Homeಮುಖಪುಟಪ.ಬಂಗಾಳದ ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿ ಜಯಭೇರಿ: 2,552 ಗ್ರಾಮ ಪಂಚಾಯತ್‌ಗಳಲ್ಲಿ ಗೆಲುವು

ಪ.ಬಂಗಾಳದ ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿ ಜಯಭೇರಿ: 2,552 ಗ್ರಾಮ ಪಂಚಾಯತ್‌ಗಳಲ್ಲಿ ಗೆಲುವು

- Advertisement -
- Advertisement -

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 3,317 ಗ್ರಾಮ ಪಂಚಾಯತ್‌ಗಳ ಪೈಕಿ 2,552 ರಲ್ಲಿ ಗೆಲುವು ಸಾಧಿಸಿದೆ ಎಂದು NDTV ವರದಿ ಮಾಡಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು 341 ಪಂಚಾಯತ್ ಸಮಿತಿಗಳಿಗೆ ನಡೆದ ಚುನುವಾಣೆಗಳಲ್ಲಿ 232 ಮತ್ತು 20 ಜಿಲ್ಲಾ ಪರಿಷತ್‌ಗಳಲ್ಲಿ 12ನ್ನು ಗೆದ್ದಿದೆ.

ಬಿಜೆಪಿಯು ಕೇವಲ 212 ಗ್ರಾಮ ಪಂಚಾಯತಿಗಳು, ಏಳು ಪಂಚಾಯತಿ ಸಮಿತಿಗಳು ಗೆದ್ದಿದೆ. ಇನ್ನು ಯಾವುದೇ ಜಿಲ್ಲಾ ಪರಿಷತ್ತುಗಳನ್ನು ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಎಡರಂಗವು 15 ಗ್ರಾಮ ಪಂಚಾಯತ್ ಮತ್ತು ಒಂದು ಜಿಲ್ಲಾ ಪರಿಷತ್ ಅನ್ನು ಗೆದ್ದಿದೆ. ಕಾಂಗ್ರೆಸ್ 26 ಗ್ರಾಮ ಪಂಚಾಯತಿಗಳನ್ನು ಪಡೆದುಕೊಂಡಿದೆ ಆದರೆ ಪಂಚಾಯತಿ ಸಮಿತಿಗಳು ಮತ್ತು ಜಿಲ್ಲಾ ಪರಿಷತ್‌ಗಳಲ್ಲಿ ಯಾವುದರಲ್ಲಿಯೂ ಗೆಲುವು ಕಂಡಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪಶ್ಚಿಮ ಬಂಗಾಳದ ಮೂರು ಹಂತದ ಪಂಚಾಯತ್ ವ್ಯವಸ್ಥೆಯ 73,887 ಸ್ಥಾನಗಳಿಗೆ ಜುಲೈ 8ರಂದು ಚುನಾವಣೆ ನಡೆಯಿತು. ಮತ ಎಣಿಕೆ ಮಂಗಳವಾರ ಆರಂಭಿಸಲಾಗಿತ್ತು.. ಚುನಾವಣೆಯ ಸಂದರ್ಭದಲ್ಲಿ ಹಿಂಸಾಚಾರದ ಘಟನೆಗಳು ನಡೆದವು. ಈ ಹಿಂಸಾಚಾರದಲ್ಲಿ ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ. ಈ ಹಿಂಸಾಚಾರದಲ್ಲಿ ಮತಪೆಟ್ಟಿಗೆಗಳನ್ನು ಧ್ವಂಸ ಮಾಡಲಾಗಿದೆ ಎನ್ನುವ ವರದಿಗಳು ಬಂದಿವೆ. ಹಿಂಸಾಚಾರದಿಂದಾಗಿ ಸೋಮವಾರ 696 ಬೂತ್‌ಗಳಲ್ಲಿ ಮರುಮತದಾನ ನಡೆಸಲಾಯಿತು. ಮಂಗಳವಾರವೂ ರಾಜ್ಯದ ವಿವಿಧೆಡೆ ಹಿಂಸಾಚಾರ ವರದಿಯಾಗಿದೆ.

ಟಿಎಂಸಿ ಪಕ್ಷದ ಅಭ್ಯರ್ಥಿಗಳು ಅತಿಹೆಚ್ಚು ಸ್ಥಾನಗಳಲ್ಲಿ ಗೆಲುವು ಕಂಡಿರುವುದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತದಾರರಿಗೆ ಧನ್ಯವಾದ ಅರ್ಪಿಸಿದರು. ”ತಮ್ಮ ಪಕ್ಷವು ಜನರ ಹೃದಯದಲ್ಲಿ ನೆಲೆಸಿದೆ” ಎಂದು ಹೇಳಿದ್ದಾರೆ.

”ರಾಜ್ಯದಲ್ಲಿ ವಿರೋಧ ಪಕ್ಷಗಳು ತೃಣಮೂಲ ಕಾಂಗ್ರೆಸ್ ವಿರುದ್ಧ ದುರುದ್ದೇಶಪೂರಿತ ಪ್ರಚಾರಗಳನ್ನು ಮಾಡಿದವು ಆದರೆ, ಅವರು ಮತದಾರರನ್ನು ಓಲೈಸಲು ಸಾಧ್ಯವಾಗಲಿಲ್ಲ” ಎಂದು ಟಿಎಂಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

”ಪ್ರತಿಪಕ್ಷಗಳ ‘ನೋ ವೋಟ್ ಟು ಮಮತಾ’ ಅಭಿಯಾನವನ್ನು ನಡೆಸಿದರು ಆದರೆ ಮತದಾರರು ಮಾತ್ರ ಅದನ್ನು ‘ಮಮತಾಗೆ ಮತ ನೀಡಿ’ ಎಂದು ಪರಿವರ್ತಿಸಿದ್ದಾರೆ. ಆವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಟಿಎಂಸಿ ಅಚಲ ಬೆಂಬಲದೊಂದಿಗೆ ಲೋಕಸಭಾ ಚುನಾವಣೆಯಲ್ಲಿ ನಾವು ಖಂಡಿತವಾಗಿಯೂ ಘರ್ಜಿಸುವ ಜನಾದೇಶವನ್ನು ಹೊಂದುತ್ತೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

 

 

ಇದನ್ನೂ ಓದಿ: ಪ.ಬಂಗಾಳ: ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿಗೆ ಭರ್ಜರಿ ಮುನ್ನಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...