Homeಮುಖಪುಟತುಮಕೂರು: ಬಡವರನ್ನು ಎತ್ತಂಗಡಿ ಮಾಡುವ ಪಾಲಿಕೆ, ಬಲಾಢ್ಯರ ಒತ್ತುವರಿ ಬಗ್ಗೆ ಮೌನ ವಹಿಸುವುದೇಕೆ?

ತುಮಕೂರು: ಬಡವರನ್ನು ಎತ್ತಂಗಡಿ ಮಾಡುವ ಪಾಲಿಕೆ, ಬಲಾಢ್ಯರ ಒತ್ತುವರಿ ಬಗ್ಗೆ ಮೌನ ವಹಿಸುವುದೇಕೆ?

- Advertisement -
- Advertisement -

ಸರ್ಕಾರಿ ಜಾಗಗಳ ಒತ್ತುವರಿ ತೆರವು ಕಾರ್ಯಾಚರಣೆ ಬೆಂಗಳೂರಿನಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಬಡವರು, ವಲಸೆ ಬಂದವರು, ಬಾಡಿಗೆ ತೆರಲು ಸಾಧ್ಯವಾಗದವರು ಸರ್ಕಾರಿ ಜಾಗಗಳಲ್ಲಿ ಜೋಪಡಿ-ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗುಸುತ್ತಿರುವವರನ್ನು ಎಲ್ಲೆಡೆ ನೋಡಿರುತ್ತೀರಿ. ಅಂತಹ ವಸತಿರಹಿತರನ್ನು ನಿರ್ದಯವಾಗಿ ಒಕ್ಕಲೆಬ್ಬಿಸುವ ಬೆಂಗಳೂರು ಮಹಾನಗರ ಪಾಲಿಕೆ ಸರ್ಕಾರದ ವಶಕ್ಕೆ ಸೇರಿದ ಕನ್ಸರ್ ವೆನ್ಸಿ ಗಳನ್ನು ಒತ್ತುವರಿ ಮಾಡಿ ದೊಡ್ಡ ದೊಡ್ಡ ಮಹಲುಗಳನ್ನು ನಿಮಾರ್ಣ ಮಾಡಿರುವವರ ಕ್ರಮ ಕೈಗೊಳ್ಳದೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಶ್ರೀಮಂತರು, ಬಲಾಢ್ಯರು, ಪ್ರಭಾವಿಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೂ ಅವರು ನೀಡುವ ಅಮೇಧ್ಯ ತಿಂದುಕೊಂಡು  ಬೆಂಗಳೂರು ಮಹಾನಗರ ಪಾಲಿಕೆ ಕ್ರಮಕ್ಕೆ ಮುಂದಾಗುತ್ತಿಲ್ಲ.

ಇದೇ ಪರಿಸ್ಥಿತಿ ತುಮಕೂರು ಸೇರಿದಂತೆ ಇತರೆ ನಗರಗಳಿಗೂ ವ್ಯಾಪಿಸಿದೆ. ಬೆಂಗಳೂರಿಗೆ 75 ಕಿಲೋ ಮೀಟರ್ ದೂರವಿರುವ, ಬೆಂಗಳೂರಿನ ಹೆಬ್ಬಾಗಿಲೆಂದೇ ಕರೆಯುವ ತುಮಕೂರು ಸ್ಮಾರ್ಟ್ ಸಿಟಿಯೂ ಹೌದು. ಇಂತಹ ಸ್ಮಾರ್ಟ್ ನಗರದಲ್ಲಿ ‘ಸ್ಮಾರ್ಟ್’ ಪದಕ್ಕೆ ಅರ್ಥವೇ ಇಲ್ಲವಾಗಿದೆ. ತುಮಕೂರು ಪುರಸಭೆ, ನಗರಸಭೆ ಆಗಿದ್ದ ಸಂದರ್ಭದಲ್ಲಿ ಕನ್ಸರ್ ವೆನ್ಸಿಗಳಿದ್ದವು. ಗಾಳಿ ಬೆಳಕಿಗೇನೂ ಕೊರತೆ ಇರಲಿಲ್ಲ. ತುಮಕೂರು ಮಹಾನಗರ  ಪಾಲಿಕೆಯಾದ ಮೇಲೆ ಕನ್ಸರ್ ವೆನ್ಸಿಗಳು ನಿಧಾನವಾಗಿ ಒತ್ತುವರಿಯಾಗುತ್ತಿವೆ. ಚರಂಡಿಗಳನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಇಂತಹ ಸರ್ಕಾರಿ ಜಾಗದ ಒತ್ತುವರಿದಾರರ ವಿರುದ್ದ ಕ್ರಮ ಕೈಗೊಳ್ಳುವವರೇ ಇಲ್ಲವಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಕನ್ಸರ್ ವೆನ್ಸಿಗಳ ಬಳಕೆ ಕುರಿತಂತೆ ಚರ್ಚೆ ನಡೆಯಿತು. ಕನ್ಸರ್ ವೆನ್ಸಿಗಳಿಗೆ ಕ್ರಾಂಕ್ರೀಟ್ ಹಾಕಿ ಅಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡುವ ಯತ್ನವೂ ನಡೆಯಿತು. ಅದರಂತೆ ಸೋಮೇಶ್ವರಪುರಂ ಸೇರಿದಂತೆ ಕೆಲವು ಕಡೆ ಕನ್ಸರ್ ವೆನ್ಸಿಗಳಿಗೆ ಕಾಂಕ್ರೀಟ್ ಮಾಡಿ ಬೀದಿಬದಿ ವ್ಯಾಪಾರಿಗಳಿಗೆ ಅನುವು ಮೋಡಿಕೊಡಲಾಯಿತು. ಇದನ್ನೇ ನೆಪಮಾಡಿಕೊಂಡ ಕೆಲವು ಮಂದಿ ಬಲಾಢ್ಯರು, ರಾಜಕೀಯ ಪ್ರಭಾವವಿರುವವರು ತಮ್ಮ ಮನೆ, ಆಸ್ಪತ್ರೆ ಪಕ್ಕದಲ್ಲಿರುವ ಕನ್ಸರ್ ವೆನ್ಸಿಗಳನ್ನು ಒತ್ತುವರಿ ಮಾಡಿಕೊಂಡರು. ಇದಕ್ಕಾಗಿ ಆಯಾ ವಾರ್ಡ್‌ನ  ಪಾಲಿಕೆ ಸದಸ್ಯರಿಗೆ ಒಂದಿಷ್ಟು ‘ಕಾಣಿಕೆ’ಯೂ ಸಿಕ್ಕಿತು.

ಈ ರೋಗ ನಗರದೆಲ್ಲೆಡೆ ಹರಡಿಕೊಂಡಿದೆ. ಹೊಸದಾಗಿ ಮನೆಗಳನ್ನು ನಿರ್ಮಿಸುವವರು ಪಾಲಿಕೆಯ ಎಲ್ಲಾ ನಿಯಮಗಳನ್ನು ದಿಕ್ಕರಿಸುತ್ತಿದ್ದಾರೆ. ಗಾಂಧೀನಗರದ ಕಸ್ತೂರ ಬಾ ರಸ್ತೆಯಲ್ಲಿ ನಾಲ್ಕು ಹಂತಸ್ತಿನ ಮನೆ ನಿರ್ಮಾಣವಾಗುತ್ತಿದೆ. ಮಹಡಿಗಳ ಮೇಲೆ ಮಹಿಡಿ ನಿರ್ಮಾಣವಾದಂತೆ ಗಾಳಿ ಬೆಳಕು ಬೀಳುವಂತೆ ಹೆಚ್ಚು ಜಾಗ ಬಿಡಬೇಕು. ಕಟ್ಟಡದ ಎತ್ತರಕ್ಕೆ, ಗಾತ್ರಕ್ಕೆ ಅನುಗುಣವಾಗಿ ಅಕ್ಕಪಕ್ಕ ಜಾಗ ಬಿಡಬೇಕು. ಕಸ್ತೂರ ಬಾ ರಸ್ತೆಯಲ್ಲಿ ಐದು ಹಂತಸ್ತಿನ ಬೃಹತ್ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸುತ್ತಿದ್ದಾರೆ. ಈ ಕಟ್ಟಡ ಮಾರ್ವಾಡಿಯೊಬ್ಬನಿಗೆ ಸೇರಿದ್ದು ಸ್ಥಳೀಯ ಕಾರ್ಪೋರೇಟರ್ ಅನ್ನು ಒಳಗೆ ಹಾಕಿಕೊಂಡು ಈ ಕಟ್ಟಡ ನಿರ್ಮಿಸುತ್ತಿದ್ದಾರೆ  ಎನ್ನಲಾಗುತ್ತಿದೆ.

ತುಮಕೂರು ನಗರದ ಸೋಮೇಶ್ವರಪುರಂ ಮುಖ್ಯರಸ್ತೆಯಲ್ಲಿ ಹಲವು ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿದ್ದು, ಪ್ರತಿಯೊಂದು ದೊಡ್ಡ ಮಳಿಗೆಯ ನೆಲಮಾಳಿಗೆಯನ್ನು ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂಬ ನಿಯಮವಿದೆ. ಆದರೆ 13ನೇ ಕ್ರಾಸ್ ನ ಎದುರುಗಡೆ ಕಟ್ಟಡದ ನೆಲಮಾಳಿಗೆಯಲ್ಲಿ ಡ್ಯಾನ್ಸ್ ಕ್ಲಾಸ್ ಮಾಡುತ್ತಿದ್ದಾರೆ. ನಮ್ಮೂರ ಆಹಾರ ಕಟ್ಟಡದ ನೆಲಮಾಳಿಗೆಯಲ್ಲಿ ಬೇಕರಿ ತಯಾರಿಕೆ ಕೆಲಸ ನಡೆಯುತ್ತಿದೆ. ಮಲ್ಲಿಗೆ ಪ್ಯಾಲಸ್ ಕಟ್ಟಡಕ್ಕೊಂದು ನೆಲಮಾಳಿಗೆ ಇದೆ. ಇಲ್ಲಿ ವಾಹನ ನಿಲುಗಡೆಗೆ ಅವಕಾಶ ಇಲ್ಲದಿರುವುದರಿಂದ ಸೋಮೇಶ್ವರ ಪುರಂ ಮುಖ್ಯರಸ್ತೆಯಲ್ಲಿ ವಾಹನನಿಲುಗಡೆ ಹೆಚ್ಚಾಗಿದ್ದು ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಆದರೂ ಸಂಚಾರಿ ಪೊಲೀಸರು ಮತ್ತು ಪಾಲಿಕೆಯ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ, ಮಳಿಗೆ ನಿರ್ಮಾಣ ಮಾಡಿದವರನ್ನು ಪ್ರಶ್ನೆ ಮಾಡದೆ ನಾಲಿಗೆಯನ್ನು ಕಳೆದುಕೊಂಡಿದ್ದಾರೆ.

ಯಾವ ಮಹಾಶಯ ಹೇಳಿದನೋ ಗೊತ್ತಿಲ್ಲ. ಅವರವರ ಮನೆಗಳು ಇರುವ ಕನ್ಸರ್ ವೆನ್ಸಿಗಳ ಜಾಗ ಅವರಿಗೆ ಸೇರಿದ್ದು ಎಂದು. ಎಲ್ಲರೂ ತಮಗೆ ಸಾಧ್ಯವಿರುವಷ್ಟು ಒತ್ತುವರಿ ಮಾಡಿಕೊಂಡು ಪಕ್ಕದವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಅಳಲುತೋಡಿಕೊಳ್ಳುತ್ತಿದ್ದಾರೆ. ಅಶೋಕನಗರ ವಿನಾಯಕ ಆಸ್ಪತ್ರೆಯ ರಸ್ತೆಯಲ್ಲೂ ಕನ್ಸರ್ ವೆನ್ಸಿಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹೊರಪೇಟೆ ಸೇರಿದಂತೆ ತುಮಕೂರಿನ ಬಹುತೇಕ ಕಡೆ ಕನ್ಸರ್ ವೆನ್ಸಿಗಳ ಒತ್ತುವರಿಯಾಗಿವೆ. ಚರಂಡಿಯನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಲಾಗಿದೆ. ಹೀಗಾಗಿ ಸಿದ್ದಗಂಗಾ ಬಡಾವಣೆಯಲ್ಲಿ ಮಳೆ ಬಂದರೆ ಕೆರೆ ನಿರ್ಮಾಣವಾಗುತ್ತದೆ. ಸಾರ್ವಜನಿಕ ಸ್ವತ್ತು, ಸರ್ಕಾರಿ ಭೂಮಿ ಎಗ್ಗಿಲ್ಲದೆ ಒತ್ತುವರಿ ಮಾಡಿಕೊಂಡಿದ್ದರೂ ಜಿಲ್ಲಾಡಳಿತ, ಪಾಲಿಕೆ ಸತ್ತಂತೆ ವರ್ತಿಸುತ್ತಿದೆ.

ಸರ್ಕಾರಿ ಜಾಗದಲ್ಲಿ ಬಡವರು ಒಂದಿಂಚು ಒತ್ತುವರಿ ಮಾಡಿಕೊಂಡರೆ ತೆರವುಗೊಳಿಸುವ ಪಾಲಿಕೆ ಬಲಾಢ್ಯರ ಬಗ್ಗೆ ಮೌನ ವಹಿಸಿದೆ. ಕಸ್ತೂರಾ ಆಸ್ಪತ್ರೆ, ಉಪ್ಪಾರಹಳ್ಳಿಯಲ್ಲಿ ಖಾಸಗಿ ಕಾಲೇಜೊಂದನ್ನು ರಾಜಗಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಿದ್ದರೂ ಪಾಲಿಕೆ ಮಾತ್ರ ಅತ್ತ ತಿರುಗಿಯೂ ನೋಡುತ್ತಿಲ್ಲ. ಕಾಲೇಜುಗಳು, ದೇವಾಲಯಗಳು ಅಕ್ರಮವಾಗಿ ನಿರ್ಮಾಣಗೊಂಡಿವೆ. ಇಂತಹವರಿಗೆ ಪಾಲಿಕೆಯ ನಿಯಮಗಳು ಅನ್ವಯ ಆಗುವುದಿಲ್ಲವೇ? ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ನೀಡುವ ಕಟ್ಟಡದ ನಕಾಶೆಗಳನ್ನು ಸರಿಯಾಗಿ ಪರಿಶೀಲಿಸುವುದಿಲ್ಲವೇ? ನೆಪಮಾತ್ರಕ್ಕೆ ಕಟ್ಟಡಗಳ ನಕ್ಷೆಯನ್ನು ಪಡೆಯಲಾಗುತ್ತಿದೆಯೇ? ಪಾಲಿಕೆ ಆಯುಕ್ತ ಭೂಬಾಲನ್ ಹೇಳಬೇಕು. ಕನ್ಸರ್ ವೆನ್ಸಿಗಳನ್ನು ಒತ್ತುವರಿ ಮಾಡಿಕೊಂಡವರನ್ನು ತೆರೆಗೊಳಿಸುವ ಕೆಲಸಕ್ಕೆ ಕ್ರಮ ಕೈಗೊಳ್ಳಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...