Homeಮುಖಪುಟಶೂದ್ರರಿಗೆ ಜ್ಞಾನವಿಲ್ಲ, ಹಾಗಾಗಿಯೇ ತಾವು ಶೂದ್ರರು ಎಂದು ಒಪ್ಪಿಕೊಳ್ಳುವುದಿಲ್ಲ: ಪ್ರಗ್ಯಾ ಠಾಕೂರ್

ಶೂದ್ರರಿಗೆ ಜ್ಞಾನವಿಲ್ಲ, ಹಾಗಾಗಿಯೇ ತಾವು ಶೂದ್ರರು ಎಂದು ಒಪ್ಪಿಕೊಳ್ಳುವುದಿಲ್ಲ: ಪ್ರಗ್ಯಾ ಠಾಕೂರ್

"ಒಬ್ಬ ಬ್ರಾಹ್ಮಣನನ್ನು ಬ್ರಾಹ್ಮಣ ಎಂದು ಕರೆದರೆ ತಪ್ಪೆಂದು ಪರಿಗಣಿಸುವುದಿಲ್ಲ. ಆದರೆ ಶೂದ್ರರನ್ನು ಶೂದ್ರರನ್ನು ಶೂದ್ರರು ಎಂದು ಕರೆದರೆ, ಅವರು ಅದನ್ನು ಒಪ್ಪುವುದಿಲ್ಲ, ಯಾಕೆಂದರೆ ಅವರಿಗೆ ಜ್ಞಾನವಿಲ್ಲ..."

- Advertisement -
- Advertisement -

ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಶನಿವಾರ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಮಧ್ಯಪ್ರದೇಶದ ಸೆಹೋರ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ, “ಶೂದ್ರರನ್ನು ಶೂದ್ರರು ಎಂದು ಕರೆದರೆ ಅವರು ಒಪ್ಪುವುದಿಲ್ಲ, ಯಾಕೆಂದರೆ ಅವರಿಗೆ ಜ್ಞಾನವಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಗ್ಯಾಸಿಂಗ್ ಸರಿ, ತೇಜ್‍ಬಹಾದ್ದೂರ್ ತಪ್ಪು: ಹುಟ್ಟು ಹಾಕಿರುವ ಪ್ರಶ್ನೆಗಳು?

ಭಾರತದಲ್ಲಿನ ವರ್ಣ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ, “ಸಾಮಾಜಿಕ ರಚನೆಗಾಗಿ ನಮ್ಮ ಸಮಾಜವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಕ್ಷತ್ರಿಯರನ್ನು ಕ್ಷತ್ರಿಯರು ಎಂದು ಕರೆದರೆ, ಅವರು ಅದನ್ನು ತಪ್ಪೆಂದು ಪರಿಗಣಿಸುವುದಿಲ್ಲ. ಒಬ್ಬ ಬ್ರಾಹ್ಮಣನನ್ನು ಬ್ರಾಹ್ಮಣ ಎಂದು ಕರೆದರೆ ತಪ್ಪೆಂದು ಪರಿಗಣಿಸುವುದಿಲ್ಲ. ವೈಶ್ಯನನ್ನು ವೈಶ್ಯ ಎಂದರೆ, ಅವನೂ ಅದನ್ನು ಅನ್ಯತಾ ಭಾವಿಸುವುದಿಲ್ಲ. ಆದರೆ ಶೂದ್ರರನ್ನು ಶೂದ್ರರನ್ನು ಶೂದ್ರರು ಎಂದು ಕರೆದರೆ, ಅವರು ಅದನ್ನು ಒಪ್ಪುವುದಿಲ್ಲ, ಯಾಕೆಂದರೆ ಅವರಿಗೆ ಜ್ಞಾನವಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹನುಮಾನ್ ಚಾಲೀಸಾ ಪಠಿಸಿ, ಕೊರೊನಾ ಓಡಿಸಿ : ಸಂಸದೆ ಪ್ರಗ್ಯಾ ಠಾಕೂರ್ ಸಲಹೆ

ಈ ಕುರಿತು ಎಎನ್ಐ ಪ್ರಗ್ಯಾ ಸಿಂಗ್ ಮಾತನಾಡಿರುವ ವೀಡಿಯೋವನ್ನು ಟ್ವೀಟ್ ಮಾಡಿದೆ.

ಇದನ್ನೂ ಓದಿ: ಗೋಡ್ಸೆ ಬಗ್ಗೆ ಹೇಳಿಕೆ: ಸಂಸತ್ತಿನ ರಕ್ಷಣಾ ಸಮಿತಿಯಿಂದ ಪ್ರಗ್ಯಾ ಠಾಕೂರ್‌ ಹೊರಕ್ಕೆ…

ಪ್ರಗ್ಯಾ ಸಿಂಗ್ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ಮಹಾತ್ಮ ಗಾಂಧಿಯ ಹಂತಕ ನಾಥೂರಾಂ ಗೂಡ್ಸೆಯನ್ನು ದೇಶ ಭಕ್ತ ಎಂದು ಕರೆದು ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

2008 ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟ ದಿವಂಗತ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕಾರ್ಕರೆ ಅವರನ್ನು ತಾನು ಶಪಿಸಿದ್ದರಿಂದಲೇ ಸಾವನ್ನಪ್ಪಿದ್ದಾರೆ ಎಂದು ಪ್ರಗ್ಯಾ ಸಿಂಗ್ ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿ ವಿವಾದಕ್ಕೆ ಗುರಿಯಾಗಿದ್ದರು.


ಇದನ್ನೂ ಓದಿ: “ಶೌಚಾಲಯಗಳನ್ನು ಸ್ವಚ್ಚಗೊಳಿಸಲು ನಾನು ಸಂಸದೆಯಾಗಿ ಆಯ್ಕೆಯಾಗಿಲ್ಲ” : ಪ್ರಗ್ಯಾ ಠಾಕೂರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...