Homeಮುಖಪುಟಬುಡಕಟ್ಟು ಯುವತಿಗೆ ಚಿತ್ರಹಿಂಸೆ: ಆರೋಪಿ ಸೀಮಾ ಪಾತ್ರಾ ಬಿಜೆಪಿಯಿಂದ ಅಮಾನತು

ಬುಡಕಟ್ಟು ಯುವತಿಗೆ ಚಿತ್ರಹಿಂಸೆ: ಆರೋಪಿ ಸೀಮಾ ಪಾತ್ರಾ ಬಿಜೆಪಿಯಿಂದ ಅಮಾನತು

ಆರೋಪಿ ತನ್ನ ಫೇ‌ಸ್‌ಬುಕ್ ಖಾತೆಯಲ್ಲಿ, ‘ಬೇಟಿ ಬಚಾವೋ - ಬೇಟಿ ಪಢಾವೋ ರಾಜ್ಯ ಸಂಚಾಲಕಿ’ ಎಂದು ಬರೆದುಕೊಂಡಿದ್ದಾರೆ

- Advertisement -
- Advertisement -

ಜಾರ್ಖಂಡ್‌ನ ಬಿಜೆಪಿ ನಾಯಕಿ ಸೀಮಾ ಪಾತ್ರಾ ತಮ್ಮ ಮನೆಯ ಮನೆಕೆಲಸ ಮಾಡಿಕೊಂಡಿದ್ದ ಬುಡಕಟ್ಟು ಸಮುದಾಯದ ಯುವತಿಯನ್ನು ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪದ ನಡುವೆ ಪಕ್ಷವೂ ಮಂಗಳವಾರ ಅವರನ್ನು ಅಮಾನತುಗೊಳಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸೀಮಾ ಪಾತ್ರಾ ಅವರು ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಅವರ ಪತಿ ಮಹೇಶ್ವರ್ ಪಾತ್ರಾ ನಿವೃತ್ತ ಐಎಎಸ್ ಅಧಿಕಾರಿ ಆಗಿದ್ದಾರೆ. ಸೀಮಾ ಅವರು ತನ್ನ ಫೇ‌ಸ್‌ಬುಕ್ ಖಾತೆಯಲ್ಲಿ,“ಬೇಟಿ ಬಚಾವೋ – ಬೇಟಿ ಪಢಾವೋ ರಾಜ್ಯ ಸಂಚಾಲಕಿ ಮತ್ತು ಜಾರ್ಖಂಡ್ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ” ಎಂದು ಬರೆದುಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಂತ್ರಸ್ತೆ ಬುಡಕಟ್ಟು ಸಮುದಾಯದ ಯುವತಿಯು ಬಿಜೆಪಿ ನಾಯಕಿ ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಿರುವ ವಿಡಿಯೊ ವೈರಲ್ ಆದ ನಂತರ ಜಾರ್ಖಂಡ್ ಬಿಜೆಪಿ ಮುಖ್ಯಸ್ಥ ದೀಪಕ್ ಪ್ರಕಾಶ್ ಅವರು ಸೀಮಾ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ.

ಇದನ್ನೂ ಓದಿ: ‘ನಾಲಗೆಯಲ್ಲಿ ನೆಲ ಸ್ವಚ್ಛ ಮಾಡಿಸುತ್ತಿದ್ದರು’: ಬುಡಕಟ್ಟು ಯುವತಿಯನ್ನು 8 ವರ್ಷ ಬಂಧಿಸಿಟ್ಟು ಚಿತ್ರಹಿಂಸೆ ನೀಡುತ್ತಿದ್ದ BJP ನಾಯಕಿ

ವೈರಲ್ ಆಗಿರುವ ವಿಡಿಯೊದಲ್ಲಿ, ಸಂತ್ರಸ್ತೆ ಸುನೀತಾ ಅವರ ಸ್ಥಿತಿಯು ಭಯಾನಕವಾಗಿರುವುದು ಕಂಡು ಬಂದಿದೆ. ಯುವತಿಯು ಆಸ್ಪತ್ರೆಯ ಹಾಸಿಗೆಯಲ್ಲಿದ್ದು, ಅವರ ಹಲವಾರು ಹಲ್ಲುಗಳು ಕಾಣೆಯಾಗಿವೆ. ಅಲ್ಲದೆ ಅವರು ಕುಳಿತುಕೊಳ್ಳಲು ಕೂಡಾ ಅಸಮರ್ಥ ಸ್ಥಿತಿಯಲ್ಲಿದ್ದಾರೆ. ಜೊತೆಗೆ ಅವರ ದೇಹದ ಮೇಲಿನ ಗಾಯದ ಗುರುತುಗಳು ಅವರ ಮೇಲೆ ನಿರಂತರ ದಾಳಿ ನಡೆದಿರುವುದು ಸೂಚಿಸುತ್ತವೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸುನಿತಾ ಅವರ ಪರಿಸ್ಥಿತಿಯ ವಿಡಿಯೊ ವೈರಲ್ ಆಗುತ್ತಿದ್ದಂತೆ, ಸೀಮಾ ಪಾತ್ರ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

29 ವರ್ಷದ ಸುನೀತಾ ಅವರು ಜಾರ್ಖಂಡ್‌ನ ಗುಮ್ಲಾ ಮೂಲದವರಾಗಿದ್ದು, ಸುಮಾರು 10 ವರ್ಷಗಳ ಹಿಂದೆ ಸೀಮಾ ಪಾತ್ರಾ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಅವರ ಮಗಳು ವತ್ಸಲಾ ಕೆಲಸದ ನಿಮಿತ್ತ ದೆಹಲಿಗೆ ತೆರಳುತ್ತಿದ್ದಾಗ ಕೂಡಾ ಸುನೀತಾ ಅವರ ಸಹಾಯಕ್ಕೆ ತೆರಳಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದೆ ವತ್ಸಲಾ ಮತ್ತು ಸುನೀತಾ ರಾಂಚಿಗೆ ಮರಳಿದ್ದರು.

ಇದನ್ನೂ ಓದಿ: ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಪ್ರಧಾನಿ ಮೋದಿ ಆಪ್ತ ಉದ್ಯಮಿ ಗೌತಮ್ ಅದಾನಿ!

ಸುಮಾರು ಆರು ವರ್ಷಗಳಿಂದ ಸೀಮಾ ಪಾತ್ರಾ ಕ್ರೂರ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಯುವತಿ ಹೇಳಿದ್ದಾರೆ. ಅಪಾರ ನೋವಿನಿಂದ ಮಾತನಾಡಿದ ಅವರು, ತನಗೆ ಬಿಸಿ ತವಾ ಮತ್ತು ರಾಡ್‌ಗಳಿಂದ ಥಳಿಸಿ ಹಲ್ಲುಗಳನ್ನು ಒಡೆದುಹಾಕಲಾಯಿತು ಎಂದು ವೀಡಿಯೊಗಳಲ್ಲಿ ಹೇಳಿಕೊಂಡಿದ್ದಾರೆ. ಆಕೆಗೆ ನೆಲದ ಮೇಲಿನ ಮೂತ್ರವನ್ನು ನೆಕ್ಕುವಂತೆ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ.

ಈ ಚಿತ್ರಹಿಂಸೆಯನ್ನು ತನಗೆ ಶಿಕ್ಷೆಯಾಗಿ ನೀಡಲಾಗಿದ್ದು, ಆದರೆ ತಾನು ಮಾಡಿರುವ ತಪ್ಪುಗಳೇನು ಎಂದು ತನಗೆ ತಿಳಿದಿರಲಿಲ್ಲ ಎಂದು ಸುನೀತಾ ಹೇಳಿದ್ದಾರೆ.

ಸೀಮಾ ಪಾತ್ರಾ ಅವರ ಮಗ ಆಯುಷ್ಮಾನ್ ತನಗೆ ಸಹಾಯ ಮಾಡಿದ್ದಾನೆ ಎಂದು ಯುವತಿ ಹೇಳಿದ್ದು,“ನಾನು ಬದುಕಿರುವುದು ಅವನಿಂದ ಮಾತ್ರ” ಎಂದು ಅವರು ಹೇಳಿದ್ದಾರೆ. ತನ್ನ ಸಹೋದರಿ ಮತ್ತು ಸೋದರ ಮಾವನಿಗೆ ಈ ಕಷ್ಟಗಳನ್ನು ಹೇಳಿದ್ದರೂ ಅವರು ಇದರ ಬಗ್ಗೆ ಚಿಂತಿತರಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ವೀಡಿಯೊದಲ್ಲಿ ಸುನಿತಾ ಅವರು ತಾನು ಚೇತರಿಸಿಕೊಂಡರೆ ಅಧ್ಯಯನ ಮಾಡುವುದಾಗಿ ಹೇಳಿರುವುದು ದಾಖಲಾಗಿದೆ.

ಇದನ್ನೂ ಓದಿ: ಮಾತು ಮರೆತ ಭಾರತ; ಊನಾ ಫೈಲ್: ಆರೆಸ್ಸೆಸ್-ಬಿಜೆಪಿಯ ದನದ ರಾಜಕಾರಣ ಮತ್ತು ದಲಿತರು

ಸೀಮಾ ಅವರು ಮಗ ಆಯುಷ್ಮಾನ್ ಅವರು ಸುನೀತಾ ಅವರ ಪರಿಸ್ಥಿತಿಯನ್ನು ಸ್ನೇಹಿತರಿಗೆ ವಿವರಿಸಿ ಸಹಾಯ ಕೇಳಿದ್ದರು. ನಂತರ ಆತನ ಸ್ನೇಹಿತ ಪೊಲೀಸ್ ದೂರು ದಾಖಲಿಸಿದ್ದು, ಸುನೀತಾರನ್ನು ರಕ್ಷಿಸಲಾಗಿದೆ. ಪಸ್ತುತ ಅವರು ರಾಂಚಿಯ ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...