Homeಸಿನಿಮಾಕ್ರೀಡೆಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ರೋಚಕ ಗೆಲುವು - ಪ್ಲೇ ಆಫ್ ಪ್ರವೇಶಕ್ಕೆ ಎರಡೇ ಹೆಜ್ಜೆ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ರೋಚಕ ಗೆಲುವು – ಪ್ಲೇ ಆಫ್ ಪ್ರವೇಶಕ್ಕೆ ಎರಡೇ ಹೆಜ್ಜೆ

- Advertisement -
- Advertisement -

ಪುಣೇರಿ ಪಲ್ಟನ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳ ವಿರುದ್ಧ ಕಡೆ ನಿಮಿಷಗಳಲ್ಲಿ ಕೂದಲೆಳೆ ಅಂತರದಲ್ಲಿ ಸೋಲು ಕಂಡಿದ್ದ ಬೆಂಗಳೂರು ಬುಲ್ಸ್ ತಂಡ ದಬಾಂಗ್ ಡೆಲ್ಲಿ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸುವ (52-49) ಮೂಲಕ ಮತ್ತೆ ಜಯದ ಹಾದಿಗೆ ಮರಳಿದೆ. ಆ ಮೂಲಕ ಪ್ರೇ ಆಫ್ ಹಂತಕ್ಕೆ ಪ್ರವೇಶ ಪಡೆಯಲು ಇನ್ನು ಎರಡೇ ಹೆಜ್ಜೆ ಬಾಕಿಯಿದೆ.

ಭಾನುವಾರ ರಾತ್ರಿ ಹೈದರಾಬಾದ್‌ನ ಗಚಿಬೋಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೆ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ದಬಾಂಗ್ ಡೆಲ್ಲಿ ತಂಡವನ್ನು ಮೂರು ಅಂಕಗಳಿಂದ ಬಗ್ಗು ಬಡಿಯಿತು. ಒಂದು ಹಂತದಲ್ಲಿ ದೆಹಲಿಗಿಂತ 13 ಅಂಕ ಹಿಂದಿದ್ದ ಬೆಂಗಳೂರು ತಂಡ ದ್ವಿತಿಯಾರ್ಧದಲ್ಲಿ ಭರತ್ ನೀಡಿದ ಭರ್ಜರಿ ಪ್ರದರ್ಶನ ಬಲದಿಂದ ಪ್ರಬಲ ಕಮ್ ಬ್ಯಾಕ್ ಮಾಡಿ ಜಯ ಒಲಿಸಿಕೊಂಡಿತು. 24 ರೈಡ್‌ಗಳಿಂದ 23 ರೈಡ್ ಗಳಿಸಿದ ಭರತ್ ಹೂಡಾ ಪ್ಲೇಯರ್ ಆಫ್‌ ದಿ ಮ್ಯಾಚ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅಲ್ಲದೆ ಟೂರ್ನಿಯಲ್ಲಿ ಅತ್ಯಧಿಕ ರೈಡ್ ಪಾಯಿಂಟ್ ಗಳಿಸಿದ (219) ಮೊದಲಿಗರಾದರು.

ಪಂದ್ಯದ ಗತಿ ಬದಲಿಸಿದ ವಿಕಾಸ್ ಖಂಡೋಲ

ಬೆಂಗಳೂರು ಬುಲ್ಸ್ ತಂಡದ ಮುಖ್ಯ ರೈಡರ್ ವಿಕಾಸ್ ಖಂಡೋಲ ಸಾಧರಣ ಪ್ರದರ್ಶನಕ್ಕೆ ಸೀಮಿತಗೊಂಡಿದ್ದರು. ಆದರೆ ದಬಾಂಗ್ ಡೆಲ್ಲಿ ವಿರುದ್ಧ ಅವರು ಮಾಡಿದ ಸೂಪರ್ ರೈಡ್ (ಒಂದೇ ರೈಡ್‌ನಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸುವುದು) ಪಂದ್ಯದ ಗತಿಯನ್ನೆ ಬದಲಿಸಿತು. ಪಂದ್ಯದ ಆರಂಭದಿಂದಲೂ ಪಾರಮ್ಯ ಮೆರೆದಿದ್ದ ದೆಹಲಿ ತಂಡ ಮೊದಲಾರ್ಧ ಮುಗಿಯುವ ಹೊತ್ತಿಗೆ 12 ಪಾಯಿಂಟ್ ಲೀಡ್ ಪಡೆದಿತ್ತು. ಆದರೆ ಮೊದಲಾರ್ಧದ ಕೊನೆಯ ರೈಡ್ ಮಾಡಿದ ವಿಕಾಸ್ ಒಂದೇ ರೈಡ್‌ನಲ್ಲಿ ಮೂರು ಜನರನ್ನು ಔಟ್ ಮಾಡುವ ಮೂಲಕ ಅಂತರವನ್ನು ಕೇವಲ 9 ಪಾಯಿಂಟ್‌ಗೆ ಇಳಿಸಿದರೂ ಮಾತ್ರವಲ್ಲ ಮೂರು ಜನರನ್ನು ಕೋರ್ಟ್‌ನಿಂದ ಹೊರಹಾಕಿದರು. ಇದು ಪಂದ್ಯದ ಗತಿಯನ್ನೇ ಬದಲಿಸಿತು. ವಿಕಾಸ್ ಖಂಡೋಲ 14 ರೈಡ್‌ಗಳಿಂದ 10 ಪಾಯಿಂಟ್ ಗಳಿಸಿ ಈ ಆವೃತ್ತಿಯಲ್ಲಿ ತಮ್ಮ 3ನೇ ಸೂಪರ್ ಟೆನ್ ಗಳಿಸಿದರು.

ದ್ವಿತಿಯಾರ್ಧದಲ್ಲಿ ಗೂಳಿಯಂತೆ ಆರ್ಭಟಿಸಿದ ಭರತ್

ಮೊದಲಾರ್ಧದಲ್ಲಿ ಪದೇ ಪದೇ ಔಟ್ ಆಗಿ 10 ನಿಮಿಷಕ್ಕಿಂತ ಹೆಚ್ಚು ಕಾಲ ಕೋರ್ಟ್‌ನಿಂದ ಹೊರಗುಳಿದಿದ್ದ ಭರತ್ ದ್ವಿತಿಯಾರ್ಧದಲ್ಲಿ ಮಿಂಚಿದರು. ತಮ್ಮ ರನ್ನಿಂಗ್ ಹ್ಯಾಂಡ್ ಟಚ್ ಸ್ಕಿಲ್ ಮೂಲಕ ದ್ವೀತಿಯಾರ್ಧದ ಕೇವಲ 2 ನಿಮಿಷದಲ್ಲಿ ದೆಹಲಿಯನ್ನು ಆಲೌಟ್ ಮಾಡಿದರು. ಹಾಗಾಗಿ ಅಂತರ ಕೇವಲ 5 ಅಂಕಕ್ಕೆ ಇಳಿಯಿತು.

ಆದರೆ ಮತ್ತೊಂದು ಕಡೆ ಬೆಂಗಳೂರು ಬುಲ್ಸ್ ಡಿಫೆಂಡರ್‌ಗಳು ಕೈಚೆಲ್ಲಿದ ಕಾರಣ ಮತ್ತೊಮ್ಮೆ ಬೆಂಗಳೂರು ಆಲೌಟ್ ಆಗಬೇಕಾಯಿತು. ಆಗ ದೆಹಲಿ 36 ಪಾಯಿಂಟ್ ಇದ್ದರೆ ಬೆಂಗಳೂರು ಕೇವಲ 25 ಪಾಯಿಂಟ್ ಇತ್ತು. ಅಂತರ ಮತ್ತೆ 11 ಪಾಯಿಂಟ್‌ಗಳಿಗೇರಿತ್ತು. ಆದರೆ ಕೊನೆಯ ಹತ್ತು ನಿಮಿಷ ಇರುವಂತೆ ಭರತ್ ಸಿಡಿದೆದ್ದರು. ಕೇವಲ 5-10 ಸೆಕೆಂಡ್‌ಗಳ ರೈಡ್‌ಗಳಲ್ಲಿಯೇ ಪಾಯಿಂಟ್ ಗಳಿಸಿದರು. ಕಡೆಯ 4 ನಿಮಿಷದ ಆಟ ಇರುವಂತೆ ಡೆಲ್ಲಿ ಮತ್ತೆ ಆಲೌಟ್‌ ಆಯ್ತು. ಆದರೂ ದೆಹಲಿ ಮೂರು ಪಾಯಿಂಟ್‌ಗಳಿಂದ ಮುಂದಿತ್ತು. ಆದರೆ ಭರತ್ ಛಲಬಿಡದೆ ಆಡಿ ಗೂಳಿಯಂತೆ ಆರ್ಭಟಿಸಿದರು. ಸತತ ಎರಡು ಮಲ್ಟಿ ಪಾಯಿಟ್ ರೈಡ್ ಮಾಡಿ ದಬಾಂಗ್ ಡೆಲ್ಲಿ ಕೋರ್ಟ್ ಖಾಲಿ ಮಾಡಿಸಿದರು. ಕೊನೆಯ ಡು ಆರ್ ಡೈ ನಲ್ಲಿಯೂ ಒಂದು ಪಾಯಿಂಟ್ ಹೆಕ್ಕಿ ಮೂರು ಪಾಯಿಂಟ್‌ಗಳ ಗೆಲುವಿನ ಸಂಭ್ರಮ ಆಚರಿಸಿದರು.

23 ರೈಡ್ ಪಾಯಿಂಟ್ ಗಳಿಸಿದ ಭರತ್ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಪಾಯಿಂಟ್ ಗಳಿಸಿದ ತಮ್ಮ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಹಿಂದಿನ ದಬಾಂಗ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿಯೂ ಅವರು 20 ಪಾಯಿಂಟ್ ಗಳಿಸಿದ್ದರು.

ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಬೆಂಗಳೂರು

ಇದುವರೆಗೆ ಆಡಿದ 18 ಪಂದ್ಯಗಳಲ್ಲಿ 11 ಗೆಲುವು, 6 ಸೋಲು ಮತ್ತು ಒಂದು ಟೈನೊಂದಿಗೆ 63 ಅಂಕ ಗಳಿಸಿರುವ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನೊಂದಿಗೆ ಪ್ಲೇ ಆಫ್‌ ಕಡೆ ಮುಖ ಮಾಡಿದೆ. ಪುಣೇರಿ ಪಲ್ಟಾನ್ ತಂಡ 69 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಬೆಂಗಳೂರು ತಂಡ ಎರಡನೇ ಸ್ಥಾನದಲ್ಲಿ ಅಥವಾ ಮೊದಲ ಸ್ಥಾನದಲ್ಲಿ ಉಳಿದುಕೊಂಡರೆ ಮಾತ್ರ ಅದು ನೇರವಾಗಿ ಸೆಮಿಫೈನಲ್ ತಲುಪಲು ಸಾಧ್ಯ. ಆದರೆ ಕೇವಲ 17 ಪಂದ್ಯಗಳಲ್ಲಿ 59 ಅಂಕ ಗಳಿಸಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಎರಡನೇ ಸ್ಥಾನಕ್ಕೆ ಸವಾಲೊಡ್ಡುತ್ತಿದೆ.

ಈ ಆವೃತ್ತಿಯಲ್ಲಿ ಅತಿ ಉತ್ತಮ ಪ್ರದರ್ಶನ ನೀಡಿರುವ ಈ ಎರಡು ತಂಡಗಳು ಮುಂದಿನ ಬುಧವಾರ ಪರಸ್ಪರ ಕಣಕ್ಕಿಳಿಯುತ್ತಿವೆ. ಅಲ್ಲಿ ಗೆದ್ದವರು ಎರಡನೇ ಸ್ಥಾನದಲ್ಲಿ ಮುಂದುವರೆಯುವ ಸಾಧ್ಯತೆಯಿದೆ.

ಬೆಂಗಳೂರು ತಂಡಕ್ಕೆ ಲೀಗ್ ಹಂತದಲ್ಲಿ ಇನ್ನು 4 ಪಂದ್ಯಗಳು ಬಾಕಿ ಇವೆ. ಈ ನಾಲ್ಕರಲ್ಲಿ ಎರಡು ಪಂದ್ಯ ಗೆದ್ದರೆ ಅದು ಸುಲಭವಾಗಿ ಪ್ಲೇ ಆಫ್ ತಲುಪಲಿದೆ. ಆದರೆ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಅಗ್ರ 2ನೇ ಸ್ಥಾನದೊಳಗಿರುವುದು ಉತ್ತಮ. ಅದಕ್ಕಾಗಿ ಅದು ಕನಿಷ್ಟ 3 ಅಥವಾ ನಾಲ್ಕೂ ಪಂದ್ಯಗಳನ್ನು ಗೆಲ್ಲಬೇಕಿದೆ. ಏಕೆಂದರೆ ಪ್ಲೇ ಆಫ್‌ಗೆ 6 ತಂಡಗಳು ಅರ್ಹತೆ ಪಡೆದರೆ, ಅವುಗಳಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ 2 ತಂಡಗಳು ನೇರವಾಗಿ ಸೆಮಿಫೈನಲ್ ತಲುಪುತ್ತವೆ. ಉಳಿದ ನಾಲ್ಕು ತಂಡಗಳು ಎಲಿಮಿನೇಟರ್ ಪಂದ್ಯಗಳಲ್ಲಿ ಸೆಣಸಿ ಗೆದ್ದ 2 ತಂಡಗಳು ಸೆಮಿಫೈನಲ್ ತಲುಪಬೇಕಿದೆ.

ಪ್ಲೇ ಆಫ್ ಹೀಗಿರಲಿದೆ

ಒಟ್ಟು 12 ತಂಡಗಳಲ್ಲಿ ಅಂಕಪಟ್ಟಿಯಲ್ಲಿ ಅಗ್ರ 6 ರೊಳಗಿನ ತಂಡಗಳು ಪ್ಲೇ ಆಫ್ ಪ್ರವೇಶಿಸಿದರೆ ಉಳಿದ 6 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ. ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ನೇರವಾಗಿ ಸೆಮಿಫೈನಲ್ ತಲುಪುತ್ತವೆ.

ಡಿಸೆಂಬರ್ 13ರಂದು 2 ಎಲಿಮಿನೇಟರ್ ಪಂದ್ಯಗಳು ನಡೆಯುತ್ತವೆ. ಒಂದು ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೂರು ಮತ್ತು ಆರನೇ ಸ್ಥಾನ ಪಡೆದ ತಂಡಗಳು ಸ್ಪರ್ಧಿಸಿದರೆ ಮತ್ತೊಂದು ಪಂದ್ಯದಲ್ಲಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದ ತಂಡಗಳು ಸ್ಪರ್ಧಿಸುತ್ತವೆ. ಗೆದ್ದವರು ಸೆಮಿಫೈನಲ್ ಪ್ರವೇಶಿಸುತ್ತಾರೆ. ಸೋತವರು ಮನೆಗೆ ನಡೆಯುತ್ತಾರೆ.

ಡಿಸೆಂಬರ್ 15ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆದರೆ, ಡಿಸೆಂಬರ್ 17 ರಂದು ಫೈನಲ್ ಪಂದ್ಯ ನಡೆಯಲಿದೆ.

ಇದುವರೆಗಿನ ಪ್ರೊ ಕಬಡ್ಡಿ ಚಾಂಪಿಯನ್‌ಗಳು

ಮೊದಲ ಆವೃತ್ತಿ 2014: ಜೈಪುರ್ ಪಿಂಕ್ ಪ್ಯಾಂಥರ್ಸ್

ಎರಡನೇ ಆವೃತ್ತಿ 2014: ಯು ಮುಂಬಾ

ಮೂರನೇ ಆವೃತ್ತಿ 2015: ಪಟ್ನಾ ಪೈರೇಟ್ಸ್

ನಾಲ್ಕನೇ ಆವೃತ್ತಿ 2016: ಪಟ್ನಾ ಪೈರೇಟ್ಸ್

ಐದನೇ ಆವೃತ್ತಿ 2017: ಪಟ್ನಾ ಪೈರೇಟ್ಸ್

ಆರನೇ ಆವೃತ್ತಿ 2018: ಬೆಂಗಳೂರು ಬುಲ್ಸ್

ಏಳನೇ ಆವೃತ್ತಿ 2019: ಬೆಂಗಾಲ್ ವಾರಿಯರ್ಸ್

ಎಂಟನೇ ಆವೃತ್ತಿ 2021: ದಬಾಂಗ್ ಡೆಲ್ಲಿ

ಇದನ್ನೂ ಓದಿ: 2024ರ ಟಿ20 ವಿಶ್ವಕಪ್‌ಗೆ 20 ತಂಡಗಳು!: ಹೊಸ ಫಾರ್ಮ್ಯಾಟ್ ಘೋಷಿಸಿದ ಐಸಿಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....