Homeಮುಖಪುಟಲೈಂಗಿಕ ದೌರ್ಜನ್ಯಕ್ಕೊಳಗಾದ ಚೆನ್ನೈ ವಿದ್ಯಾರ್ಥಿನಿಯ ಅಸಹಜ ಸಾವು - ಪ್ರತಿಭಟನೆ

ಲೈಂಗಿಕ ದೌರ್ಜನ್ಯಕ್ಕೊಳಗಾದ ಚೆನ್ನೈ ವಿದ್ಯಾರ್ಥಿನಿಯ ಅಸಹಜ ಸಾವು – ಪ್ರತಿಭಟನೆ

- Advertisement -
- Advertisement -

ನಿರಂತರ ಲೈಂಗಿಕ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿಯೊಬ್ಬಳು ಡೆತ್‌ನೋಟ್‌ ಬರೆದಿಟ್ಟು ಪ್ರಾಣ ಕಳೆದುಕೊಂಡಿರುವ ಅಮಾನವೀಯ, ಅನ್ಯಾಯದ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ.

ಚೆನ್ನೈನ ಪೂನಮಲ್ಲಿ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ತನ್ನ ತರಗತಿ ಪ್ರಾಧ್ಯಾಪಕನೊಬ್ಬನಿಂದ ನಿರಂತರ ಲೈಂಗಿಕ ಕಿರುಕುಳ ಅನುಭವಿಸಿ, ಮನನೊಂದು ಆತ್ಮಹತ್ಯೆಗೆ ಬಲಿಯಾಗಿದ್ದಾರೆ. ತನಗೆ ಅನ್ಯಾಯವಾಗಿದೆ, ನನಗೆ ನ್ಯಾಯ ಕೊಡಿಸಿ ಎಂದು ಆಕೆ ಪತ್ರ ಬರೆದಿಟ್ಟಿದ್ದಾರೆ. ಆದರೆ, ತನ್ನ ಸಾವಿಗೆ ಯಾರು ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿಲ್ಲ.

ಹೆಣ್ಣಿಗೆ ತಾಯಿಯ ಗರ್ಭ ಮತ್ತು ಸಮಾಧಿ ಎರಡೇ ಸುರಕ್ಷಿತ. ಬೇರೆ ಎಲ್ಲೂ ಆಕೆ ಸುರಕ್ಷಿತಳಲ್ಲ. ವಿದ್ಯೆ ಕಲಿಸುವ ಶಾಲೆಯೂ ಸುರಕ್ಷಿತವಲ್ಲ. ಶಿಕ್ಷಕರನ್ನೂ ನಂಬಲು ಸಾಧ್ಯವಿಲ್ಲ. ನನಗಾದ ಅನ್ಯಾಯ ಯಾರಿಗೂ ಆಗದಿರಲಿ, ಸಾಯುವುದು ಬಿಟ್ಟರೆ ಬೇರೇನೂ ನನಗೆ ಉಳಿದಿಲ್ಲ ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.

ಶಾಲೆ ಸೇರಿದಂತೆ ಯಾವುದೇ ಸ್ಥಳವೂ ಹೆಣ್ಣಿಗೆ ಸುರಕ್ಷಿತವಲ್ಲ. ಶಿಕ್ಷಕರನ್ನೂ, ಸಂಬಂಧಿಗಳನ್ನೂ ನಂಬಬೇಡಿ. ಈ ಸಮಾಜವನ್ನೂ ನಂಬಬೇಡಿ. ನನಗೆ ಕೆಲವು ಘಟನೆಗಳು ದುಸ್ವಪ್ನದಂತೆ ಕಾಡುತ್ತಿವೆ. ನನಗೆ ನಿದ್ರೆ ಮಾಡುಲೂ ಆಗುತ್ತಿಲ್ಲ. ಓದಿನ ಮೇಲೆ ಗಮನವನ್ನು ಕೇಂದ್ರೀಕರಿಸಲೂ ಸಾಧ್ಯವಾಗುತ್ತಿಲ್ಲ. ತನ್ನ ಸಾವಿನ ನಂತರವಾದರೂ ಇಂಥಹ ಲೈಂಗಿಕ ಕಿರುಕುಳಗಳು ನಿಲ್ಲಲಿ ಎಂದು ವಿದ್ಯಾರ್ಥಿನಿ ಬರೆದಿದ್ದಾರೆ.

ಆಕೆಯ ಡೆತ್‌ನೋಟ್‌ ಪಡೆದುಕೊಂಡು ಮಂಗಾಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ, ಕಾಲೇಜಿನ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಆತನೇ ವಿದ್ಯಾರ್ಥಿನಿಯ ಸಾವಿಗೆ ಕಾರಣ ಎಂದು ಕಾಲೇಜಿನಲ್ಲಿ ಓದುತ್ತಿದ್ದ ಇತರ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ. 

ವಿದ್ಯಾರ್ಥಿನಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಸಾವಿನ ನಂತರ, ಕಾಲೇಜಿನ ವಿದ್ಯಾರ್ಥಿಗಳು ಆರೋಪಿತ ಪ್ರಾಧ್ಯಾಪಕ ಅಬ್ರಹಾಂ ಅಲೆಕ್ಸ್ ಎಂಬುವವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಆತನ ಅಸಭ್ಯ ವರ್ತನಗಳ ಬಗ್ಗೆ ಈ ಹಿಂದೆಯೇ ದೂರು ನೀಡಿದ್ದರೂ ಕಾಲೇಜು ಆಡಳಿತ ಮಂಡಳಿ ಆತನ ವಿರುದ್ದ ಕ್ರಮ ಕೈಗೊಳ್ಳಲಿಲ್ಲ. ಆತನ್ನು ಬಂಧಿಸಬೇಕು. ಆತನಿಗೆ ಶಿಕ್ಷೆಯಾಗಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಾಧ್ಯಾಪಕನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಲೈಂಗಿಕ ದೌರ್ಜನ್ಯ ಎನ್ನುವುದು ಅತಿ ಕ್ರೂರ ಅಪರಾಧವಾಗಿದೆ. ಅದಕ್ಕೆ ತೀವ್ರತೆರನಾದ ಶಿಕ್ಷೆ ವಿಧಿಸಲಾಗುತ್ತದೆ. 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಪೊಕ್ಸೊ ಕಾಯ್ದೆಯಡಿ ಬರಲಿದ್ದು, ಆರೋಪಿಯೇ ತಾನು ತಪ್ಪಿತಸ್ಥನಲ್ಲ ಎಂದು ಸಾಬೀತುಪಡಿಸಬೇಕಾಗುತ್ತದೆ. ಈ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದರ ಜೊತೆಗೆ ಅತ್ಯಾಚಾರಕ್ಕೆ ತೀವ್ರ ಶಿಕ್ಷೆಯಿದೆಯೆಂದು ಸರ್ಕಾರ ಎಲ್ಲೆಡೆ ಪ್ರಚಾರ ಮಾಡಬೇಕಿದೆ. ಜೊತೆಗೆ ಮಹಿಳಾ ಸಮಾನತೆ, ರಕ್ಷಣೆ ಮತ್ತು ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆ ಮೂಲಕ ಅತ್ಯಾಚಾರಗಳೆಂಬ ಹೀನ ಕೃತ್ಯಗಳನ್ನು ತಡೆಯಲು ಸಾಧ್ಯ.

(ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ

ಕರ್ನಾಟಕ ಆರೋಗ್ಯ ಸಹಾಯವಾಣಿ – 104)


ಇದನ್ನೂ ಓದಿ: 2020ರಲ್ಲಿ ದಿನವೊಂದಕ್ಕೆ ಸರಾಸರಿ 31 ಅಪ್ರಾಪ್ತ ಮಕ್ಕಳು ಆತ್ಮಹತ್ಯೆ: ಒಕ್ಕೂಟ ಸರ್ಕಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Hi sir,
    I am daily follower of your gauri.com
    Thank you so much for your valuable information about reality and fact check

    So now I am requesting you that like me so many friends of mine they have lost money in receiving so many offer messages from fake channels

    So you want take it serious and collect information about it in your way publish in Gauri.com

    Thank you

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...