- Advertisement -
- Advertisement -

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಶುಕ್ರವಾರ ಸಂಜೆ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ತೃಣಮೂಲ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಮಾರ್ಚ್ 14 ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

2007 ರ ಭೂಸ್ವಾಧೀನ ವಿರುದ್ದದ ಚಳವಳಿಯ ಸಮಯದಲ್ಲಿ ಪೂರ್ವ ಮಿಡ್ನಾಪುರ್‌ನಲ್ಲಿ ಗುಂಡೇಟಿನಿಂದಾಗಿ ಮೃತಪಟ್ಟ ಗ್ರಾಮಸ್ಥರ ಗೌರವಾರ್ಥವಾಗಿ ಪಕ್ಷವು ಮಾರ್ಚ್‌‌ 17 ನ್ನು ‘ನಂದಿಗ್ರಾಮ‌ ದಿವಸ್’ ಎಂದು ಆಚರಿಸುತ್ತಾ ಬರುತ್ತಿದೆ.

ಇದನ್ನೂ ಓದಿ: ಹತ್ರಾಸ್ ಪ್ರಕರಣ: ಸಿಎಎ ವಿರೋಧಿ ಮಹಿಳಾ ನಾಯಕಿಯರಿಗೆ ನೋಟಿಸ್!

“ನಂದಿಗ್ರಾಮದಿಂದ ಮುಖ್ಯಮಂತ್ರಿ ಸ್ಪರ್ಧಿಸುತ್ತಿರುವುದರಿಂದ, ನಂದಿಗ್ರಾಮ ದಿವಸದಂದೆ ಪ್ರಣಾಳಿಕೆ ಬಿಡುಗಡೆ ಮಾಡುವುದು ಬಲವಾದ ಸಂದೇಶವನ್ನು ನೀಡುತ್ತದೆ” ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ನಂದಿಗ್ರಾಮ ಚಳವಳಿಯ ಮೂಲಕ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯಲು ಪಕ್ಷವು ಪ್ರಯತ್ನಿಸುತ್ತಿರುವುದರಿಂದ ಪ್ರಣಾಳಿಕೆಯ ಬಿಡುಗಡೆಯ ದಿನಾಂಕ ಮಹತ್ವದ್ದಾಗಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಕೂಡಾ ಪ್ರಸ್ತುತ ಚುನಾವಣೆಗಳಲ್ಲಿ ಬಿಜೆಪಿ ವಿರುದ್ದ ಮತಚಲಾಯಿಸುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ. ಅಲ್ಲದೆ ನಂದಿಗ್ರಾಮದಲ್ಲಿ ರೈತ ಮುಖಂಡರು ರೈತಮಹಾಪಂಚಾಯತ್‌ ಸಮಾವೇಶವನ್ನೂ ಸಂಘಟಿಸಿದ್ದಾರೆ.

ಇದನ್ನೂ ಓದಿ: ಬಂಗಾಳ ಚುನಾವಣೆ: ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಟಿಎಂಸಿ ಸೇರ್ಪಡೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಎಇಒ ಕ್ರೈಸ್ತ ಧರ್ಮದವರಲ್ಲ

0
ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿ (ಎಇಒ) ಆಗಿ ಯೇಸುರಾಜ್ ನೇಮಕಗೊಂಡಿದ್ದಾರೆ. ರಾಮನಗರ ಜಿಲ್ಲಾ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇಸುರಾಜ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ...