Homeಮುಖಪುಟವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಪ್ರಧಾನಿ ಮೋದಿ ಆಪ್ತ ಉದ್ಯಮಿ ಗೌತಮ್ ಅದಾನಿ!

ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಪ್ರಧಾನಿ ಮೋದಿ ಆಪ್ತ ಉದ್ಯಮಿ ಗೌತಮ್ ಅದಾನಿ!

- Advertisement -
- Advertisement -

ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು LVMH ಸಹ-ಸಂಸ್ಥಾಪಕ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅದಾನಿ ಅವರು 137.4 ಬಿಲಿಯನ್ ಡಾಲರ್‌ ಒಟ್ಟು ಸಂಪತ್ತನ್ನು ಹೊಂದಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಶ್ರೇಯಾಂಕದಲ್ಲಿ ಅದಾನಿ ಈಗ ಎಲೋನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿದ್ದಾರೆ. ಫ್ರೆಂಚ್ ಉದ್ಯಮಿ, ಹೂಡಿಕೆದಾರ ಮತ್ತು ಕಲಾ ಸಂಗ್ರಾಹಕ ಬರ್ನಾರ್ಡ್ ಅರ್ನಾಲ್ಟ್ ಈಗ ವಿಶ್ವದ 4 ನೇ ಶ್ರೀಮಂತ ವ್ಯಕ್ತಿಯಾಗಿ ಸಂಪತ್ತಿನಲ್ಲಿ ಕುಸಿತ ಕಂಡಿದ್ದಾರೆ. ಅವರು LVMH ಮೊಯೆಟ್ ಹೆನ್ನೆಸ್ಸಿಯ ಸಹ-ಸಂಸ್ಥಾಪಕರಾಗಿದ್ದು, ವಿಶ್ವದ ಅತಿದೊಡ್ಡ ಐಷಾರಾಮಿ ಸರಕುಗಳ ಕಂಪನಿಯಾಗಿರುವ ಲೂಯಿ ವಿಟಾನ್ SE ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರು ಆಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅದಾನಿಯ ಇತ್ತೀಚಿನ ಸಂಪತ್ತಿನ ಏರಿಕೆಯೊಂದಿಗೆ ಶ್ರೀಮಂತಿಕೆಯಲ್ಲಿ ವಿಶ್ವದ ಮೂರನೇ ಸ್ಥಾನಕ್ಕೆ ಏರಿ ಮೊದಲ ಭಾರತೀಯ ಮತ್ತು ಏಷ್ಯನ್ ಆಗಿದ್ದಾರೆ. ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಚೀನಾದ ಜಾಕ್ ಮಾ ಕೂಡ ಇದನ್ನು ಸಾಧಿಸಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ ಪ್ರಧಾನಿ ಮೋದಿ ಆಪ್ತ ಉದ್ಯಮಿ ಗೌತಮ್ ಅದಾನಿ

ಕಳೆದ ತಿಂಗಳು ಬಿಲ್ ಗೇಟ್ಸ್‌ ಅವರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಅದಾನಿ ಹೊರ ಹೊಮ್ಮಿದ್ದರು ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ ಹೇಳಿದೆ.

ಸೂಚ್ಯಂಕದಲ್ಲಿ ಅದಾನಿ ಅವರು ಮೂರನೇ ಸ್ಥಾನಕ್ಕೆ ಏರಲು ಈ ವರ್ಷ ಇದುವರೆಗೆ ಆಗಿರುವ ಅವರ ಸಂಪತ್ತಿನ ಭಾರೀ ಏರಿಕೆಯ ಪರಿಣಾಮವಾಗಿದೆ. ಟಾಪ್ 10 ರಲ್ಲಿರುವ ಎಲ್ಲಾ ಇತರ ಬಿಲಿಯನೇರ್‌ಗಳು ಈ ವರ್ಷದಲ್ಲಿ ಸಂಪತ್ತಿನಲ್ಲಿ ಕುಸಿತವನ್ನು ಕಂಡಿದ್ದರೆ, ಅದಾನಿ ಅವರ ಸಂಪತ್ತು 60.9 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಾಗಿದೆ. ಈ ಮೊತ್ತವೂ ಇತರ ಎಲ್ಲಾ ಬಿಲೇನಿಯರ್‌ಗಿಂತ ಐದು ಪಟ್ಟು ಹೆಚ್ಚಾಗಿದೆ.

ಈ ಮಧ್ಯೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ 91.9 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ 11 ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಇಸ್ರೇಲ್‌ನ ಅತೀ ದೊಡ್ಡ ಬಂದರು ‘ಅದಾನಿ ಗ್ರೂಪ್’ ವಶಕ್ಕೆ

ಇತ್ತೀಚಿನ ದಿನಗಳಲ್ಲಿ ಅದಾನಿ ಗ್ರೂಪ್‌ನ ಷೇರುಗಳು ಏರಿಕೆಯಾಗಿದ್ದು ಅದಾನಿ ಮೂರನೇ ಸ್ಥಾನಕ್ಕೆ ಏರಲು ಒಂದು ಕಾರಣ ಎಂದು ಫೈನಾನ್ಸಿಯಲ್ ಎಕ್ಸ್‌ಪ್ರೆಸ್‌ ಹೇಳಿದೆ. ಕೆಲವು ನೀತಿತಜ್ಞರು, ಮಾರುಕಟ್ಟೆ ವಿಷ್ಲೇಷಕರು ಅಪಾರದರ್ಶಕ ಷೇರುದಾರರ ರಚನೆ ಮತ್ತು ಅದಾನಿ ಗ್ರೂಪ್ ಕಂಪನಿಗಳಲ್ಲಿ ವಿಶ್ಲೇಷಕರ ವ್ಯಾಪ್ತಿಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರೂ ಷೇರುಗಳು ಗಗನಕ್ಕೇರಿವೆ.

ಕೆಲವು ಅದಾನಿ ಗ್ರೂಪ್ ಕಂಪನಿಯ ಷೇರುಗಳು 2020 ರಿಂದ 1,000% ಕ್ಕಿಂತ ಹೆಚ್ಚಾಗಿದೆ. ಇದರ ಮೌಲ್ಯಮಾಪನಗಳು 750 ಪಟ್ಟು ಗಳಿಕೆಯನ್ನು ಮುಟ್ಟಿವೆ.

“ವಿಶ್ವದ ಶ್ರಿಮಂತ ವ್ಯಕ್ತಿಗಳಾದ ಅಮೆರಿಕಾದ ಕೆಲವು ಬಿಲಿಯೇರ್‌ಗಳು ತಮ್ಮ ಶ್ರಿಮಂತಿಕೆಯ ಪಟ್ಟಿಯಲ್ಲಿ ಇಳಿಕೆ ಕಂಡಿದ್ದು ಅವರು ಮಾಡುತ್ತಿರುವ ಲೋಕೊಪಯೋಗಿ ಯೋಜನೆಗಳು ಕೂಡಾ ಕಾರಣ” ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ. ಹೀಗಾಗಿ ಅದಾನಿ ಶ್ರಿಮಂತಿಕೆಯ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಅದು ಉಲ್ಲೇಖಿಸಿದೆ.

ಇದನ್ನೂ ಓದಿ: ಅದಾನಿಗೆ ಗುತ್ತಿಗೆ ನೀಡಲು ಶ್ರೀಲಂಕಾ ಅಧ್ಯಕ್ಷರ ಮೇಲೆ ಮೋದಿ ಒತ್ತಡ; ಆರೋಪ ಮಾಡಿದ್ದ ಅಧಿಕಾರಿ ರಾಜೀನಾಮೆ

ಜುಲೈನಲ್ಲಿ ಬಿಲ್ ಗೇಟ್ಸ್ ಅವರು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ಗೆ 20 ಶತಕೋಟಿ ಡಾಲರ್‌‌ ಅನ್ನು ವರ್ಗಾಯಿಸುತ್ತಿರುವುದಾಗಿ ಹೇಳಿದ್ದಾರೆ. ವಾರೆನ್ ಬಫೆಟ್ ಕೂಡಾ ಈಗಾಗಲೇ 35 ಶತಕೋಟಿ ಡಾಲರ್‌‌ಗಿಂತ ಹೆಚ್ಚಿನ ಹಣವನ್ನು ಚಾರಿಟಿಗೆ ದೇಣಿಗೆ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...