Homeಮುಖಪುಟಯುಪಿ: ಬಂದೂಕು ತೋರಿಸಿ 55 ವರ್ಷದ ದಲಿತ ಮಹಿಳೆ ಮೇಲೆ ಗ್ಯಾಂಗ್ ರೇಪ್

ಯುಪಿ: ಬಂದೂಕು ತೋರಿಸಿ 55 ವರ್ಷದ ದಲಿತ ಮಹಿಳೆ ಮೇಲೆ ಗ್ಯಾಂಗ್ ರೇಪ್

- Advertisement -
- Advertisement -

ಉತ್ತರ ಪ್ರದೇಶದ ಗೌತಮಬುದ್ದ ನಗರ ಜಿಲ್ಲೆಯ ಜೆವಾರ್‌ನಲ್ಲಿ 55 ವರ್ಷದ ದಲಿತ ಮಹಿಳೆಯ ಮೇಲೆ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರ ಎಸಗಿದ ಘಟನೆ ಭಾನುವಾರ ನಡೆದಿದೆ. ದುಷ್ಕರ್ಮಿಗಳು ಮಹಿಳೆಗೆ ಬಂದೂಕು ತೋರಿಸಿ ಬೆದರಿಸಿ, ಗ್ರಾಮದ ಸಮೀಪದ ಬಯಲೊಂದಕ್ಕೆ ಎಳೆದೊಯ್ದು ಅಲ್ಲಿ ಅವರ ಮೇಲೆ ಪೈಶಾಚಿಕ ಕೃತ್ಯವನ್ನು ಎಸಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸೋಮವಾದಂದು ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಇದರ ನಂತರ ಪ್ರಕರಣದ ಪ್ರಧಾನ ಆರೋಪಿಯನ್ನು ಬಂಧಿಸಲಾಗಿದೆ ಎಂದು ಬುಧವಾರ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ, ಇಬ್ಬರ ಬಂಧನ

ಈ ಘಟನೆಯನ್ನು ವಿರೋಧಿಸಿ ಬಿಎಸ್‌ಪಿ ಮತ್ತು ಕಾಂಗ್ರೆಸ್‌‌ ಪಕ್ಷಗಳು ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

“ಆರೋಪಿ ಮಹೇಂದ್ರನನ್ನು ಬುಧವಾರ ಜೇವರ್‌ನಲ್ಲಿರುವ ಆತನ ಹಳ್ಳಿಯ ಸಮೀಪದಿಂದ ಬಂಧಿಸಲಾಗಿದೆ. ಜೇವರ್ ಪೋಲಿಸ್, ವಿಶೇಷ ಕಾರ್ಯಾಚರಣೆ ಗುಂಪು ಮತ್ತು SWAT ನ ಜಂಟಿ ತಂಡವು ಆತನನ್ನು ಸೆರೆಹಿಡಿದಿದೆ” ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

“ಇನ್ನೊಬ್ಬ ವ್ಯಕ್ತಿಯನ್ನು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸಿದ ಘಟನೆಯ ಹಿನ್ನೆಲೆಯಲ್ಲಿ, ಮಹೇಂದ್ರನ ಬಗ್ಗೆ ಮಾಹಿತಿ ನೀಡಿ ಬಂಧನಕ್ಕೆ ಕಾರಣವಾದವರಿಗೆ ರೂ. 25,000 ಬಹುಮಾನವನ್ನು ಘೋಷಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರೈತರ ಹತ್ಯೆ ಪ್ರಕರಣ: ಉತ್ತರ ಪ್ರದೇಶ ಸರ್ಕಾರ ವಜಾ ಮಾಡಲು ಸಿದ್ದರಾಮಯ್ಯ ಆಗ್ರಹ

ಘಟನೆಗೆ ಸಂಬಂಧಿಸಿದಂತೆ, ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ಡಿ (ಗ್ಯಾಂಗ್‌ರೇಪ್), 352 (ಹಲ್ಲೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ-1989 ರ ಅಡಿಯಲ್ಲಿರುವ ಸೆಕ್ಷನ್‌ಗಳನ್ನು ಸಹ ಪ್ರಕರಣದಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಮಹೇಂದ್ರನ ವಿರುದ್ದ ಈ ಹಿಂದೆ ಮನೆ ಅತಿಕ್ರಮಣ ಮತ್ತು ಕಳ್ಳತನದ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆತ ಒಬ್ಬನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ ಎಂದು TNIE ವರದಿ ಮಾಡಿದೆ.

ಇತರ ಮೂವರು ಆರೋಪಿಗಳಲ್ಲಿ ಒಬ್ಬನನ್ನು ಮಹಿಳೆಯು ಪೊಲೀಸರು ತೋರಿಸಿದ ಚಿತ್ರದಿಂದ ಗುರುತಿಸಿದ್ದರು. ಹೀಗಾಗಿ ಸೋಮವಾರ ಒಬ್ಬನನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಮಕ್ಕಳಿಗೆ ಪ್ರತ್ಯೇಕ ತಟ್ಟೆ; ಮುಖ್ಯಶಿಕ್ಷಕಿ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...