Homeಕಥೆಸಣ್‌ಸಣ್ ಕಥೆ: ತೆರೇಸಾ ಎಂದು ಕೂಗಿದ ಮನುಷ್ಯ

ಸಣ್‌ಸಣ್ ಕಥೆ: ತೆರೇಸಾ ಎಂದು ಕೂಗಿದ ಮನುಷ್ಯ

- Advertisement -
- Advertisement -

ನಾನು ಪಾದಚಾರಿ ರಸ್ತೆಯಿಂದ ಹೊರಬಿದ್ದು, ಮೇಲೆ ನೋಡುತ್ತಾ ಕೆಲ ಹೆಜ್ಜೆ ಹಿಂದೆ ಬಂದು, ರಸ್ತೆಯ ನಟ್ಟನಡುವೆ ನಿಂತು, ಎರಡೂ ಕೈಗಳನ್ನ ಬಾಯಿಗೆ ಲೌಡ್ ಸ್ಪೀಕರ್ ರೀತಿಯಲ್ಲಿ ಹಿಡಿದುಕೊಂಡು ಬಿಲ್ಡಿಂಗ್‌ನ ಮೇಲ್ಮಹಡಿಗಳತ್ತ ನೋಡುತ್ತ ಜೋರಾಗಿ ಕೂಗಿಕೊಂಡೆ: “ತೆರೇಸಾ”.

ನನ್ನ ನೆರಳು ಚಂದ್ರನಿಗೆ ಹೆದರಿಕೊಂಡಂತೆ, ನನ್ನ ಕಾಲುಗಳ ನಡುವೆ ಬಂದು ಸೇರಿಕೊಂಡಿತು.

ಯಾರೋ ಒಬ್ಬ ಹತ್ತಿರ ಬಂದ, ನಾನು ಮತ್ತೊಮ್ಮೆ ಕೂಗಿಕೊಂಡೆ: “ತೆರೇಸಾ”. ಆ ಮನುಷ್ಯ ನನ್ನ ಹತ್ತಿರ ಬಂದು ಹೇಳಿದ: “ನೀನು ಜೋರಾಗಿ ಕೂಗದಿದ್ದರೆ ಅವಳಿಗೆ ಕೇಳಿಸುವುದಿಲ್ಲ. ಇಬ್ಬರೂ ಸೇರಿ ಪ್ರಯತ್ನ ಮಾಡುವ. ಮೂರು ಎಣಿಸುತ್ತೇನೆ, ಮೂರು ಮುಗಿಯುತ್ತಿದ್ದ ಹಾಗೆ ಇಬ್ಬರೂ ಸೇರಿ ಕೂಗುವ”. ಆ ಮನುಷ್ಯ ಮೂರು ಎಣಿಸಲು ಶುರು ಮಾಡಿದ: “ಒಂದು.. ಎರಡು.. ಮೂರು..”. ಇಬ್ಬರೂ ಜೋರಾಗಿ ಕೂಗಿದೆವು, “ತೆ..ರೇ..ಸಾ..”

ಆ ದಾರಿಯಲ್ಲೇ ಹಾದು ಹೋಗುತ್ತಿದ್ದ, ಬಹುಶಃ ಥಿಯೇಟರ್ ಇಂದ ಅಥವಾ ಕಾಫಿ ಶಾಪ್ ಇಂದ ವಾಪಸ್ಸಾಗುತ್ತಿದ್ದ ಸಣ್ಣ ಗೆಳೆಯರ ಗುಂಪೊಂದು ನಾವು ಕೂಗುವುದನ್ನ ಗಮನಿಸಿ, ನನ್ನ ಹತ್ತಿರ ಬಂದು, “ನಾವೂ ನಿಮ್ಮ ಜೊತೆ ಕೂಗುತ್ತೇವೆ” ಎಂದು ರಸ್ತೆಯ ನಡುವೆ ನಮ್ಮನ್ನು ಸೇರಿಕೊಂಡರು. ಆ ಗುಂಪಿನಲ್ಲಿ ಒಬ್ಬ ಮೂರು ಎಣಿಸಲು ಶುರು ಮಾಡಿದ, ಒಂದು.. ಎರಡು.. ಮೂರು, ನಾವೆಲ್ಲ ಸೇರಿ ಜೋರಾಗಿ ಕೂಗಿದೆವು, “ತೆ.. ರೇ.. ಸಾ..!”

ಇನ್ನೂ ಯಾರೋ ಒಬ್ಬರು ಬಂದು ನಮ್ಮನ್ನು ಸೇರಿಕೊಂಡರು; ಹತ್ತು ಹದಿನೈದು ನಿಮಿಷಗಳಲ್ಲಿ ಅಲ್ಲಿ ನಾವು ಒಂದು ಇಪ್ಪತ್ತು ಜನ ಸೇರಿಕೊಂಡಿದ್ದೆವು. ಆಗಾಗ ಇನ್ನೂ ಕೆಲವು ಹೊಸಬರು ನಮ್ಮನ್ನು ಸೇರುತ್ತಲೇ ಇದ್ದರು.

ನಾವೆಲ್ಲರೂ ಸೇರಿ ಒಂದೇ ಬಾರಿ, ಒಂದೇ ರೀತಿಯಲ್ಲಿ ಕೂಗುವುದು ಅಷ್ಟು ಸುಲಭವಾಗಿರಲಿಲ್ಲ. ಯಾರೋ ಒಬ್ಬರು ಮೂರು ಎಣಿಸುವುದಕ್ಕಿಂತ ಮುಂಚೆಯೇ ಕೂಗುತ್ತಿದ್ದರೆ, ಮತ್ತಿನ್ನೊಬ್ಬರು ನಾವೂ ಕೂಗಿ ಆದ ಮೇಲೆ ಕೂಗುತ್ತಿದ್ದರು, ಆದರೆ ಕೊನೆಕೊನೆಗೆ ಎಲ್ಲರೂ ಸೇರಿ ತಕ್ಕಮಟ್ಟಿನ ಜೋರಾದ ಒಂದೇ ದನಿಯ ಕೂಗು ಹಾಕುವುದರಲ್ಲಿ ಸಫಲರಾದೆವು. ’ತೆ’ ಯನ್ನ ಸಣ್ಣದಾಗಿ ಮತ್ತು ಬಹಳ ಹೊತ್ತಿನವರೆಗೆ ಕೂಗುವುದೆಂದೂ, ’ರೆ’ ಯನ್ನ ಜೋರಾಗಿ ಮತ್ತು ಬಹಳ ಹೊತ್ತಿನವರೆಗೆ ಕೂಗುವುದೆಂದೂ ಮತ್ತು ’ಸಾ’ನ್ನ ಮೆಲ್ಲಗೆ ಬೇಗ ಕೂಗಿ ಮುಗಿಸುವುದೆಂದೂ ನಮ್ಮ ನಡುವೆ ಒಪ್ಪಂದವಾಯಿತು. ಈ ಥರ ಕೂಗುವುದು ತುಂಬ ಮಜವಾಗಿಯೂ, ಪರಿಣಾಮಕಾರಿಯೂ ಆಗಿತ್ತು. ಯಾರಾದರೂ ತಪ್ಪು ಮಾಡಿದಾಗ ಆಗಾಗ ಸಣ್ಣಪುಟ್ಟ ತಕರಾರುಗಳು ಹುಟ್ಟಿಕೊಳ್ಳುತ್ತಿದ್ದವು.

ನಮ್ಮ ಕೂಗು ಈಗ ಸರಿಯಾಗಿ ಮೂಡಿಬರುತ್ತಿತ್ತು. ಆಗಲೇ ಒಬ್ಬ-ಅವನ ದನಿಯನ್ನಷ್ಟೇ ಕೇಳಿದರೆ ಇವನದು ವಿಚಿತ್ರ ಮುಖ ಆಗಿರಬಹುದು ಅನಿಸುವಂಥವ-ಪ್ರಶ್ನೆ ಮಾಡಿದ: “ಅವಳು ಮನೆಯಲ್ಲಿರುವುದು ನಿನಗೆ ಖಾತ್ರೀನಾ?”

“ಇಲ್ಲ ನಾನು ಉತ್ತರಿಸಿದೆ”.

“ಇದು ಕಷ್ಟ, ಕೀ ಏನಾದರೂ ಮರೆತಿದ್ದೀಯಾ?” ಇನ್ನೊಬ್ಬ ಕೇಳಿದ.

“ಇಲ್ಲ ಇಲ್ಲ ಕೀ ನನ್ನ ಹತ್ತಿರವೇ ಇದೆ”

ಉತ್ತರಿಸಿದೆ.

“ಮೇಲೆ ಹೋಗಿ ಯಾಕೆ ಚೆಕ್ ಮಾಡಬಾರದು ನೀನು?” ಮತ್ತೊಬ್ಬ ಸಲಹೆ ನೀಡಿದ.

“ನಾನು ಇಲ್ಲಿರುವುದಿಲ್ಲ, ನಾನು ಇರೋದು ಊರಿನ ಇನ್ನೊಂದು ಬದಿಯಲ್ಲಿ ಸಮಾಧಾನವಾಗಿ ಹೇಳಿದೆ”.

“ನನ್ನ ಕುತೂಹಲಕ್ಕೆ ಕ್ಷಮೆ ಇರಲಿ, ಹಾಗಾದರೆ ಇಲ್ಲಿ ಇರೋದು ಯಾರು?” ವಿಚಿತ್ರ ದನಿಯ ಮನುಷ್ಯ ಮೆಲುದನಿಯಲ್ಲಿ ಪ್ರಶ್ನೆ ಮಾಡಿದ.

“ನಿಜವಾಗಿಯೂ ನನಗೆ ಗೊತ್ತಿಲ್ಲ ನಾನು ಉತ್ತರಿಸಿದೆ”.

ನನ್ನ ಉತ್ತರ ಕೇಳಿ ಸುತ್ತ ಇದ್ದ ಜನ ಬೇಸರ ಮಾಡಿಕೊಂಡರು.

“ಹಾಗಾದರೆ ನೀನು ಇಲ್ಲಿ ನಿಂತು ತೆರೇಸಾ ಅಂತ ಕೂಗುತ್ತಿರುವುದು ಯಾರನ್ನ?” ಕೀರಲು ದನಿಯ ವ್ಯಕ್ತಿಯೊಬ್ಬ ಸ್ವಲ್ಪ ಗಡುಸಾಗಿಯೇ ಪ್ರಶ್ನಿಸಿದ.

“ನನ್ನ ಪ್ರಕಾರ, ನಾವು ಬೇರೆ ಯಾವ ಹೆಸರನ್ನಾದರೂ ಕೂಗಬಹುದು ಅಥವಾ ಬೇರೆ ಯಾವ ಜಾಗದಲ್ಲೂ ಕೂಗಬಹುದು, ಅದೇನು ಅಂಥ ದೊಡ್ಡ ವಿಷಯ ಅಲ್ಲ” ನಾನೂ ಸ್ವಲ್ಪ ಗಡುಸಾಗಿಯೇ ಉತ್ತರಿಸಿದೆ.

ನನ್ನ ಉತ್ತರದಿಂದ ಸುತ್ತಲಿನ ಜನಕ್ಕೆ ಸಿಟ್ಟು ಬಂತು.

“ನೀನು ನಮ್ಮನ್ನ ಯಾವುದರಲ್ಲಾದರೂ ಸಿಕ್ಕಿಸಿ ಹಾಕಿಸುತ್ತಿಲ್ಲ ತಾನೇ?” ಕೀರಲು ದನಿಯ ಮನುಷ್ಯ ಮತ್ತೆ ಪ್ರಶ್ನೆ ಮಾಡಿದ.

“ಏನು ಹಾಗಂದರೆ?” ನಾನೂ ಸ್ವಲ್ಪ ಸಿಟ್ಟಾದೆ, ನನ್ನ ಒಳ್ಳೆಯತನಕ್ಕಾಗಿ ಸಾಕ್ಷಿ ಹೇಳುವಂತೆ ಸುತ್ತಲಿನ ಜನರನ್ನೊಮ್ಮೆ ತಿರುಗಿ ನೋಡಿದೆ. ಎಲ್ಲ ಸುಮ್ಮನೇ ನಿಂತಿದ್ದರು, ನನ್ನ ಸೂಚನೆಯನ್ನ ಗಮನಿಸದವರಂತೆ.

ಎಲ್ಲರ ಮುಖದಲ್ಲೂ ಮುಜುಗರ ಎದ್ದು ಕಾಣುತ್ತಿತ್ತು.

“ಇಲ್ಲಿಂದ ಹೊರಡುವ ಮುನ್ನ ಯಾಕೆ ನಾವು ಒಮ್ಮೆ ಕೊನೆಯ ಬಾರಿ ಪ್ರಯತ್ನ ಮಾಡಬಾರದು?” ಮೃದು ಸ್ವಭಾವದವನಂತೆ ಕಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮಾತನಾಡಿದ. ಅವನ ಮಾತು ಒಪ್ಪಿಕೊಂಡವರಂತೆ ಒಂದು.. ಎರಡು.. ಮೂರು ಎಣಿಸುತ್ತ ಎಲ್ಲರೂ ಜೋರಾಗಿ ಕೂಗಿದೆವು, ತೆ.. ರೇ.. ಸಾ.. ಆದರೆ ಯಾಕೋ ಈ ಕೂಗು ಅಷ್ಟು ಸರಿಯಾಗಿ ಮೂಡಿ ಬರಲಿಲ್ಲ. ಆಮೇಲೆ ಎಲ್ಲರೂ ತಮ್ಮತಮ್ಮ ದಾರಿ ಹಿಡಿದು ಅಲ್ಲಿಂದ ಹೊರಟುಹೋದರು.

ನಾನೂ ಆ ಜಾಗ ಖಾಲಿ ಮಾಡಿ ಮುಂದಿನ ರಸ್ತೆಯ ಚೌಕಿಗೆ ಬರುತ್ತಿದ್ದ ಹಾಗೆಯೇ, ತೆ.. ರೇ.. ಸಾ ಎಂದು ಕೂಗುತ್ತಿದ್ದ ಒಂದು ದನಿ ನನ್ನ ಕಿವಿಗೆ ಬಿತ್ತು.

ಯಾರೋ ಒಬ್ಬ ಇನ್ನೂ ಅಲ್ಲೇ ನಿಂತು ಪ್ರಯತ್ನ ಮಾಡುತ್ತಿದ್ದಾನೆ, ಯಾರೋ ಒಬ್ಬ ಮೊಂಡ ಮನುಷ್ಯ.

ಅನುವಾದ: ಚಿದಂಬರ ನರೇಂದ್ರ

ಇಟಾಲೋ ಕ್ಯಾಲ್ವಿನೋ

ಇಟಾಲೋ ಕ್ಯಾಲ್ವಿನೋ
ಇಟಾಲಿಯನ್ ಕಥೆಗಾರ-ಕಾದಂಬರಿಕಾರ. ’ಕಾಸ್ಮಿಕಾಮಿಕ್ಸ್’, ’ಇನ್‌ವಿಸಿಬಲ್ ಸಿಟೀಸ್’, ’ಇಫ್ ಆನ್ ಎ ವಿಂಟರ್ಸ್ ನೈಟ್ ಎ ಟ್ರಾವೆಲ್ಲರ್’ ಅವರ ಪುಸ್ತಕಗಳಲ್ಲಿ ಕೆಲವು. ಪ್ರಸ್ತುತ ಕಥೆ ಅವರ ’ನಂಬರ್ಸ್ ಇನ್ ಡಾರ್ಕ್’ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ.


ಇದನ್ನೂ ಓದಿ: ನಾನೊಂದ ಬುಕ್ಕ ಕಂಡೆ: ಪುಸ್ತಕ ಸಂಗ್ರಹ ಲೋಕದ ಕುರಿತ ಪ್ರಬಂಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...