Homeಮುಖಪುಟಸಚಿವೆ ಸ್ಮೃತಿ ಇರಾನಿ ಕ್ಷೇತ್ರದಲ್ಲಿ ಅಡ್ಡಗೋಡೆಯಿಲ್ಲದೆ 4 ಸಾರ್ವಜನಿಕ ಶೌಚಾಲಯ ನಿರ್ಮಾಣ

ಸಚಿವೆ ಸ್ಮೃತಿ ಇರಾನಿ ಕ್ಷೇತ್ರದಲ್ಲಿ ಅಡ್ಡಗೋಡೆಯಿಲ್ಲದೆ 4 ಸಾರ್ವಜನಿಕ ಶೌಚಾಲಯ ನಿರ್ಮಾಣ

- Advertisement -
- Advertisement -

ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಅಡ್ಡ ಗೋಡೆಯಿಲ್ಲದೆ ನಾಲ್ಕು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು, ಇದೀಗ ಸಾರ್ವಜನಿಕ ಶೌಚಾಲಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ.

ವಿಡಿಯೋ ವೈರಲ್ ಆದ ಬಳಿಕ ಅಮೇಥಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ. ಆದರೆ  ಮಕ್ಕಳಿಗಾಗಿ ಇಂತಹ ಶೌಚಾಲಯ ನಿರ್ಮಿಸಲಾಗಿದೆ ಎಂದು ಅಧಿಕಾರಿಯೋರ್ವರು ಸಮರ್ಥಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಜಗದೀಶ್‌ಪುರ ವಿಧಾನಸಭೆಯ ಕಟೆಹೆಟಿ ಗ್ರಾಮದ ಸಮುದಾಯ ಶೌಚಾಲಯದಲ್ಲಿ ಅಕ್ಕಪಕ್ಕದಲ್ಲಿ ನಾಲ್ಕು ಆಸನಗಳನ್ನು ಹಾಕಲಾಗಿದ್ದು, ಅವುಗಳ ನಡುವೆ ಗೋಡೆಗಳಿಲ್ಲ. ಈ ಶೌಚಾಲಯದ ವೀಡಿಯೋ ಮಾಡಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದಾರೆ.

ವೈರಲ್‌ ವಿಡಿಯೋ ನೋಡಿ ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ವಿಡಿಯೋವನ್ನು ಯುಪಿ ಕಾಂಗ್ರೆಸ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಅಮೇಥಿ ಸಂಸದೆ, ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರನ್ನು ಟೀಕಿಸಿದೆ.

ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, ಅಮೇಥಿಯಲ್ಲಿ ನಿರ್ಮಿಸಲಾದ ಈ ಸಾರ್ವಜನಿಕ ಶೌಚಾಲಯವನ್ನು ವಿಶ್ವದ ಎಂಟನೇ ಅದ್ಭುತ ಎಂದು ಘೋಷಿಸಿದರೆ ಹೇಗಿರುತ್ತದೆ? ನೋಡಿ, ಇಲ್ಲಿ ಐದು ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಅವುಗಳ ನಡುವೆ ಗೋಡೆ ಇಲ್ಲ. ಬದಲಿಗೆ ಒಂದು ಸಭಾಂಗಣದಲ್ಲಿ ಐದು ಹಾಸಿಗೆಗಳು ಮಲಗಿರುವಂತೆ ಅವುಗಳನ್ನು ಜೋಡಿಸಲಾಗಿದೆ. ವಿಷಯವೆಂದರೆ ಎಲ್ಲಾ ಗೋಡೆಗಳಿಗೆ ಹಣ ಬಂದಿರಬೇಕು, ಹಾಗಾದರೆ ಅವುಗಳನ್ನು ಯಾರು ತಿನ್ನುತ್ತಾರೆ? ಗುತ್ತಿಗೆದಾರರ? ಅಧಿಕಾರಿಗಳಾ? ಮಂತ್ರಿಗಳ ಅಥವಾ ಎಲ್ಲರೂ ಒಟ್ಟಾಗಿ ತಿಂದಿದ್ದಾರಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ವಿಡಿಯೋ ವೈರಲ್ ಆದ ನಂತರ ಆಡಳಿತಾಧಿಕಾರಿಗಳು ತರಾತುರಿಯಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸಿದರು ಮತ್ತು ಈ ಶೌಚಾಲಯವನ್ನು ಚಿಕ್ಕ ಮಕ್ಕಳ ಬಳಕೆಗಾಗಿ ಮಾಡಲಾಗಿದೆ ಎಂದು ಅಧಿಕಾರಿಗಳು ವೈರಲ್ ವಿಡಿಯೋದಲ್ಲಿ ಹೇಳಿದ್ದಾರೆ.

ಗ್ರಾಮದ ಮುಖಂಡ ಜಾವಾದ್ ಈ ಬಗ್ಗೆ ಮಾತನಾಡಿದ್ದು, ಈ ಶೌಚಾಲಯ ನನ್ನ ಅವಧಿಯಲ್ಲಿ ನಿರ್ಮಾಣವಾಗಿಲ್ಲ. ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದರು. ಏನೇ ಕೊರತೆ ಇದ್ದರೂ ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನು ಓದಿ: ಗುಜರಾತ್‌: ಶೋಭಾಯಾತ್ರೆ ವೇಳೆ ಕಲ್ಲು ತೂರಾಟ; ಪೊಲೀಸರು ಸೇರಿ ಹಲವರಿಗೆ ಗಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...