Homeಮುಖಪುಟಪನಾಮ ಪೇಪರ್ಸ್ ಪ್ರಕರಣ: ನಟಿ ಐಶ್ವರ್ಯಾ ರೈ ಬಚ್ಚನ್‌ಗೆ ಸಮನ್ಸ್

ಪನಾಮ ಪೇಪರ್ಸ್ ಪ್ರಕರಣ: ನಟಿ ಐಶ್ವರ್ಯಾ ರೈ ಬಚ್ಚನ್‌ಗೆ ಸಮನ್ಸ್

- Advertisement -
- Advertisement -

ಪನಾಮ ಪೇಪರ್ಸ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟಿ ಐಶ್ವರ್ಯಾ ರೈ ಬಚ್ಚನ್‌ರವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿಗೊಳಿಸಿದೆ.

ಪನಾಮ ಪೇಪರ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಮುಂದೂಡುವಂತೆ ಮನವಿ ಮಾಡಲಾಗಿತ್ತು. ಈ ಹಿಂದೆ ಐಶ್ವರ್ಯಾ ರೈಗೆ ಎರಡು ಬಾರಿ ಸಮನ್ಸ್ ನೀಡಿದಾಗ ಅವರು ಕಾಲಾವಕಾಶ ಕೋರಿದ್ದರು. ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

ಪನಾಮ ಪೇಪರ್‌ ಪ್ರಕರಣವು ಪ್ರಪಂಚದಾದ್ಯಂತ ಅನೇಕ ವ್ಯಕ್ತಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಂದ ವಂಚನೆ ಮತ್ತು ತೆರಿಗೆ ವಂಚನೆಯ ಸೋರಿಕೆಯಾದ ದಾಖಲೆಗಳಿಗೆ ಸಂಬಂಧಿಸಿದೆ. ತೆರಿಗೆ ತಪ್ಪಿಸುವುದಕ್ಕಾಗಿ ಪನಾಮ ದೇಶದ ನಕಲಿ ಸಂಸ್ಥೆಗಳ ಮೂಲಕ ಅನಧಿಕೃತ ಹೂಡಿಕೆ ಮಾಡಿದ್ದರು ಎಂದು 2016ರಲ್ಲಿ ದಾಖಲೆಗಳನ್ನು ಸೋರಿಕೆ ಮಾಡಲಾಗಿತ್ತು.

ಸೋರಿಕೆಯಾದ ದಾಖಲೆಗಳನ್ನು ಮೂಲತಃ ಜರ್ಮನಿಯ ಸುದ್ದಿಪತ್ರಿಕೆ ಸುಡ್ಡೆಚ್ ಝೈತುಂಗ್ ಪಡೆದುಕೊಂಡಿದೆ. ಇವುಗಳಲ್ಲಿ ಕನಿಷ್ಠ 12,000 ಹೊಸ ದಾಖಲೆಗಳು ಭಾರತೀಯರಿಗೆ ಸಂಬಂಧಿಸಿವೆ. ಪನಾಮ ಮೂಲದ ಕಾನೂನು ಸಂಸ್ಥೆಯಾದ ಮೊಸಾಕ್ ಫೋನ್ಸೆಕಾ ದಾಖಲೆಗಳಲ್ಲಿ 500 ಕ್ಕೂ ಹೆಚ್ಚು ಭಾರತೀಯರನ್ನು ಹೆಸರಿಸಲಾಗಿದೆ. ಅದರಲ್ಲಿ ಐಶ್ವರ್ಯಾ ರೈ ಬಚ್ಚನ್‌ ಮತ್ತು ಅಮಿತಾಬ್ ಬಚ್ಚನ್ ಅವರ ಹೆಸರು ಸೇರಿವೆ.


ಇದನ್ನೂ ಓದಿ: ಪಂಡೋರ ಪೇಪರ್ಸ್‌: ತೆರಿಗೆ ವಂಚಿಸುವ ವ್ಯವಹಾರದಲ್ಲಿ ಸಚಿನ್‌, ಅಂಬಾನಿ ಹೆಸರು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಎಇಒ ಕ್ರೈಸ್ತ ಧರ್ಮದವರಲ್ಲ

0
ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿ (ಎಇಒ) ಆಗಿ ಯೇಸುರಾಜ್ ನೇಮಕಗೊಂಡಿದ್ದಾರೆ. ರಾಮನಗರ ಜಿಲ್ಲಾ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇಸುರಾಜ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ...