Homeಕರ್ನಾಟಕಶಾಲಾ ಶುಲ್ಕ ಕಟ್ಟಲಾಗದೆ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಪೂರಕ ಪರೀಕ್ಷೆಯಲ್ಲಿ ಟಾಪರ್‌‌

ಶಾಲಾ ಶುಲ್ಕ ಕಟ್ಟಲಾಗದೆ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಪೂರಕ ಪರೀಕ್ಷೆಯಲ್ಲಿ ಟಾಪರ್‌‌

ಮೂಡಬಿದಿರೆಯ ಆಳ್ವಾಸ್ ಶಾಲೆಯಲ್ಲಿ ಗ್ರೀಷ್ಮಾ ವ್ಯಾಸಂಗ ಮಾಡುತ್ತಿದ್ದಳು. ಪೋಷಕರು ಶುಲ್ಕ ಪಾವತಿಸದ ಕಾರಣ ಶಾಲಾ ಪ್ರವೇಶಾತಿ ನಿರಾಕರಿಸಲಾಗಿತ್ತು. ತೇರ್ಗಡೆಯಾಗಿರುವ ವಿದ್ಯಾರ್ಥಿಗೆ 50,000 ರೂ. ಪ್ರೋತ್ಸಾಹಧನವನ್ನು ಡಾ.ಜಿ.ಪರಮೇಶ್ವರ ನೀಡಿದ್ದಾರೆ.

- Advertisement -
- Advertisement -

ಶಾಲೆಯ ಶುಲ್ಕ ಪಾವತಿಸಲಾಗದೆ, ಶಾಲೆಯವರು ಪರೀಕ್ಷೆಯ ಪ್ರವೇಶಪತ್ರ ನೀಡದ ಕಾರಣ ಹತ್ತನೇ ತರಗತಿ ಪರೀಕ್ಷೆಯನ್ನು ಬರೆಯಲಾಗದೆ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಕೊನೆಗೂ ಪೂರಕ ಪರೀಕ್ಷೆಯನ್ನು ಎದುರಿಸಿ ಶಾಲೆಗೆ ಟಾಪರ್‌ ಆಗಿ ತೇರ್ಗಡೆಯಾಗಿದ್ದಾಳೆ.

ಕೊರಟಗೆರೆ ಪಟ್ಟಣದ ಬಿ.ಆರ್‌.ನರಸಿಂಹಮೂರ್ತಿ, ಟಿ.ಪಿ.ಪದ್ಮಾವತಮ್ಮ ದಂಪತಿಯ ಹದಿನಾರು ವರ್ಷಗಳ ಪುತ್ರಿ ಗ್ರೀಷ್ಮಾ ನಾಯಕ್‌, ಪರೀಕ್ಷೆ ಬರೆಯಲು ಅವಕಾಶ ಸಿಗದೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಕೋವಿಡ್ ಸಂದರ್ಭದಲ್ಲಿ ಘಟಿಸಿದ ಈ ಪ್ರಕರಣ ರಾಜ್ಯ ಮಟ್ಟದ ಸುದ್ದಿಯಾಗಿತ್ತು.

ರೈತರ ಮಗಳಾದ ಗ್ರೀಷ್ಮಾ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್‌ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಗ್ರೀಷ್ಮಾ ಹೇಳುವಂತೆ, “ಕೋವಿಡ್ ಕಾರಣದಿಂದಾಗಿ ಶಾಲೆಗೆ ಹಾಜರಾಗಲು ಹಾಗೂ ಶುಲ್ಕವನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ. ನನ್ನ ಸಹೋದರಿ ಕೀರ್ತನಾ, ಕೋರ್‌ ಸಬ್ಜೆಕ್ಟ್‌ ಕಲಿಕೆಗೆ ಸಹಕರಿಸಿದಳು. ಪರೀಕ್ಷೆಗೆ ಮೂರು ತಿಂಗಳು ಇರುವಾಗ ಭಾಷಾ ವಿಷಯಗಳ ಓದು ಆರಂಭಿಸಿದ್ದೆ. ಆದರೆ ನನ್ನ ಹೆಸರು ಶಾಲಾ ದಾಖಲಾತಿಯಲ್ಲಿಯೇ ಇರಲಿಲ್ಲ.”

ಗ್ರೀಷ್ಮಾ ಆಳ್ವಾಸ್‌ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಗ್ರೀಷ್ಮಾ ಕುಟುಂಬ ಶಾಲಾ ಶುಲ್ಕವನ್ನು ಪಾವತಿಸಿಲ್ಲ ಎಂದು ಹತ್ತನೇ ತರಗತಿಯ ದಾಖಲಾತಿಯಲ್ಲಿ ಸೇರಿಸಿರಲಿಲ್ಲ. ಹೀಗಾಗಿ ಹತ್ತನೇ ತರಗತಿಯ ಪ್ರವೇಶಾತಿಗೂ ಅವಕಾಶವಿರಲಿಲ್ಲ.

“ಶುಲ್ಕ ಪಾವತಿಗೆ ಹೆಚ್ಚುವರಿ ಸಮಯವನ್ನು ಶಾಲಾ ನಿರ್ವಹಣಾ ಮಂಡಳಿ ನಮಗೆ ನೀಡಲಿಲ್ಲ. ಗ್ರೀಷ್ಮಾ 9ನೇ ತರಗತಿಯಲ್ಲಿ ಶೇ .96 ಅಂಕ ಗಳಿಸಿದ್ದರೂ ಹತ್ತನೇ ತರಗತಿಗೆ ಪ್ರವೇಶವನ್ನು ನೀಡಿಲ್ಲ” ಎಂದು ಪೋಷಕರು ಆರೋಪಿಸಿದ್ದರು.

ಡಿಡಿಪಿಐ ಅವರಲ್ಲಿಯೂ ಪೋಷಕರು ಮೊರೆ ಇಟ್ಟಾಗ ಪ್ರಕರಣ ಅಂದಿನ ಪ್ರಾಥಮಿಕ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರ ತನಕ ಹೋಗಿತ್ತು. ಇದೇ ರೀತಿಯ ಪ್ರಕರಣಗಳು ಎಲ್ಲೆಡೆ ವರದಿಯಾದಾಗ ಶುಲ್ಕ ಪಾವತಿಯನ್ನು ಮುಂದಿಟ್ಟುಕೊಂಡು ಪರೀಕ್ಷಾ ಪ್ರವೇಶಾತಿಯನ್ನು ನಿರಾಕರಿಸುವಂತಿಲ್ಲ ಎಂದು ಆದೇಶಿಸಿದ್ದರು.

ವಿದ್ಯಾರ್ಥಿನಿ ಗ್ರೀಷ್ಮಾ

ಅಲ್ಲದೇ ಗ್ರೀಷ್ಮಾ ಅವರ ಕುಟುಂಬವನ್ನು ಸುರೇಶ್‌ ಕುಮಾರ್‌ ಭೇಟಿಯಾಗದಿದರು. ಹೊಸ ಅಭ್ಯರ್ಥಿಯನ್ನಾಗಿಯೇ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದರು. ಗ್ರೀಷ್ಮಾ ಅವರ ಓದಿನ ಖುಷಿಯನ್ನು ಸುರೇಶ್ ಕುಮಾರ್ ಪ್ರೋತ್ಸಾಹಿಸಿದ್ದರು.

“ಸಚಿವರು ನಮ್ಮ ಮನೆಗೆ ಬಂದ ಬಳಿಕ ಶಾಲೆಯವರು ನನ್ನ ಹೆಸರನ್ನು ಬೋರ್ಡ್ ಪರೀಕ್ಷೆಗೆ ನಮೂದಿಸಿದ್ದರು. ಹೀಗಾಗಿ ಮೊದಲ ಭಾರಿಗೆ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಯಾಗಿ ಪೂರಕ ಪರೀಕ್ಷೆಯಲ್ಲಿ ನನ್ನನ್ನು ಪರಿಗಣಿಸಲಾಗಿತ್ತು” ಎಂದು ಗ್ರೀಷ್ಮಾ ಹೇಳಿದ್ದಾರೆ.

ಇದನ್ನೂ ಓದಿರಿ: ನೀಟ್ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಉಂಟಾಗುವ ಮಾನಸಿಕ ನೋವು ನನಗೆ ತಿಳಿದಿದೆ – ನಟಿ ಸಾಯಿ ಪಲ್ಲವಿ

ಆಳ್ವಾಸ್‌ ಶಾಲೆಯ ಮುಖ್ಯಶಿಕ್ಷಕಿ ವಿಜಯಾ ಟಿ.ಮೂರ್ತಿ ಅವರು, “ಗ್ರೀಷ್ಮಾ ಪೋಷಕರು ನಮ್ಮ ಸಂಪರ್ಕದಲ್ಲಿ ಇರಲಿಲ್ಲ” ಎಂದು ಆರೋಪಿಸಿದ್ದರು. “ನಾವು ಪೋಷಕರಿಗೆ ಪತ್ರವನ್ನು ಕಳುಹಿಸಿದ್ದೆವು. ಆದರೂ ಅವರು ಹತ್ತನೇ ತರಗತಿಗೆ ದಾಖಲಾತಿ ಮಾಡಿರಲಿಲ್ಲ. ನಮ್ಮ ಪತ್ರಗಳಿಗೂ ಉತ್ತರಿಸಲಿಲ್ಲ. ನಂತರದಲ್ಲಿ ಶುಲ್ಕ ಪಾವತಿಸದ ಕಾರಣ ಪ್ರವೇಶಾತಿ ನೀಡಿಲ್ಲ ಎಂದು ಹೇಳಿ ಗಾಬರಿಗೊಳಿಸಿದರು” ಎಂದು ಮುಖ್ಯಶಿಕ್ಷಕಿ ಹೇಳಿಕೆ ನೀಡಿದ್ದರು.

ಅಂದಹಾಗೆ ಗ್ರೀಷ್ಮಾ ಉತ್ತಮ ಫಲಿತಾಂಶವನ್ನು ಗಳಿಸುವ ಮೂಲಕ ಭರವಸೆಯಾಗಿ ಹೊಮ್ಮಿದ್ದಾರೆ. “ನಾನು 625ಕ್ಕೆ 615ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುವ ಭರವಸೆ ಹೊಂದಿದ್ದೆ. ಆದರೆ ಪರೀಕ್ಷೆಯಲ್ಲಿ ಕೆಲವೊಂದು ಗೊಂದಲಕ್ಕೊಳಗಾಗಿ ಕೆಲವು ಅಂಕಗಳನ್ನು ಕಳೆದುಕೊಂಡೆ” ಎಂದಿದ್ದಾರೆ. ಆದರೆ ಅಂತಿಮವಾಗಿ ಗ್ರೀಷ್ಮಾ 599 ಅಂಕಗಳನ್ನು ಗಳಿಸಿದ್ದಾರೆ. ವಿಜ್ಞಾನ ವಿಷಯದಲ್ಲಿ ಮುಂದಿನ ಕಲಿಕೆಯನ್ನು ಮುಂದುವರಿಸುವುದಾಗಿ ಗ್ರೀಷ್ಮಾ ಹೇಳಿದ್ದಾರೆ. ಅವರಿಗೆ ಹಲವರ ಸಹಕಾರವೂ ದೊರೆತಿದೆ.

ಜಿ.ಪರಮೇಶ್ವರ 50 ಸಾವಿರ ರೂ. ಪ್ರೋತ್ಸಾಹ ಧನ; ಮೆಡಿಕಲ್‌ ಸೀಟ್ ಭರವಸೆ

ಕೊರಟಗೆರೆ ಕ್ಷೇತ್ರದ ಶಾಸಕ, ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ವಿದ್ಯಾರ್ಥಿನಿಯ ಕುಟುಂಬವನ್ನು ಮಂಗಳವಾರ ಭೇಟಿಯಾಗಿ, ಐವತ್ತು ಸಾವಿರ ರೂ. ಪ್ರೋತ್ಸಾಹಧನವನ್ನು ನೀಡಿ, ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿದ್ದಾರೆ.

“ವಿದ್ಯಾಭ್ಯಾಸವನ್ನು ಇದೇ ರೀತಿಯಲ್ಲಿ ಮುಂದುವರಿಸಬೇಕು” ಎಂದು ಕಿವಿ ಮಾತನ್ನು ಹೇಳಿರುವ ಶಾಸಕರು ಇದೇ ಸಂದರ್ಭದಲ್ಲಿ ಪ್ರೋತ್ಸಾಹಧನವಾಗಿ ವಿದ್ಯಾರ್ಥಿನಿಗೆ 50 ಸಾವಿರ ರೂ.ಗಳ ಚೆಕ್ ನೀಡಿ ನೆರವಾಗಿದ್ದಾರೆ. ಜೊತೆಗೆ ಪಿಯುಸಿ ನಂತರ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಉಚಿತವಾಗಿ ಪ್ರವೇಶಾತಿ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿರಿ: ನೀಟ್ ವಿರುದ್ದದ ಹೋರಾಟಕ್ಕೆ ಬೆಂಬಲಿಸುವಂತೆ 12 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ತಮಿಳುನಾಡು ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ..’; ಇವಿಎಂ-ವಿವಿಪ್ಯಾಟ್ ಪರಿಶೀಲನೆ ಆದೇಶವನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

0
'ಇವಿಎಂ-ವಿವಿಪ್ಯಾಟ್ ಪರಿಶೀಲನಾ ಅರ್ಜಿ' ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಕಾಯ್ದಿರಿಸಿದ್ದು, 'ಮತ್ತೊಂದು ಸಾಂವಿಧಾನಿಕ ಪ್ರಾಧಿಕಾರದಿಂದ ನಡೆಸಬೇಕಾದ ಚುನಾವಣೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ' ಎಂದು ನ್ಯಾಯಾಲಯವು ಹೇಳಿತು. 2024ರ ಲೋಕಸಭಾ ಚುನಾವಣೆಯ ಎರಡನೇ ಹಂತವು...