HomeಮುಖಪುಟUttar Pradesh Elections Result | ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಕಮಲ; ಹೀನಾಯವಾಗಿ ಸೋತ ಕಾಂಗ್ರೆಸ್...

Uttar Pradesh Elections Result | ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಕಮಲ; ಹೀನಾಯವಾಗಿ ಸೋತ ಕಾಂಗ್ರೆಸ್ & ಬಿಎಸ್ಪಿ

- Advertisement -
- Advertisement -

Uttar Pradesh Elections Result | ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂಪೂರ್ಣ ಫಲಿತಾಂಶ ಹೊರಬಿದ್ದಿದೆ. ಆಡಳಿತರೂಢ ಬಿಜೆಪಿ ಸತತ ಎರಡನೆ ಬಾರಿಗೆ ಅಧಿಕಾರಕ್ಕೆ ಏರುತ್ತಿದೆ. ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ 256 ಕ್ಷೇತ್ರವನ್ನು ಬಿಜೆಪಿ ಏಕಾಂಗಿಯಾಗಿ ಗೆದ್ದುಕೊಂಡಿದೆ.

ಪ್ರಮುಖ ವಿರೋಧ ಪಕ್ಷವಾಗಿರುವ ಸಮಾಜವಾದಿ ಪಕ್ಷ(ಎಸ್‌ಪಿ) ಚುನಾವಣಾ ಕಣದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, 110 ಕ್ಷೇತ್ರವನ್ನು ಗೆದ್ದುಕೊಂಡಿದೆ. ಆದರೆ ಈ ಹಿಂದೆ ರಾಜ್ಯ ಆಳಿದ್ದ ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಹೀನಾಯ ಸೋಲನ್ನು ಅನುಭವಿಸಿದೆ.

ಸಿರತು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರಾಜ್ಯದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಸೋಲನುಭವಿಸಿದ್ದಾರೆ. ಮುಖ್ಯಮಂತ್ರಿ ಆದಿತ್ಯನಾಥ್ ಅವರು ಗೋರಖ್‌ಪುರ ನಗರ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಗೆದ್ದುಕೊಂಡಿದ್ದಾರೆ.

ರೈತ ಹೋರಾಟದ ಕೇಂದ್ರವಾಗಿದ್ದ ಲಖೀಂಪುರ್‌ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಎಂಟು ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿದೆ.

ಬಿಜೆಪಿಯ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರು ಫೈಝಾನಗರ ಕ್ಷೇತ್ರದಲ್ಲಿ ಎಸ್‌ಪಿ ಟಿಕೆಟ್‌ನಿಂದ ಸ್ಪರ್ಧಿಸಿದ್ದರು. ಆದರೆ ಅವರು ಸೋಲುಂಡಿದ್ದಾರೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಕರ್ಹಾಲ್ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಪ್ರಮುಖ ವಿಪಕ್ಷವಾದ ಸಮಾಜವಾದಿ ಪಕ್ಷ 2017ರ ಚುನಾವಣೆಗಿಂತ ಉತ್ತಮ ಪ್ರದರ್ಶನ ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್‌‌ ತೀರಾ ಕಳಪೆ ಪ್ರದರ್ಶನ ನೀಡಿದೆ. ಬಿಎಸ್‌ಪಿ ಕೂಡಾ ತೀರಾ ಹಿನ್ನಡೆ ಅನುಭವಿಸಿದೆ.

2017ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಕೇವಲ 47 ಕ್ಷೇತ್ರಗಳನ್ನು ಗಳಿಸಿಕೊಂಡಿತ್ತು. ಬಿಜೆಪಿಯು 312 ಸ್ಥಾನಗಳನ್ನು ಪಡೆಯುವುದರೊಂದಿಗೆ ಭರ್ಜರಿಯಾಗಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಬಿಜೆಪಿ ತುಸು ಮುಗ್ಗರಿಸಿರುವುದು ಕಾಣುತ್ತಿದೆ.


ಉತ್ತರ ಪ್ರದೇಶ ಚುನಾವಣೆಯ ಅಂತಿಮ ಫಲಿತಾಂಶ ಹೀಗಿದೆ.

403 ಕ್ಷೇತ್ರಗಳಿರುವ ರಾಜ್ಯದಲ್ಲಿ ಬಹುಮತಕ್ಕೆ 202 ಕ್ಷೇತ್ರಗಳು ಸಾಕಾಗುತ್ತದೆ.

  • ಬಿಜೆಪಿ ಮೈತ್ರಿ – 274 Wins 
    ಎಸ್‌ಪಿ ಮೈತ್ರಿ – 124 Wins 
    ಕಾಂಗ್ರೆಸ್‌ – 2 Wins 

    ಬಿಎಸ್‌ಪಿ – 1 Wins 
    ಜೆಡಿಎ‌ಲ್‌ – 2 Wins 

  • ಪಕ್ಷವಾರು ಅಂತಿಮ ಫಲಿತಾಂಶ ಹೀಗಿದೆ
  • ಬಿಜೆಪಿ ಮೈತ್ರಿ – 274 Wins
    ಬಿಜೆಪಿ – 256 Wins
    ಎಡಿಎಸ್‌ – 12 Wins
    ನಿಶಾದ್‌ – 6 Wins
  • ಎಸ್‌ಪಿ ಮೈತ್ರಿ – 124 Wins
    ಎಸ್‌ಪಿ – 110 Wins
    ಆರ್‌ಎಲ್‌ಡಿ – 8 Wins
    ಎಸ್‌ಬಿಎಸ್‌ಪಿಎ – 6 Wins
  • ಕಾಂಗ್ರೆಸ್‌ – 2 Wins 
  • ಬಿಎಸ್‌ಪಿ – 1 Wins
  • ಜೆಡಿಎ‌ಲ್‌ – 2 Wins 

ಇದನ್ನೂ ಓದಿ: ವಿಶ್ಲೇಷಣೆ: ಮತ್ತೊಂದು ಆತ್ಮ ವಿಮರ್ಶೆಯ ಹೊಸ್ತಿಲಲ್ಲಿರುವ ಕಾಂಗ್ರೆಸ್ ಸೋತದ್ದೆಲ್ಲಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...