Homeಮುಖಪುಟಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳಿಗೆ ಒತ್ತಾಯಿಸಿದ ಯುಪಿ ಶಿಕ್ಷಕಿ: ವಿಡಿಯೋ ವೈರಲ್

ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳಿಗೆ ಒತ್ತಾಯಿಸಿದ ಯುಪಿ ಶಿಕ್ಷಕಿ: ವಿಡಿಯೋ ವೈರಲ್

- Advertisement -
- Advertisement -

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಶಿಕ್ಷಕಿರೊಬ್ಬರು ಏಳು ವರ್ಷದ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಇನ್ನುಳಿದ ವಿದ್ಯಾರ್ಥಿಗಳಿಗೆ ಆದೇಶಿಸಿದ ಭಯಾನಕ ವಿಡಿಯೋವೊಂದು ಶುಕ್ರವಾರ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮನ್ಸೂರ್‌ಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್, ”ನಾವು ವೀಡಿಯೊವನ್ನು ನೋಡಿದ ನಂತರ ಆ ಮಗು ಮತ್ತು ಅವನ ಪೋಷಕರ ಹೇಳಿಕೆಗಳನ್ನು ದಾಖಲಿಸಿದ್ದೇವೆ. ಶಿಕ್ಷಕಿ ವಿರುದ್ಧ ಪ್ರಕರಣವನ್ನೂ ದಾಖಲಿಸುತ್ತೇವೆ” ಎಂದು ತಿಳಿಸಿದ್ದಾರೆ.

ಘಟನೆ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ ಕೂಡ ಪ್ರತಿಕ್ರಿಯಿಸಿದ್ದು, ”ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ಸಂಸ್ಥೆಯ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಮಗು ಖುಬಾಪುರ ಗ್ರಾಮದ ನೇಹಾ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಶುವಿಹಾರದಲ್ಲಿ ಓದುತ್ತಿದೆ ಎಂದು ಆತನ ಪೋಷಕರು ತಿಳಿಸಿದ್ದಾರೆ. ಮಗುವಿನ ತಂದೆ ಹೆಸರು ಇರ್ಷಾದ್ ತ್ಯಾಗಿ, ಅವರು ವೃತ್ತಿಯಲ್ಲಿ ರೈತರಾಗಿದ್ದಾರೆ. ಇನ್ನು ಶಿಕ್ಷಕಿಯನ್ನು ತ್ರಿಪ್ತಾ ತ್ಯಾಗಿ ಎಂದು ಗುರುತಿಸಲಾಗಿದೆ.

ವೈರಲ್ ಆಗಿರುವ ವೀಡಿಯೊದಲ್ಲಿ, ತರಗತಿಯ ಮುಂದೆ ನಿಂತಿದ್ದ ಮುಸ್ಲಿಂ ಹುಡುಗನನ್ನು ಒಬ್ಬ ವಿದ್ಯಾರ್ಥಿ ಹೊಡೆದ ನಂತರ, ಶಿಕ್ಷಕರು ಇತರ ವಿದ್ಯಾರ್ಥಿಗಳಿಗೂ ಹೊಡೆಯುವಂತೆ ಒತ್ತಾಯಿಸುವುದನ್ನು ನೋಡಬಹುದು.

ಈ ಬಗ್ಗೆ ಆ ಬಾಲಕನ ತಾಯಿ ರುಬೀನಾ ಮಾತನಾಡಿ, ”ನನ್ನ ಮಗ ನಿನ್ನೆ ಮನೆಗೆ ಬಂದಾಗ ಅಳುತ್ತಿದ್ದನು. ನಾವು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೋಮ್ ವರ್ಕ್ ಮಾಡದಿದ್ದಕ್ಕೆ ಟೀಚರ್ ಶಿಕ್ಷೆ ಕೊಟ್ಟಿರಬೇಕು ಎಂದುಕೊಂಡೆವು. ಆದರೆ ವೀಡಿಯೊವನ್ನು ನೋಡಿದಾಗ ನಮಗೆ ಆಘಾತವಾಯಿತು” ಎಂದು ಹೇಳಿದ್ದಾರೆ.

ಬಾಲಕನ ಸೋದರ ಸಂಬಂಧಿ ಮೊಹಮ್ಮದ್ ನದೀಮ್ (25) ಎನ್ನುವವರು ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಅವರು ಬೇರೆ ಯಾವುದೋ ಕೆಲಸಕ್ಕೆಂದು ಶಾಲೆಗೆ ಹೋಗಿದ್ದರು ಆ ವೇಳೆ ಈ ಘಟನೆ ನಡೆಯುತ್ತಿದ್ದಾಗ ವಿಡಿಯೋ ಚಿತ್ರಿಕರಿಸಿದ್ದಾರೆ ಎಂದು ಹೇಳಿದ್ದಾರೆ.

”ಅವನನ್ನು ಪ್ರತ್ಯೇಕವಾಗಿ ನಿಲ್ಲಿಸಲಾಗಿತ್ತು, ಶಿಕ್ಷಕರು ಆದೇಶಿಸಿದಂತೆ ಅವನ ಸಹಪಾಠಿಗಳು ಕಪಾಳಮೋಕ್ಷ ಮಾಡುವುದನ್ನು ನಾನು ನೋಡಿದೆ. ಆಗ ನಾನು ಯಾರ ಗಮನಕ್ಕೂ ಬಾರದಂತೆ ವಿಡಿಯೋ ಮಾಡಿದೆ. ಆ ಶಿಕ್ಷಕಿ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದರು” ಎಂದು ನದೀಮ್ ಹೇಳಿದ್ದಾರೆ.

ಹುಡುಗನ ತಂದೆ ಇರ್ಷಾದ್ ಮಾತನಾಡಿ, ”ಶಿಕ್ಷಕರು ನನ್ನ ಮಗನನ್ನು ಏಕೆ ಈ ರೀತಿ ನಡೆಸಿಕೊಂಡರು ಎಂದು ನಮಗೆ ತಿಳಿದಿಲ್ಲ. ಅವರು ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವುದು ದುಃಖಕರ ಸಂಗತಿ” ಎಂದು ಹೇಳಿದರು.

”ಸಮಾಜ ಧ್ರುವೀಕರಣಗೊಂಡಿದೆ, ಈ ಹಿಂದೂ-ಮುಸ್ಲಿಂ ವಿಷಯ ಶಾಲೆಗಳಿಗೂ ತಲುಪಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಮೂಲ ಶಿಕ್ಷಾ ಇಲಾಖೆಯ ಅಧಿಕಾರಿ ಶುಭಂ ಶುಕ್ಲಾ, ”ಶಿಕ್ಷಕಿ ಹಾಗೂ ಆ ಶಾಲೆಯ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶ; ಮುಸ್ಲಿಂ ಬಾಲಕನ ಥಳಿಸಿ ಕೊಲೆ; ಐವರು ಪೊಲೀಸರ ಮೇಲೆ ಎಫ್ ಐಆರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Very much hearting being Teacher we believe as Gurudevobghava such incidents should not repeat 💐🙏 see all as human beings. Even animals don’t discriminate like this

LEAVE A REPLY

Please enter your comment!
Please enter your name here

- Advertisment -

Must Read

ಅಮಿತ್‌ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರು ಮತ್ತು ಪೊಲೀಸರಿಂದ ಬೆದರಿಕೆ?

0
ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲಿ ಅಮಿತ್ ಶಾ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಗುಜರಾತ್‌ನ...