Homeಮುಖಪುಟಟೆಲಿವಿಶನ್ ರೇಟಿಂಗ್ಸ್‌: ಮಾರ್ಗಸೂಚಿಗಳಲ್ಲಿ ಬದಲಾವಣೆ ತರಲು ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಟೆಲಿವಿಶನ್ ರೇಟಿಂಗ್ಸ್‌: ಮಾರ್ಗಸೂಚಿಗಳಲ್ಲಿ ಬದಲಾವಣೆ ತರಲು ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳಲ್ಲಿನ ಬದಲಾವಣೆಗಳ ಮೂಲಕ ದೃಢವಾದ, ಪಾರದರ್ಶಕ ಮತ್ತು ಜವಾಬ್ದಾರಿಯುತ ರೇಟಿಂಗ್ ವ್ಯವಸ್ಥೆಗೆ ಶಿಫಾರಸುಗಳನ್ನು ಮಾಡಲು ಸಮಿತಿಯನ್ನು ಕೋರಿದೆ

- Advertisement -
- Advertisement -

ಭಾರತದಲ್ಲಿ ಟೆಲಿವಿಶನ್ ರೇಟಿಂಗ್ಸ್‌ ಕುರಿತು ಮಾರ್ಗಸೂಚಿಗಳನ್ನು ಪರಿಶೀಲಿಸಲು ಕೇಂದ್ರವು ಸಮಿತಿಯನ್ನು ರಚಿಸಿದ್ದು, ನಾಲ್ಕು ಸದಸ್ಯರ ಸಮಿತಿಯ ನೇತೃತ್ವವನ್ನು ಪ್ರಸಾರ ಭಾರತಿಯ ಮುಖ್ಯಸ್ಥರಾದ ಶಶಿ ಎಸ್.ವೆಂಪತಿ ವಹಿಸಲಿದ್ದಾರೆ.

ಅಸ್ತಿತ್ವದಲ್ಲಿರುವ ಟೆಲಿವಿಶನ್ ರೇಟಿಂಗ್ಸ್ ಮಾರ್ಗಸೂಚಿಗಳಲ್ಲಿ ಬದಲಾವಣೆ ತರುವ ಮೂಲಕ ದೃಢವಾದ, ಪಾರದರ್ಶಕ ಮತ್ತು ಜವಾಬ್ದಾರಿಯುತ ರೇಟಿಂಗ್ ವ್ಯವಸ್ಥೆಗೆ ಶಿಫಾರಸುಗಳನ್ನು ಮಾಡಲು ಸಮಿತಿಯನ್ನು ಕೋರಿದೆ.

“ಮಾರ್ಗಸೂಚಿಗಳ ಕೆಲವು ವರ್ಷಗಳ ಕಾರ್ಯಾಚರಣೆಯ ಆಧಾರದ ಮೇಲೆ, ವಿಶೇಷವಾಗಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಇತ್ತೀಚಿನ ಶಿಫಾರಸುಗಳು, ವ್ಯವಸ್ಥೆಯನ್ನು ಪರಿಹರಿಸಲು ತಾಂತ್ರಿಕ ಪ್ರಗತಿಗಳು/ಆವಿಷ್ಕಾರಗಳನ್ನು ಗಮನದಲ್ಲಿಟ್ಟುಕೊಂಡು ಟೆಲಿವಿಶನ್ ರೇಟಿಂಗ್ಸ್ ಮಾರ್ಗಸೂಚಿಗಳ ಬಗ್ಗೆ ಹೊಸ ನೋಟದ ಅವಶ್ಯಕತೆಯಿದೆ. ವಿಶ್ವಾಸಾರ್ಹ ಮತ್ತು ಪಾರದರ್ಶಕ ರೇಟಿಂಗ್ ವ್ಯವಸ್ಥೆಯ ಕಾರ್ಯವಿಧಾನಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಭಾರತದಲ್ಲಿ ದೂರದರ್ಶನ ರೇಟಿಂಗ್ ವ್ಯವಸ್ಥೆಯ ವಿಭಿನ್ನ ಅಂಶಗಳನ್ನು ಅಧ್ಯಯನ ಮಾಡಲು ಒಂದು ಸಮಿತಿಯನ್ನು ರಚಿಸಲಾಗಿದೆ. ಏಕೆಂದರೆ ಈಗಾಗಲೇ ಇರುವ ವ್ಯವಸ್ಥೆ ಒಂದು ನಿರ್ದಿಷ್ಟ ಅವಧಿಗೆ ಮಾತ್ರ ವಿಕಸನಗೊಂಡವುಗಳಾಗಿವೆ” ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಧಿಸೂಚನೆ ತಿಳಿಸಿದೆ.

ಇದನ್ನೂ ಓದಿ: ಟಿಆರ್‌ಪಿ ಹಗರಣ: ವೀಕ್ಷಕರ ಸಂಖ್ಯೆ ಹೆಚ್ಚಿಸಲು 15 ಲಕ್ಷ ಪಾವತಿ ಮಾಡಿದ್ದ ರಿಪಬ್ಲಿಕ್ ಟಿವಿ!

ಸಮಿತಿಯು ಅಸ್ತಿತ್ವದಲ್ಲಿರುವ ಟೆಲಿವಿಶನ್ ರೇಟಿಂಗ್ಸ್ ವ್ಯವಸ್ಥೆಯ ಮೌಲ್ಯಮಾಪನವನ್ನು ಕೈಗೊಳ್ಳುತ್ತದೆ. ಕಾಲಕಾಲಕ್ಕೆ ಸೂಚಿಸಲಾದ TRAI ಶಿಫಾರಸುಗಳು, ಒಟ್ಟಾರೆ ಉದ್ಯಮದ ಸನ್ನಿವೇಶ ಮತ್ತು ಮಧ್ಯಸ್ಥಗಾರರ ಅಗತ್ಯತೆಗಳನ್ನು ಪರಿಹರಿಸುವುದು ಮತ್ತು ಬದಲಾವಣೆ ತರುವ ಮೂಲಕ ದೃಢವಾದ, ಪಾರದರ್ಶಕ ಮತ್ತು ಜವಾಬ್ದಾರಿಯುತ ರೇಟಿಂಗ್ ವ್ಯವಸ್ಥೆಗೆ ಶಿಫಾರಸುಗಳನ್ನು ಮಾಡುತ್ತದೆ ಎಂದು ಅದು ಹೇಳಿದೆ.

ಇತ್ತೀಚೆಗೆ ಕೇಳಿಬಂದಿರುವ ಟಿಆರ್‌ಪಿ ಹಗರಣದ ನಡುವೆ ಕೇಂದ್ರದ ಈ ಕ್ರಮವು ಬಹುಮುಖ್ಯವೆನಿಸಿದೆ.

ಮುಂಬೈ ಪೊಲೀಸರು ಇತ್ತೀಚೆಗೆ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ಹಗರಣವನ್ನು ಭೇದಿಸಿದ್ದಾರೆಂದು ಹೇಳಿಕೊಂಡಿದ್ದು, ಈ ಸಂಬಂಧ ನ್ಯೂಸ್ ಚಾನೆಲ್ ನೌಕರರು ಸೇರಿದಂತೆ ಕನಿಷ್ಠ ಐದು ಜನರನ್ನು ಬಂಧಿಸಿದ್ದಾರೆ.

ಆಪಾದಿತ ಹಗರಣದ ವಿವಾದಗಳು ಹೆಚ್ಚಾಗುತ್ತಿದ್ದಂತೆ, ಟಿಆರ್‌ಪಿ ಡೇಟಾವನ್ನು ಒದಗಿಸುವ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್), ಭಾಷೆಗಳಾದ್ಯಂತ ಸುದ್ದಿ ವಾಹಿನಿಗಳ ಸಾಪ್ತಾಹಿಕ ರೇಟಿಂಗ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.


ಇದನ್ನೂ ಓದಿ: Explainer: ಏನಿದು ಟಿಆರ್‌ಪಿ? ಹೇಗೆ ತಿರುಚಲಾಗುತ್ತದೆ? ರಿಪಬ್ಲಿಕ್ ಟಿವಿ ಸಿಕ್ಕಿಬಿದ್ದಿದ್ದು ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...