Homeಮುಖಪುಟತ್ರಿಪುರ: ಸದನದಲ್ಲಿ ಪೋರ್ನ್ ವಿಡಿಯೊ ನೋಡಿ ಸಿಕ್ಕಿಬಿದ್ದ ಬಿಜೆಪಿ ಶಾಸಕ

ತ್ರಿಪುರ: ಸದನದಲ್ಲಿ ಪೋರ್ನ್ ವಿಡಿಯೊ ನೋಡಿ ಸಿಕ್ಕಿಬಿದ್ದ ಬಿಜೆಪಿ ಶಾಸಕ

- Advertisement -
- Advertisement -

ತ್ರಿಪುರ ರಾಜ್ಯ ವಿಧಾನಸಭೆಯ ಅಧಿವೇಶನದ ವೇಳೆ ಬಿಜೆಪಿ ಶಾಸಕರೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಪೋರ್ನ್ ವೀಕ್ಷಿಸುತ್ತಿರುವುದು ವಿಡಿಯೊದಲ್ಲಿ ರೆಕಾರ್ಡ್ ಆಗಿದೆ.

ವೀಡಿಯೊವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ಮತ್ತು ಟೀಕೆಗೆ ಗುರಿಯಾಗಿದೆ. ರಾಜ್ಯದ ಬಾಗ್ಬಸ್ಸಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಜದಬ್ ಲಾಲ್ ನಾಥ್ ಪೋರ್ನ್ ವಿಡಿಯೊ ನೋಡಿ ಸಿಕ್ಕಿಬಿದ್ದಿದ್ದಾರೆ.

ರಾಜ್ಯ ಬಜೆಟ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿರುವಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಶಾಸಕ ಜದಬ್ ಅವರ ಹಿಂದೆ ಕುಳಿತಿದ್ದವರು ಯಾರೋ ವಿಡಿಯೊವನ್ನು ಸೆರೆಹಿಡಿದಿದ್ದಾರೆ.

ಇದನ್ನೂ ಓದಿರಿ: ಧರ್ಮದೊಂದಿಗೆ ರಾಜಕೀಯ ಬೆರೆಸುವುದನ್ನು ನಿಲ್ಲಿಸಿ, ದ್ವೇಷ ಭಾ‍ಷಣ ನಿಲ್ಲುತ್ತೆ: ರಾಜಕಾರಣಿಗಳಿಗೆ ಸುಪ್ರೀಂ ತಾಖೀತು

ಸ್ಪೀಕರ್ ಮತ್ತು ಇತರ ಶಾಸಕರು ಮಾತನಾಡುತ್ತಿರುವಾಗ ಜದಬ್ ತಮ್ಮ ಫೋನ್‌ನಲ್ಲಿ ಅಶ್ಲೀಲ ವಿಡಿಯೊಗಳನ್ನು ನೋಡುತ್ತಿರುವುದು ಕಂಡುಬಂದಿದೆ.

ಜದಬ್ ಅವರಿಗೆ ಸಮನ್ಸ್‌ ನೀಡಿರುವ ಬಿಜೆಪಿ ವಿವರಣೆ ಕೇಳಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈಗ ಬಂದಿರುವ ಆರೋಪಕ್ಕಾಗಲೀ, ವಿಡಿಯೊ ವೀಕ್ಷಣೆ ಕುರಿತಾಗಲೀ ಯಾವುದೇ ಪ್ರತಿಕ್ರಿಯೆಯನ್ನು ಜದಬ್ ನೀಡಿಲ್ಲ. ಅಧಿವೇಶನ ಮುಗಿದ ಕೂಡಲೇ ಅವರು ಸದನದಿಂದ ನಿರ್ಗಮಿಸಿದರು ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯವರು ಸಾರ್ವಜನಿಕ ಸ್ಥಳದಲ್ಲಿ ಪೋರ್ನ್ ವೀಕ್ಷಿಸಿ ಸಿಕ್ಕಿಬಿದ್ದಿರುವುದು ಇದೇ ಮೊದಲಲ್ಲ. 2012 ರಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರದ ಇಬ್ಬರು ಸಚಿವರು ರಾಜ್ಯ ವಿಧಾನಸಭೆಯೊಳಗೆ ತಮ್ಮ ಫೋನ್‌ಗಳಲ್ಲಿ ಪೋರ್ನ್ ಕ್ಲಿಪ್‌ಗಳನ್ನು ವೀಕ್ಷಿಸಿ ಸಿಕ್ಕಿಬಿದ್ದಿದ್ದರು. ನಂತರ ರಾಜೀನಾಮೆಯನ್ನೂ ನೀಡಬೇಕಾಗಿ ಬಂದಿತ್ತು.

“ಯಾವುದೇ ತಪ್ಪು ಮಾಡಿಲ್ಲ” ಎಂದು ತನಿಖೆಯ ವರದಿ ತಿಳಿಸಿದ ಬಳಿಕ ಲಕ್ಷ್ಮಣ ಸವದಿ ಮತ್ತು ಸಿ.ಸಿ.ಪಾಟೀಲ್ ಅವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...