Homeಮುಖಪುಟನೀಟ್ ವಿರುದ್ದದ ಹೋರಾಟಕ್ಕೆ ಬೆಂಬಲಿಸುವಂತೆ 12 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ತಮಿಳುನಾಡು ಸಿಎಂ

ನೀಟ್ ವಿರುದ್ದದ ಹೋರಾಟಕ್ಕೆ ಬೆಂಬಲಿಸುವಂತೆ 12 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ತಮಿಳುನಾಡು ಸಿಎಂ

- Advertisement -
- Advertisement -

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ 12 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ನೀಟ್ ವಿರುದ್ಧದ ಹೋರಾಟಕ್ಕೆ ಬೆಂಬಲವನ್ನು ಕೋರಿದ್ದಾರೆ. ಸಂವಿಧಾನದಲ್ಲಿ ಕಲ್ಪಿಸಲಾಗಿರುವಂತೆ, ಶಿಕ್ಷಣ ಕ್ಷೇತ್ರವನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರಗಳ ಪ್ರಾಮುಖ್ಯತೆಯನ್ನು ಪುನಃಸ್ಥಾಪಿಸಲು ಒಗ್ಗಟ್ಟಿನ ಪ್ರಯತ್ನವನ್ನು ಮಾಡುವ ಅಗತ್ಯವನ್ನು ಎತ್ತಿ ತೋರಿಸುವ ಉದ್ದೇಶದಿಂದ ಈ ಪತ್ರವನ್ನು ಅವರು ಬರೆದಿದ್ದಾರೆ. ಮುಖ್ಯಮಂತ್ರಿ ಅವರು ತಮ್ಮ ಪತ್ರವನ್ನು ಹೆಚ್ಚಾಗಿ ವಿರೋಧ ಪಕ್ಷಗಳು ಆಳುವ ರಾಜ್ಯಗಳಿಗೆ ಬರೆದಿದ್ದಾರೆ.

ಸ್ಟಾಲಿನ್ ಅವರು, ಆಂಧ್ರಪ್ರದೇಶ, ಛತ್ತೀಸ್‌ಗಡ, ದೆಹಲಿ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಈ ನಿಟ್ಟಿನಲ್ಲಿ ತಮ್ಮ ಬೆಂಬಲವನ್ನು ನೀಡುವಂತೆ ವಿನಂತಿಸಿದ್ದಾರೆ.

ಇದನ್ನೂ ಓದಿ: ನೀಟ್ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಉಂಟಾಗುವ ಮಾನಸಿಕ ನೋವು ನನಗೆ ತಿಳಿದಿದೆ – ನಟಿ ಸಾಯಿ ಪಲ್ಲವಿ

“ಗ್ರಾಮೀಣ ಪ್ರದೇಶದವರು ಮತ್ತು ಸಮಾಜದ ಅಂಚಿನಲ್ಲಿರುವ ವರ್ಗದವರು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಕಷ್ಟ ಪಡಬಾರದು. ನಮ್ಮ ಸಂವಿಧಾನದಲ್ಲಿ ಕಲ್ಪಿಸಲಾಗಿರುವಂತೆ ಶಿಕ್ಷಣ ಕ್ಷೇತ್ರವನ್ನು ನಿರ್ವಹಿಸುವಲ್ಲಿ, ರಾಜ್ಯ ಸರ್ಕಾರಗಳ ಪ್ರಾಮುಖ್ಯತೆಯನ್ನು ಪುನಃಸ್ಥಾಪಿಸಲು ನಾವು ಒಗ್ಗಟ್ಟಿನ ಪ್ರಯತ್ನವನ್ನು ಮಾಡಬೇಕಾಗಿದೆ” ಎಂದು ಅವರು ಬರೆದಿದ್ದಾರೆ.

“ನೀಟ್‌ ಅನ್ನು ಪರಿಚಯಿಸುವ ಒಕ್ಕೂಟ ಸರ್ಕಾರದ ಕ್ರಮವು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ರಾಜ್ಯಗಳು ಸ್ಥಾಪಿಸಿರುವ ಮತ್ತು ನಡೆಸುತ್ತಿರುವ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶದ ವಿಧಾನವನ್ನು ನಿರ್ಧರಿಸುವ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ನಿರ್ಬಂಧಿಸುವುದು, ಸಾಂವಿಧಾನಿಕ ಅಧಿಕಾರದ ಸಮತೋಲನವನ್ನು ಉಲ್ಲಂಘಿಸುತ್ತದೆ ಎಂಬುದು ನಮ್ಮ ನಿಲುವು” ಎಂದು ಸ್ಟಾಲಿನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನೀಟ್‌ ಆಧಾರಿತ ಪ್ರವೇಶ ಪ್ರಕ್ರಿಯೆಯು, ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆಯೇ ಎಂದು ತಮಿಳುನಾಡು ಸರ್ಕಾರ ಅಧ್ಯಯನ ನಡೆಸಿತ್ತು. ಈ ಅಧ್ಯಯನಕ್ಕೆ, ತಮಿಳುನಾಡು ಸರ್ಕಾರ ನಿವೃತ್ತ ನ್ಯಾಯಮೂರ್ತಿ ಎಕೆ ರಾಜನ್ ಅವರ ನೇತೃತ್ವದಲ್ಲಿ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿ ಸಲ್ಲಿಸಿದ ವರದಿಯನ್ನು ಸ್ಟಾಲಿನ್ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಲಗತ್ತಿಸಿದ್ದಾರೆ.

ಇದನ್ನೂ ಓದಿ: ಬಹುಪಾಲು ವಿದ್ಯಾರ್ಥಿಗಳಿಗೆ ‘ನೀಟ್‌‌’ ಬೇಡ: ನ್ಯಾಯಮೂರ್ತಿ ರಾಜನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ತಮಿಳುನಾಡಿನ ಮೆಡಿಕಲ್ ಲಾಬಿಗೆ ಮಣಿದು ಸ್ಟಾಲಿನ್ ಮಾಡಬಾರದ್ದನ್ನು ಮಾಡುತ್ತಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದೊಡನೆಯೇ ನೀಟ್ ರದ್ದು ಮಾಡುವುದಾಗಿ ಆಣೆ ಪ್ರಮಾಣ ಮಾಡಿ ಹೇಳಿದ್ದರು. ಅಧಿಕಾರಕ್ಕೋಸ್ಕರವಾಗಿ ಸುಳ್ಳು ಹೇಳಿ ಮುಖ್ಯಮಂತ್ರಿಯಾದರು ಸ್ಟಾಲಿನ್. ಚುನಾವಣಾ ಆಶ್ವಾಸನೆಯನ್ನು ಈಡೇರಿಸಲು ಸಾಧ್ಯವಿಲ್ಲವೆಂದು ಈಗ ಅವರಿಗೆ ಅರಿವಾಗಿದೆ ಹೀಗಾಗಿ ಇಂತಹ ಪ್ರಚೋದಿಸುವ ಆಟಗಳನ್ನು ಆಡುತ್ತಿದ್ದಾರೆ. ದೇಶದಾದ್ಯಂತ ಹೋಲಿಸಿದರೆ ತಮಿಳುನಾಡಿನಲ್ಲಿ ಮೆಡಿಕಲ್ ಕಾಲೇಜುಗಳು ಅಧಿಕ, ಅದರಲ್ಲಿ ಸ್ವತಹ ಸ್ಟಾಲಿನ್ ಕುಟುಂಬಕ್ಕೆ ಮೂರು ಕಾಲೇಜುಗಳು ಇವೆ. ಅವರ ಸಚಿವ ಸಂಪುಟದಲ್ಲಿ ಇರುವ ಸುಮಾರು ನಾಲ್ಕು ಕಿಂತ ಹೆಚ್ಚು ಸಚಿವರುಗಳಿಗೆ ಎರಡಕ್ಕಿಂತ ಅಧಿಕ ಮೆಡಿಕಲ್ ಕಾಲೇಜುಗಳು ಇವೆ. ಕೋಟ್ಯಾಂತರ ರೂಪಾಯಿ ಹಣ ಹೂಡಿ ಈಗ ನೀಟ್ ಗೆ ಸೀಟ್ ಗಳನ್ನು ಬಿಟ್ಟುಕೊಡಲು ಅವರುಗಳು ತಯಾರಿವಲ್ಲ. ವಿಧಾನಸಭೆಯಲ್ಲಿ ತಾವು ಮಂಡಿಸಿದ ಮಸೂದೆಗೆ ಯಾವುದೇ ಬೆಲೆ ಇಲ್ಲ ಎಂದು ಅರಿವಾದ ಕ್ಷಣವೇ, ಇಂತಹ ದೇಶವಿರೋಧಿ ಚಟುವಟಿಕೆಗೆ ಸ್ಟಾಲಿನ್ ಮುಂದಾಗಿದ್ದಾರೆ. ನೀಟ್ ರದ್ದು ಮಾಡಲು ಆಗದಿದ್ದರೆ ಅದನ್ನು ಒಪ್ಪಿಕೊಂಡು ಮುಂದೆ ಹೋಗುವುದನ್ನು ಬಿಟ್ಟು ಸ್ಟಾಲಿನ್ ಈ ರೀತಿ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ. ಸಾಮಾನ್ಯ ಮಕ್ಕಳ ವೈದ್ಯಕೀಯ ಕನಸನ್ನು ನುಚ್ಚು ನೂರಾಗಿ ಸುವುದೇ ಇದರ ಹಿಂದಿನ ಮರ್ಮವಾಗಿದೆ. ಬಡ ಜನರ ಪರವಾಗಿ ನಿಲ್ಲಬೇಕಿದ್ದ ನಾನುಗೌರಿ ಸ್ಟಾಲಿನ್ ಅಂತಹ ಕಾರ್ಪೊರೇಟ್ ಪಕ್ಷ ಹಿಂದೆ ನಿಂತಿರುವುದು ಬೀಸರದ ವಿಷಯ.

  2. ತಮಿಳುನಾಡಿನ ಮೆಡಿಕಲ್ ಲಾಬಿಗೆ ಮಣಿದು ಸ್ಟಾಲಿನ್ ಮಾಡಬಾರದ್ದನ್ನು ಮಾಡುತ್ತಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದೊಡನೆಯೇ ನೀಟ್ ರದ್ದು ಮಾಡುವುದಾಗಿ ಆಣೆ ಪ್ರಮಾಣ ಮಾಡಿ ಹೇಳಿದ್ದರು. ಅಧಿಕಾರಕ್ಕೋಸ್ಕರವಾಗಿ ಸುಳ್ಳು ಹೇಳಿ ಮುಖ್ಯಮಂತ್ರಿಯಾದರು ಸ್ಟಾಲಿನ್. ಚುನಾವಣಾ ಆಶ್ವಾಸನೆಯನ್ನು ಈಡೇರಿಸಲು ಸಾಧ್ಯವಿಲ್ಲವೆಂದು ಈಗ ಅವರಿಗೆ ಅರಿವಾಗಿದೆ ಹೀಗಾಗಿ ಇಂತಹ ಪ್ರಚೋದಿಸುವ ಆಟಗಳನ್ನು ಆಡುತ್ತಿದ್ದಾರೆ. ದೇಶದಾದ್ಯಂತ ಹೋಲಿಸಿದರೆ ತಮಿಳುನಾಡಿನಲ್ಲಿ ಮೆಡಿಕಲ್ ಕಾಲೇಜುಗಳು ಅಧಿಕ, ಅದರಲ್ಲಿ ಸ್ವತಹ ಸ್ಟಾಲಿನ್ ಕುಟುಂಬಕ್ಕೆ ಮೂರು ಕಾಲೇಜುಗಳು ಇವೆ. ಅವರ ಸಚಿವ ಸಂಪುಟದಲ್ಲಿ ಇರುವ ಸುಮಾರು ನಾಲ್ಕು ಕಿಂತ ಹೆಚ್ಚು ಸಚಿವರುಗಳಿಗೆ ಎರಡಕ್ಕಿಂತ ಅಧಿಕ ಮೆಡಿಕಲ್ ಕಾಲೇಜುಗಳು ಇವೆ. ಕೋಟ್ಯಾಂತರ ರೂಪಾಯಿ ಹಣ ಹೂಡಿ ಈಗ ನೀಟ್ ಗೆ ಸೀಟ್ ಗಳನ್ನು ಬಿಟ್ಟುಕೊಡಲು ಅವರುಗಳು ತಯಾರಿಲ್ಲ. ವಿಧಾನಸಭೆಯಲ್ಲಿ ತಾವು ಮಂಡಿಸಿದ ಮಸೂದೆಗೆ ಯಾವುದೇ ಬೆಲೆ ಇಲ್ಲ ಎಂದು ಅರಿವಾದ ಕ್ಷಣವೇ, ಇಂತಹ ದೇಶವಿರೋಧಿ ಚಟುವಟಿಕೆಗೆ ಸ್ಟಾಲಿನ್ ಮುಂದಾಗಿದ್ದಾರೆ. ನೀಟ್ ರದ್ದು ಮಾಡಲು ಆಗದಿದ್ದರೆ ಅದನ್ನು ಒಪ್ಪಿಕೊಂಡು ಮುಂದೆ ಹೋಗುವುದನ್ನು ಬಿಟ್ಟು ಸ್ಟಾಲಿನ್ ಈ ರೀತಿ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ. ಸಾಮಾನ್ಯ ಮಕ್ಕಳ ವೈದ್ಯಕೀಯ ಕನಸನ್ನು ನುಚ್ಚು ನೂರಾಗಿ ಸುವುದೇ ಇದರ ಹಿಂದಿನ ಮರ್ಮವಾಗಿದೆ. ಬಡ ಜನರ ಪರವಾಗಿ ನಿಲ್ಲಬೇಕಿದ್ದ ನಾನುಗೌರಿ ಸ್ಟಾಲಿನ್ ಅಂತಹ ಕಾರ್ಪೊರೇಟ್ ಪಕ್ಷ ಹಿಂದೆ ನಿಂತಿರುವುದು ಬೀಸರದ ವಿಷಯ.

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....