Homeಮುಖಪುಟಉಮರ್ ಖಾಲಿದ್ ಬಂಧನಕ್ಕೆ ಟ್ವಿಟರ್‌ನಲ್ಲಿ ಖಂಡನೆ: #StandWithUmarKhalid ಟ್ರೆಂಡಿಂಗ್

ಉಮರ್ ಖಾಲಿದ್ ಬಂಧನಕ್ಕೆ ಟ್ವಿಟರ್‌ನಲ್ಲಿ ಖಂಡನೆ: #StandWithUmarKhalid ಟ್ರೆಂಡಿಂಗ್

ಈ ವರದಿ ಬರೆಯುವ ವೇಳೆಗೆ ಉಮರ್ ಖಾಲಿದ್ ಬಂಧನವನ್ನು ಖಂಡಿಸಿ, ಟ್ವಿಟರ್‌ನಲ್ಲಿ ಸುಮಾರು 2 ಲಕ್ಷದ 51 ಸಾವಿರ ಟ್ವೀಟ್‌ಗಳನ್ನು ಮಾಡಲಾಗಿದೆ.

- Advertisement -
- Advertisement -

ದೆಹಲಿ ಪೊಲೀಸರ ವಿಶೇಷ ಸೆಲ್, ದೆಹಲಿ ಗಲಭೆಗೆ ಸಂಬಂಧಿಸಿದಂತೆ ನಿನ್ನೆ ಜೆಎನ್‌ಯು ಮಾಜಿ ವಿದ್ಯಾರ್ಥಿ ಮುಖಂಡರಾದ ಉಮರ್ ಖಾಲಿದ್ ಅವರನ್ನು ಬಂಧಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. #StandWithUmarKhalid ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ.

ಶನಿವಾರ ಸಮನ್ಸ್ ಹೊರಡಿಸಿ, ಲೋಧಿ ಕಾಲೋನಿಯಲ್ಲಿರುವ ವಿಶೇಷ ಸೆಲ್‌ಗೆ ತನಿಖೆಗೆ ಹಾಜರಾಗುವಂತೆ ಉಮರ್ ಖಾಲಿದ್‌ಗೆ ಭಾನುವಾರ ನೋಟೀಸ್ ನೀಡಲಾಗಿತ್ತು. ಈ ಹಿಂದೆ ಜುಲೈ 31 ರಂದು ಅವರ ಫೋನ್ ವಶಪಡಿಸಿಕೊಂಡಾಗ ಆತನನ್ನು ವಿಚಾರಣೆಗೊಳಪಡಿಸಲಾಗಿತ್ತು. ಭಾನುವಾರ ವಿಚಾರಣೆಯ ನಂತರ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವರದಿ ಬರೆಯುವ ವೇಳೆಗೆ ಉಮರ್ ಖಾಲಿದ್ ಬಂಧನವನ್ನು ಖಂಡಿಸಿ, ಟ್ವಿಟರ್‌ನಲ್ಲಿ ಸುಮಾರು 2 ಲಕ್ಷದ 51 ಸಾವಿರ ಟ್ವೀಟ್‌ಗಳನ್ನು ಮಾಡಲಾಗಿದೆ.

ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರಾದ ಯೋಗೇಂದ್ರ ಯಾದವ್ ಟ್ವೀಟ್ ಮಾಡಿ, “ಯಾವುದೇ ರೂಪದ ಹಿಂಸೆ ಮತ್ತು ಕೋಮುವಾದವನ್ನು ವಿರೋಧಿಸುತ್ತಿದ್ದ ಆದರ್ಶವಾದಿ ಮತ್ತು ಚಿಂತಕನಾಗಿರುವ ವಿದ್ಯಾರ್ಥಿಯನ್ನು ಬಂಧಿಸಲು UAPA ಕಾನೂನನ್ನು ಬಳಸಿರುವುದರಿಂದ ನಿಜಕ್ಕೂ ನನಗೆ ಆಶ್ಚರ್ಯವಾಗಿದೆ. ಭಾರತದ ಭವಿಷ್ಯವನ್ನು ದೀರ್ಘಕಾಲ ಬಂಧಿಸಲಾಗದು” ಎಂದು ಹೇಳಿದ್ದಾರೆ.

CPIMLನ ಪೊಲೈಟ್‌ಬರೋನ ಸದಸ್ಯರಾಗಿರುವ ಕವಿತಾ ಕೃಷ್ಣನ್ ಟ್ವೀಟ್ ಮಾಡಿ, “ಸರಿಯಾಗಿ ಮಾತನಾಡುವ ಚಿತ್ರ ಇದು” ಎಂದು ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, “ಏಕತೆ, ಶಾಂತಿ ಮತ್ತು ಪ್ರೇಮದ ಬಗ್ಗೆ ಮಾತನಾಡಿದ್ದರ ಫಲಿತಾಂಶ ಬಂಧನ. ಬಹಿರಂಗವಾಗಿ ಹಿಂಸೆಗೆ ಕರೆ ಕೊಟ್ಟರೆ ಬಂಧನದಿಂದ ಮುಕ್ತಿ. ಜೆಎನ್‌ಯುನಲ್ಲಿನ ಹಿಂಸೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ದಾವೂದ್ ಖಾನ್ ಎಂಬುವವರು ಟ್ವೀಟ್ ಮಾಡಿ, “ಉಮರ್ ಖಾಲಿದ್ ದೆಹಲಿಯ ಗಲಭೆಯಲ್ಲಿ ಭಾಗವಹಿಸಿದ್ದಕ್ಕೆ ಸಂಬಂಧಿಸಿದ ಚಿತ್ರಗಳಿವು” ಎಂದು ಬಂದೂಕುಧಾರಿ ವ್ಯಕ್ತಿ ಮತ್ತು ಮುಸುಕುಧಾರಿ ಮಹಿಳೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇವರಿಬ್ಬರೂ ಬಿಜೆಪಿ ಪರವಾಗಿ ಸಿಎಎ ವಿರುದ್ಧದ ಪ್ರತಿಭಾಟನಾಕಾರರ ಮೇಲೆ ದಾಳಿ ನಡೆಸಿದ್ದರು.

 

ಹೀಗೆ ಸಾವಿರಾರು ಟ್ವಿಟ್ಟರ್ ಬಳಕೆದಾರರು ಉಮರ್ ಖಾಲಿದ ಪರ ಪೋಸ್ಟ್‌ಗಳನ್ನು ಹಾಕುವುದರ ಮೂಲಕ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಸಿಎಎ ವಿರೋಧಿಗಳ ಬೇಟೆ: ದೆಹಲಿ ಗಲಭೆಗೆ ಉಮರ್‌ ಖಾಲಿದ್‌‌ರನ್ನು ಸಿಲುಕಿಸಿದ್ದು ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...