Homeಕರ್ನಾಟಕಪೊಳ್ಳು ಭರವಸೆ ಬೇಡ; ಲಿಖಿತ ಒಪ್ಪಿಗೆ ನೀಡಿ: ಹೋರಾಟ ಮುಂದುವರಿಸಲಿರುವ ಸಾರಿಗೆ ನೌಕರರು!

ಪೊಳ್ಳು ಭರವಸೆ ಬೇಡ; ಲಿಖಿತ ಒಪ್ಪಿಗೆ ನೀಡಿ: ಹೋರಾಟ ಮುಂದುವರಿಸಲಿರುವ ಸಾರಿಗೆ ನೌಕರರು!

"ತಮ್ಮನ್ನು ಸರ್ಕಾರಿ ನೌಕರರು ಎಂದು ಘೋಷಿಸುವವರೆಗೂ ಬಸ್ ತೆಗೆಯುವುದಿಲ್ಲ. ಸರ್ಕಾರ ನೀಡಿರುವ ಭರವಸೆಗಳ ಬಗ್ಗೆ ಲಿಖಿತ ಒಪ್ಪಿಗೆ ನೀಡಿ, ಅಧಿಕೃತವಾಗಿ ಘೋಷಿಸಲಿ" ಎಂದು ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ.

- Advertisement -
- Advertisement -

ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಈ ಸಂಬಂಧ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಇಂದು ನಡೆದ ಸಭೆಯಲ್ಲಿ ಸರ್ಕಾರ ಭರವಸೆ ನೀಡಿತ್ತು. ಆದರೆ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವವರೆಗೂ ಬಸ್ ತೆಗೆಯುವುದಿಲ್ಲ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರು ಹೇಳಿದ್ದಾರೆ.

ಸಾರಿಗೆ ನೌಕರರ ಬೇಡಿಕೆಗಳ ಕುರಿತು ಇಂದು ಸರ್ಕಾರ ಪ್ರತಿಭಟನಾಕಾರರೊಟ್ಟಿಗೆ ಮಾತುಕತೆ ನಡೆಸಿದ್ದು, ವೇತನ ಪರಿಷ್ಕರಣೆ, ಕಿರುಕುಳ ತಡೆ, ಭತ್ಯೆ ಪುನರಾರಂಭ, ಆರೋಗ್ಯ ವಿಮೆ ಸೇರಿದಂತೆ ಸಾರಿಗೆ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು. ಆದರೆ ಅವರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ: ನಿರುದ್ಯೋಗಿಗಳ ಬೆನ್ನಿಗೆ ನಿಂತ ನಟ ಸೋನು ಸೂದ್: ಇ-ಆಟೋ ಹಂಚಲು ನಿರ್ಧಾರ

ಸಂಧಾನ ಸಭೆ ಅಂತ್ಯಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್, “ನಮ್ಮ ಬಹುತೇಕ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಸೌಹಾರ್ದಯುತ ತೀರ್ಮಾನ ಆಗಿದೆ. ಮುಂದಿನ ನಿರ್ಧಾರವನ್ನು ಸ್ವಾತಂತ್ರ್ಯ ಉದ್ಯಾನದ ಪ್ರತಿಭಟನಾ ಸ್ಥಳದಲ್ಲಿ ಪ್ರಕಟಿಸಲಾಗುವುದು” ಎಂದಿದ್ದರು.

ಈಗ ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಪ್ರತಿಭಟನಾ ನಿರತ ಸಾರಿಗೆ ನೌಕರರು, ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ‘ಪ್ರಧಾನ ಮಂತ್ರಿ ಆಗಬೇಕು ಎನ್ನುವ ಆಸೆ ನನಗಿಲ್ಲ…’ – ಸಿದ್ದರಾಮಯ್ಯ

“ತಮ್ಮನ್ನು ಸರ್ಕಾರಿ ನೌಕರರು ಎಂದು ಘೋಷಿಸುವವರೆಗೂ ಬಸ್ ತೆಗೆಯುವುದಿಲ್ಲ. ಸರ್ಕಾರ ನೀಡಿರುವ ಭರವಸೆಗಳ ಬಗ್ಗೆ ಲಿಖಿತ ಒಪ್ಪಿಗೆ ನೀಡಿ, ಅಧಿಕೃತವಾಗಿ ಘೋಷಿಸಲಿ” ಎಂದು ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, “ನಾವು ಕೊಟ್ಟಿರುವ ಸಾವಿರಾರು ಮನವಿಗಳು ಇಂದು ಕಸದಬುಟ್ಟಿಯಲ್ಲಿವೆ. ಸರ್ಕಾರ ಪೊಳ್ಳು ಭರವಸೆಗಳನ್ನು ನೀಡುವುದನ್ನು ಬಿಡಬೇಕು. ಸರ್ಕಾರದ ಭರವಸೆಗಳು ಘೋಷಣೆಯಾಗಲಿ. ಇಲ್ಲದಿದ್ದರೆ ನಾಳೆಯೂ ಪ್ರತಿಭಟನೆ ಮುಂದುವರಿಯುತ್ತದೆ” ಎಂದು ಹೇಳಿದರು.


ಇದನ್ನೂ ಓದಿ: ಶೂದ್ರರಿಗೆ ಜ್ಞಾನವಿಲ್ಲ, ಹಾಗಾಗಿಯೇ ತಾವು ಶೂದ್ರರು ಎಂದು ಒಪ್ಪಿಕೊಳ್ಳುವುದಿಲ್ಲ: ಪ್ರಗ್ಯಾ ಠಾಕೂರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...