Homeಮುಖಪುಟಟ್ವಿಟ್ಟರ್‍ ವಾರ್ ನಲ್ಲಿ ಬಿಜೆಪಿಯ ರಾಜೀವ್ ಚಂದ್ರಶೇಖರ್‍ಗೆ ಸರಿಯಾಗಿ ತಿರುಗೇಟು ಕೊಟ್ಟ ಸಿದ್ದರಾಮಯ್ಯ

ಟ್ವಿಟ್ಟರ್‍ ವಾರ್ ನಲ್ಲಿ ಬಿಜೆಪಿಯ ರಾಜೀವ್ ಚಂದ್ರಶೇಖರ್‍ಗೆ ಸರಿಯಾಗಿ ತಿರುಗೇಟು ಕೊಟ್ಟ ಸಿದ್ದರಾಮಯ್ಯ

- Advertisement -
- Advertisement -

ಟ್ವಿಟ್ಟರ್‍ನಲ್ಲಿ ಪ್ರಖರವಾಗಿ ಬರೆಯುವ ಮೂಲಕ ಖ್ಯಾತಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಟಿಪ್ಪು ಸುಲ್ತಾನ್ ಕುರಿತಂತೆ ಇಮ್ರಾನ್ ಖಾನ್ ಟ್ವೀಟ್ ಒಂದನ್ನು ಆಧಾರವಾಗಿಟ್ಟುಕೊಂಡು ಸಿದ್ದರಾಮಯ್ಯನವರ ಕಾಲೆಳೆಯಲು ಬಂದ ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್‍ಗೆ ಸರಿಯಾಗಿ ತಿರುಗೇಟು ನೀಡಿ ಬಾಯಿ ಮುಚ್ಚಿಸಿದ್ದಾರೆ.

ನಿನ್ನೆ ಮೇ 04ರಂದು ಟಿಪ್ಪು ಹುತಾತ್ಮದಿನದ ನೆನಪಿನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ರವರು ‘ಇಂದು ಮೇ ನಾಲ್ಕು ಟಿಪ್ಪು ವೀರ ಮರಣ ಹೊಂದಿದ ದಿನ. ನಾನು ಅತಿ ಹೆಚ್ಚು ಮೆಚ್ಚುವ ಮನುಷ್ಯ ಟಿಪ್ಪು ಆಗಿದ್ದು, ಗುಲಾಮಗಿರಿ ವಿರೋಧಿಸಿ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿದ್ದರಿಂದಲೇ ಅವರು ಮರಣ ಹೊಂದಬೇಕಾಯಿತು” ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ಎಂಪಿ ರಾಜೀವ್ ಚಂದ್ರಶೇಖರ್ “ಪ್ರೀತಿಯ ಸಿದ್ದರಾಮಯ್ಯನವರೆ, ಶೆರ್ರಿ @ಆನ್ ಟಾಪ್ (ನವಜೋತ್‍ಸಿಂಗ್ ಸಿಧು) ರವರಂತೆ ಇಮ್ರಾನ್‍ಜಿ ಮತ್ತು ಬಾಜ್‍ವಾಜ್‍ಜಿ ಯನ್ನು ಅಪ್ಪಿಕೊಳ್ಳುವ ಸುಸಂದರ್ಭ ನಿಮಗೆ ಬಂದಿದೆ. ಇದು ಮಾತ್ರವೆ ನೀವು ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರ ಮೆಚ್ಚುಗೆ ಪಡೆಯಲು ಅತಿ ಸುಲಭದ ದಾರಿ. ಜಸ್ಟ್ ಡು ಇಟ್” ಎಂದು ಟ್ವೀಟ್ ಮಾಡುವ ಮೂಲಕ ಛೇಡಿಸಿದ್ದರು.

ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯನವರು “ಶ್ರೀ ರಾಜೀವ್ ಚಂದ್ರಶೇಖರ್‍ರವರೆ ನೀವು ಟ್ವೀಟ್ ಮಾಡುವ ಮುಂಚೆ ಯೋಚಿಸಿ. ನಾನು ನಮ್ಮ ಶತ್ರು ರಾಷ್ಟ್ರದ ಪ್ರಧಾನಿಯೊಂದಿಗೆ ಬಿರಿಯಾನಿ ತಿಂದು ಬಂದ ನಿಮ್ಮ ಚೋರ್ ಪ್ರಧಾನಮಂತ್ರಿಯಂತಲ್ಲ. ಜೊತೆಗೆ ನಾನು ನಿಮ್ಮಂತೆ ನಿಮ್ಮ ಬಾಸ್ ಅನ್ನು ಸಂತುಷ್ಟಗೊಳಿಸಲು ರಾಜಿ ಸಹ ಆಗುವುದಿಲ್ಲ. ನಿಮ್ಮ ಬಾಸ್‍ಗಾಗಿ ಗುಲಾಮರಂತೆ ಬದುಕುತ್ತಿರುವ ನಿಮಗಿಂತ ಟಿಪ್ಪು ಸುಲ್ತಾನ್ ತರಹ ಬದುಕುವುದು ಲೇಸು” ಎಂದು ತಿರುಗೇಟು ನೀಡಿದ್ದಾರೆ.

ರಾಜೀವ್‍ರವರ ಟ್ವೀಟ್‍ಗೆ ಸಿದ್ದರಾಮಯ್ಯನವರ ಕೊಟ್ಟ ಮರುಉತ್ತರದ ಟ್ವೀಟ್ ಈಗಾಗಲೇ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಜೀವ್‍ರವರು ಬೇಕಂತಲೇ ಸಿದ್ದರಾಮಯ್ಯನವರಿಂದ ಏಟು ತಿನ್ನಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ. ಇನ್ನು ಕೆಲವರು ಸಿದ್ದರಾಮಯ್ಯ ಸರಿಯಾಗಿಯೇ ಮಾತಾಡಿದ್ದಾರೆ. ಆದರೆ ಎಲ್ಲಿಯ ಟಿಪ್ಪು ಸುಲ್ತಾನ್, ಎಲ್ಲಿಯ ರಾಜೀವ್ ಚಂದ್ರಶೇಖರ್ ಹೋಲಿಕೆ? ಈ ಬಿಜೆಪಿಯವರನ್ನು ಟಿಪ್ಪು ಸುಲ್ತಾನ್ ರೊಂದಿಗೆ ಹೋಲಿಸಬೇಡಿ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...