Homeಮುಖಪುಟಖಾಸಗೀ ವಾಹನಗಳಲ್ಲಿ ಪ್ರಯಾಣ : ಹೆಚ್ಚು ಹಣ ವಸೂಲಿಗೆ ಸಾರಿಗೆ ಸಚಿವರ ಖಡಕ್ ವಾರ್ನಿಂಗ್

ಖಾಸಗೀ ವಾಹನಗಳಲ್ಲಿ ಪ್ರಯಾಣ : ಹೆಚ್ಚು ಹಣ ವಸೂಲಿಗೆ ಸಾರಿಗೆ ಸಚಿವರ ಖಡಕ್ ವಾರ್ನಿಂಗ್

- Advertisement -
- Advertisement -

ಕೊರೊನಾ ಭೀತಿಯಿಂದ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದರೂ ಜನ ನಿರ್ಲಕ್ಷ್ಯ ತೋರುತ್ತಿರುವುದು ಸಾಕಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಜನ ಗುಂಪುಗುಂಪಾಗಿ ಓಡಾಡುತ್ತಿರುವುದಕ್ಕೆ ವೈರಸ್ ಹರಡುವ ಆತಂಕ ಅಧಿಕವಾಗುತ್ತಿದೆ. ಈ ಸಂದರ್ಭವನ್ನೇ ಬಂಡವಾಳವನ್ನಾಗಿಸಿಕೊಂಡ ಖಾಸಗೀ ವಾಹನ ಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡಿಕೊಳ್ಳುತ್ತಿದ್ದಾರೆ.

ಹೌದು.. ಕೊರೊನಾ ಹರಡುವ ಹಿನ್ನೆಲೆಯಲ್ಲಿ ಸರ್ಕಾರ ಸರ್ಕಾರಿ ಸಾರಿಗೆ ಹಾಗೂ ರೈಲು ಸಂಚಾರ ಬಂದ್ ಮಾಡಿದೆ. ಆದರೆ ಖಾಸಗಿ ಬಸ್ ಮಾಲೀಕರು ಇದೇ ಸಂದರ್ಭವನ್ನು ಬಳಸಿಕೊಂಡು ವಸೂಲಿಗಿಳಿದ್ದಿದ್ದಾರೆ. ಖಾಸಗೀ ಬಸ್ ಗಳಲ್ಲಿ ಜನ ಎಗ್ಗಿಲ್ಲದೇ ಪ್ರಯಾಣ ಬೆಳೆಸಿದ್ದಾರೆ. ಯಾವುದೇ ಹ್ಯಾಂಡ್ ಸ್ಯಾನಿಟೈಸರ್ ಇಲ್ಲ, ಮಾಸ್ಕ್ ಇಲ್ಲ. ಮುಂಜಾಗೃತ ಕ್ರಮವಾಗಿ ಖಾಸಗೀ ಬಸ್ ಗಳನ್ನೂ ವಾಶ್ ಮಾಡಲಾಗಿದಿಯೋ ಇಲ್ವೋ ಗೊತ್ತಿಲ್ಲ… ಬಸ್ ಟಾಪ್ ಮೇಲೆ ಹತ್ತಿ ಕುಳಿತು ಜನ ಪ್ರಯಾಣ ಮಾಡುತ್ತಿದ್ದಾರೆ. ಗುಂಪಾಗಿ ಜನ ಸೇರುವಂತಿಲ್ಲ ಎಂದು ಸರ್ಕಾರದ ಆದೇಶವಿದ್ದರೂ, ದೂರದ ಜಿಲ್ಲೆಗಳಿಗೆ ಜನ ಖಾಸಗೀ ಬಸ್ ಗಳಲ್ಲಿ ಹಿಂಡು ಹಿಂಡಾಗಿ ಪ್ರಯಾಣ ಮಾಡುತ್ತಿದ್ದಾರೆ.

ಈ ಬಗ್ಗೆ ಮಾದ್ಯಮದೊಂದಿಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಖಾಸಗೀ ವಾಹನಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. “ಒಂದು ವೇಳೆ ಖಾಸಗೀ ವಾಹನಗಳು ಹೆಚ್ಚು ಹಣ ವಸೂಲಿ ಮಾಡುವುದು ಕಂಡು ಬಂದರೆ, ವಾಹನ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಜನ ಹೀಗೆ ತುಂಬಾ ನಿರ್ಲಕ್ಷ್ಯದಿಂದಿದ್ದಾಗ ಒಂದು ವೇಳೆ ಜನರಲ್ಲಿ ಓರ್ವ ವ್ಯಕ್ತಿ ಸೋಂಕಿತನಿದ್ದರೆ ಸಾಕು ಅಷ್ಟೂ ಜನಕ್ಕೂ ಸೋಂಕು ಹರಡುವ ಸಾಧ್ಯತೆ ಇದೆ.

ಇನ್ನೂ ಬೇರೆ ದೇಶಗಳಲ್ಲಿ ಯಾವ ಮಟ್ಟಿಗೆ ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದರೆ ಆಸ್ಪತ್ರೆಯಲ್ಲಿ ದಾಖಲಾಗುವುದಕ್ಕೂ ಕ್ಯೂ ನಲ್ಲಿ ನಿಲ್ಲಬೇಕಾದ ಸ್ಥತಿ ಇದೆ. ಹೀಗಿರಬೇಕಾದ್ರೆ ಭಾರತದಲ್ಲಿ ಇಂತಹ ಸ್ಥಿತಿ ಬಂದರೆ ಚಿಕಿತ್ಸೆ ಇಲ್ಲದೇ ಸಾಯುವಂತಹ ಪರಿಸ್ಥಿತಿ ಇದೆ. ಈ ಮೊದಲೇ ಕೊರೊನಾ ವೈರಸ್ ಗೆ ಚಿಕಿತ್ಸೆ ಇಲ್ಲ. ಹೀಗಿದ್ದರೂ ರಾಜ್ಯದಲ್ಲಿ ಜನ ಇಷ್ಟೊಂದು ನಿರ್ಲಕ್ಷ್ಯ ಮಾಡುತ್ತಿರುವುದು ಆತಂಕ ಸೃಷ್ಟಿ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...