Homeಮುಖಪುಟಮಮತಾ ಬ್ಯಾನರ್ಜಿ ಗಾಯಗೊಂಡಿರುವುದೇಗೆ? ಊಹಾಪೋಹಗಳ ಬೆನ್ನಲ್ಲಿ ಸ್ಪಷ್ಟನೆ ನೀಡಿದ ಟಿಎಂಸಿ

ಮಮತಾ ಬ್ಯಾನರ್ಜಿ ಗಾಯಗೊಂಡಿರುವುದೇಗೆ? ಊಹಾಪೋಹಗಳ ಬೆನ್ನಲ್ಲಿ ಸ್ಪಷ್ಟನೆ ನೀಡಿದ ಟಿಎಂಸಿ

- Advertisement -
- Advertisement -

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಣೆಗೆ ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ದಿಢೀರ್ ಆಗಿ ಗಾಯಗೊಂಡ ಸ್ಥಿತಿಯಲ್ಲಿ ಕಾಣಿಸಿಕೊಂಡ ದೀದಿಗೆ ಏನು ಆಗಿದ್ದು ಎಂದು ಎಲ್ಲರಲ್ಲೂ ಪ್ರಶ್ನೆ ಮೂಡಿತ್ತು. ಈ ಮಧ್ಯೆ ಮಮತಾ ಬ್ಯಾನರ್ಜಿಯನ್ನು ಯಾರೋ ಹಿಂದಿನಿಂದ ತಳ್ಳಿದ ಕಾರಣ ಬಿದ್ದು ಗಾಯಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ತನಿಖೆಗೆ ಬಿಜೆಪಿ ಕೂಡ ಆಗ್ರಹಿಸಿತ್ತು. ಈ ಕುರಿತ ಎಲ್ಲಾ ಊಹಾಪೋಹಗಳಿಗೆ ಇದೀಗ ಟಿಎಂಸಿ ಸ್ಪಷ್ಟನೆಯನ್ನು ನೀಡಿದ್ದು, ಅವರನ್ನು ಹಿಂದಿನಿಂದ ತಳ್ಳಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ, ಟಿಎಂಸಿ ನಾಯಕ ಮತ್ತು ರಾಜ್ಯ ಸಚಿವ ಶಶಿ ಪಂಜ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದು, ಮಮತಾ ಬ್ಯಾನರ್ಜಿ ತಲೆ ಸುತ್ತಿನಿಂದು ಕುಸಿದು ಬಿದ್ದಿದ್ದಾರೆ, ಯಾರೂ ಅವರನ್ನು ಹಿಂದಿನಿಂದ ತಳ್ಳಲಿಲ್ಲ, ಬಿದ್ದ ನಂತರ ಅವರು ಗಾಯಗೊಂಡಿದ್ದರು, ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ.  ಎಲ್ಲದರ ಬಗ್ಗೆ ವಿವರಗಳು ಶೀಘ್ರದಲ್ಲೇ ಹೊರಬರಲಿದೆ. ಎಲ್ಲರೂ ಮಮತಾ ಬ್ಯಾನರ್ಜಿಯವರ ಯೋಗಕ್ಷೇಮವನ್ನು ಬಯಸುತ್ತಾರೆ, ಆದರೆ ಈ ಬಗ್ಗೆ ತಪ್ಪು ಅರ್ಥವನ್ನು ಕಲ್ಪಿಸುವುದು ಸರಿಯಲ್ಲ, ಮಮತಾ ಬ್ಯಾನರ್ಜಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

69 ವರ್ಷದ ಬ್ಯಾನರ್ಜಿ ಅವರು ಗುರುವಾರ ಸಂಜೆ ಕೋಲ್ಕತ್ತಾದ ಕಾಳಿಘಾಟ್ ನಿವಾಸದಲ್ಲಿ ಬಿದ್ದ ನಂತರ ಅವರ ಹಣೆಯ ಮತ್ತು ಮೂಗಿಗೆ ಗಾಯಗಳಾಗಿತ್ತು. ಅವರ ಹಣೆಯ ಮೇಲೆ ಮೂರು ಹೊಲಿಗೆಗಳನ್ನು ಮತ್ತು ಅವರ ಮೂಗಿನ ಮೇಲೆ ಒಂದು ಹೊಲಿಗೆ ಹಾಕಲಾಗಿದ್ದು, ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗಳ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಅವರನ್ನು ಹಿಂದಿನಿಂದ ತಳ್ಳಿದ ಕಾರಣಕ್ಕೆ ಅವರು ಬಿದ್ದಿರಬಹುದು ಎಂದು ಮಮತಾ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹೆಳಿದ್ದರು, ಆದರೆ ಆ ಬಳಿಕ ಪ್ರತಿಕ್ರಿಯಿಸಿದ ವೈದ್ಯರು ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.

ಎಸ್‌ಎಸ್‌ಕೆಎಂ ಆಸ್ಪತ್ರೆಯ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ಮಣಿಮೊಯ್ ಬಂಡೋಪಾಧ್ಯಾಯ ಈ ಕುರಿತು ಪ್ರತಿಕ್ರಿಯಿಸಿದ್ದು, ಬಹುಶಃ ನಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.

ಮಮತಾ ಅವರ ಹಣೆಗೆ ಗಂಭೀರ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟಿಎಂಸಿ ಮೊದಲು ಅಧಿಕೃತ ಎಕ್ಸ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿತ್ತು. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಮಮತಾ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದರು. ಘಟನೆ ನಡೆದಾಗ ಮಮತಾ ಅವರ ಸೋದರಳಿಯ ಮತ್ತು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮನೆಯಲ್ಲಿದ್ದರು, ಅವರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಟಿಎಂಸಿ ನಾಯಕ ರಾಜೀಬ್ ಬ್ಯಾನರ್ಜಿ ಹೇಳಿದ್ದರು.

ಇದನ್ನು ಓದಿ: ಏಳನೇ ವೇತನ ಆಯೋಗದ ವರದಿ ಸಲ್ಲಿಕೆ: ಶೇ.27.5ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸ್ಸು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...