HomeಮುಖಪುಟLGBTQIA+ ಕರಡು ನೀತಿ: ಜ.20ರಂದು ಸಾರ್ವಜನಿಕ ಸಮಾಲೋಚನೆ

LGBTQIA+ ಕರಡು ನೀತಿ: ಜ.20ರಂದು ಸಾರ್ವಜನಿಕ ಸಮಾಲೋಚನೆ

- Advertisement -
- Advertisement -

ತಮಿಳುನಾಡು LGBTQIA+ ಕರಡು ನೀತಿಯ ಕುರಿತು ಜನವರಿ 20ರಂದು ಚೆನ್ನೈನಲ್ಲಿ ಸಾರ್ವಜನಿಕ ಸಮಾಲೋಚನೆ ಸಭೆಯು ನಡೆಯಲಿದ್ದು,  ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ತೃತೀಯಲಿಂಗಿ ಕಲ್ಯಾಣ ಮಂಡಳಿಯು ಸಮಾಲೋಚನಾ ಸಭೆಗೆ ನೋಂದಾಯಿಸಲು ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಆಗ್ರಹಿಸಿದೆ.

ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರ ನೇತೃತ್ವದ 11 ಸದಸ್ಯರ ಸಮಿತಿಯು ಈ ನೀತಿಯನ್ನು ರೂಪಿಸಿದ್ದು, ಸಮಾಲೋಚನೆಯ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಕಳೆದ ವರ್ಷ ಜುಲೈನಲ್ಲಿ LGBTQIA+ ಸಮುದಾಯಕ್ಕೆ ನೀತಿಯನ್ನು ಸಿದ್ಧಪಡಿಸಲು ರಾಜ್ಯ ಸರ್ಕಾರವು ಕರಡು ಸಮಿತಿಯನ್ನು ರಚಿಸಿತ್ತು. ಜನವರಿ 20ರಂದು ಬೆಳಿಗ್ಗೆ 10.30ಕ್ಕೆ ಕಾಮರಾಜರ ಸಾಲಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಕರಡು ಕುರಿತು ಸಾರ್ವಜನಿಕ ಚರ್ಚೆ ನಡೆಯಲಿದೆ. ಸಭೆಯಲ್ಲಿ ಭಾಗವಹಿಸಲು ಆಸಕ್ತರು ಭಾಗವಹಿಸುವಿಕೆ ಬಗ್ಗೆ ನೋಂದಾಯಿಸಿಕೊಳ್ಳುವಂತೆ ಸರ್ಕಾರ ವಿನಂತಿಸಿದೆ. ನೋಂದಾಯಿಸಿದವರಿಗೆ ಮಾತ್ರ ಸಭೆಗೆ ಹಾಜರಾಗಲು ಅವಕಾಶವಿರುತ್ತದೆ.

ನೋಂದಾವಣೆಗೆ ಕ್ಲಿಕ್ ಮಾಡಿ:https://tg.tnsw.in/webapp/pmreg.aspx

ಅಕ್ಟೋಬರ್ 2022ರಲ್ಲಿ ರಾಜ್ಯ ಯೋಜನಾ ಆಯೋಗವು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಕರಡು ನೀತಿಯನ್ನು ಸಲ್ಲಿಸಿತ್ತು. ನಂತರ ಅದನ್ನು ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಇಲಾಖೆಗೆ ರವಾನಿಸಲಾಯಿತು. ಸಮಾಜ ಕಲ್ಯಾಣ ನಿರ್ದೇಶಕರು ನಂತರ LGBTQIA + ಸಮುದಾಯದ ವ್ಯಕ್ತಿಗಳನ್ನು ಒಳಗೊಂಡಂತೆ ಕರಡು ಸಮಿತಿಯ ರಚನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದರು. ಅದರ ಆಧಾರದ ಮೇಲೆ ಅಂತಿಮ ನೀತಿಯನ್ನು ರೂಪಿಸಲು ಸರ್ಕಾರ ಜೂನ್ 2023ರಲ್ಲಿ ಸಮಿತಿಯನ್ನು ರಚಿಸಿತ್ತು.

ಸಮಿತಿಯಲ್ಲಿ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಕಲೈಮಾಮಣಿ ಸುಧಾ, ತಮಿಳುನಾಡು ಟ್ರಾನ್ಸ್ಜೆಂಡರ್ ಕಲ್ಯಾಣ ಮಂಡಳಿಯ ಅರುಣ್ ಕಾರ್ತಿಕ್ ಮತ್ತು ಮನಶ್ಶಾಸ್ತ್ರಜ್ಞ ಡಾ ವಿದ್ಯಾ ದಿನಕರನ್, ಎಲ್ ರಾಮಕೃಷ್ಣನ್, ದಲಿತ ಕಾರ್ಯಕರ್ತ ವಿನೋದನ್, LGBTQIA+ ಕಾರ್ಯಕರ್ತ ಬುಸೈನಾ ಅಹಮದ್ ಶಾ, ಮದ್ರಾಸ್ ಹೈಕೋರ್ಟ್ ವಕೀಲ ಅಜೀತ ಬಿಎಸ್, ಐಐಟಿ ಮದ್ರಾಸ್ ಅಸೋಸಿಯೇಟ್ ಪ್ರೊಫೆಸರ್ ಟಿಜು ಥಾಮಸ್ ಸಮಿತಿಯಲ್ಲಿದ್ದಾರೆ.

ಇದನ್ನು ಓದಿ: ಭಾರತದ ಸೈನಿಕರು ಯಾಕೆ ಮಾಲ್ಡಿವ್ಸ್‌ನಲ್ಲಿದ್ದಾರೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಅಡ್ಡ ಪರಿಣಾಮ: ‘ಬಿಜೆಪಿ’ ದೇಣಿಗೆಗಾಗಿ ‘ಜನರ ಜೀವ’ವನ್ನು ಪಣಕ್ಕಿಟ್ಟಿದೆ; ಅಖಿಲೇಶ್ ಯಾದವ್

0
ಕೋವಿಶೀಲ್ಡ್ ಲಸಿಕೆಯ "ಅಡ್ಡಪರಿಣಾಮಗಳ" ವಿವಾದದ ಮಧ್ಯೆ ಲಸಿಕೆ ತಯಾರಕರಿಂದ "ರಾಜಕೀಯ ದೇಣಿಗೆಗಳನ್ನು" ಪಡೆಯಲು 'ಬಿಜೆಪಿ' ಜನರ ಜೀವನವನ್ನು ಪಣಕ್ಕಿಟ್ಟಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ...