Homeಮುಖಪುಟನನಗೆ ನಾಚಿಕೆಯಾಗುವುದಿಲ್ಲ: ಮುಸ್ಲಿಂ ಬಾಲಕನ ಮೇಲೆ ಹಲ್ಲೆ ನಡೆಸುವಂತೆ ಸೂಚಿಸಿದ ಶಿಕ್ಷಕಿಯಿಂದ ಸಮರ್ಥನೆ

ನನಗೆ ನಾಚಿಕೆಯಾಗುವುದಿಲ್ಲ: ಮುಸ್ಲಿಂ ಬಾಲಕನ ಮೇಲೆ ಹಲ್ಲೆ ನಡೆಸುವಂತೆ ಸೂಚಿಸಿದ ಶಿಕ್ಷಕಿಯಿಂದ ಸಮರ್ಥನೆ

- Advertisement -
- Advertisement -

ವೈರಲ್ ವಿಡಿಯೋವೊಂದರಲ್ಲಿ ತಮ್ಮ ಮುಸ್ಲಿಂ ಸಹಪಾಠಿಗೆ ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ ಉತ್ತರ ಪ್ರದೇಶದ ಶಾಲಾ ಶಿಕ್ಷಕಿಯ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ,  ಆದರೆ ಘಟನೆಯನ್ನು ಸಮರ್ಥಿಸಿ  ಶಿಕ್ಷಕಿ ಹೇಳಿಕೆ ನೀಡಿರುವ ಬಗ್ಗೆ ಎನ್ ಡಿಟಿವಿ ವರದಿ  ಮಾಡಿದೆ.

ಮುಜಾಫರ್‌ನಗರದ ನೇಹಾ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ಆಗಿರುವ ತ್ರಿಪ್ತಾ ತ್ಯಾಗಿ  7 ವರ್ಷದ ಮುಸ್ಲಿಂ ಬಾಲಕನಿಗೆ ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದರು.

ವಿಡಿಯೋ ವೈರಲ್ ಬಳಿಕ ತೃಪ್ತಿ ತ್ಯಾಗಿ ಇದು ಘಟನೆ ಉದ್ದೇಶಿತವಾಗಿರಲಿಲ್ಲ. ಇದೊಂದು ಸಣ್ಣ ಸಮಸ್ಯೆ  ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತಿದ್ದೇನೆ.  ಆದರೆ ಇದನ್ನು ದೊಡ್ಡ ಸಮಸ್ಯೆಯಾಗಿ ಮಾರ್ಪಡಿಸಲಾಗಿದೆ.  ಬಾಲಕ ಕೆಲ ದಿನಗಳಿಂದ ಹೋಂ ವರ್ಕ್ ಮಾಡಿರಲಿಲ್ಲ. ಬಾಲಕನ ಕುಟುಂಬಸ್ಥರು ಬಾಲಕನ ವಿಚಾರದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದ್ದರು. ನಾನು ಅಂಗವಿಕಲೆ ನನಗೆ ಹೊಡೆಯಲು ಸಾಧ್ಯವಾಗಿಲ್ಲ, ಅದಕ್ಕೆ ಇತರ ಮಕ್ಕಳಲ್ಲಿ ಹೊಡೆಯುವಂತೆ ಹೇಳಿದೆ ಎಂದು ಸಮಜಾಯಿಸಿ ಕೊಟ್ಟಿದ್ದರು.

ಆದರೆ  ಬಳಿಕ ಆರೋಪಿ ಶಿಕ್ಷಕಿ ತ್ರಿಪ್ತ ತ್ಯಾಗಿ, ತನ್ನ ಕೃತ್ಯಕ್ಕೆ ನಾಚಿಕೆಪಡುವುದಿಲ್ಲ ಎಂದು ಹೇಳುತ್ತಾರೆ. ನನಗೆ ನಾಚಿಕೆಯಾಗುವುದಿಲ್ಲ. ನಾನು ಶಿಕ್ಷಕಿಯಾಗಿ ಈ ಗ್ರಾಮದ ಜನರಿಗೆ ಸೇವೆ ಸಲ್ಲಿಸಿದ್ದೇನೆ. ಅವರೆಲ್ಲರೂ ನನ್ನೊಂದಿಗೆ ಇದ್ದಾರೆ ಎಂದು ತ್ಯಾಗಿ ಹೇಳಿರುವ ಬಗ್ಗೆ  ಎನ್‌ಡಿಟಿವಿ ವರದಿ  ಮಾಡಿದೆ.

ತನ್ನ ಕೃತ್ಯವನ್ನು ಸಮರ್ಥಿಸಿಕೊಂಡ ಶಿಕ್ಷಕಿ  ಶಾಲೆಯಲ್ಲಿ ಮಕ್ಕಳನ್ನು ನಿಯಂತ್ರಿಸುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ. ಅವರು ಕಾನೂನುಗಳನ್ನು ಮಾಡಿದ್ದಾರೆ. ನಾವು ಶಾಲೆಗಳಲ್ಲಿ ಮಕ್ಕಳನ್ನು ನಿಯಂತ್ರಿಸಬೇಕಾಗಿದೆ ಎಂದು ತ್ಯಾಗಿ ಹೇಳಿದರು.

ಇದೀಗ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಕಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು  ಜಿಲ್ಲಾ ಮ್ಯಾಜಿಸ್ಟ್ರೇಟ್ ಅರವಿಂದ ಮಲ್ಲಪ್ಪ ಬಂಗಾರಿ ತಿಳಿಸಿದ್ದಾರೆ. ನಾವು ಸಂಪೂರ್ಣ ತನಿಖೆ ನಡೆಸಿದ್ದೇವೆ. ಮಗುವಿನ ತಂದೆಯ ದೂರಿನ ಮೇರೆಗೆ ನಾವು ಆರೋಪಿ ಶಿಕ್ಷಕಿ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದೇವೆ. ಶಿಕ್ಷಕಿ ವಿರುದ್ಧ ಇಲಾಖಾ ಕ್ರಮವನ್ನು ಕೂಡ ತೆಗೆದುಕೊಳ್ಳಲಾಗುತ್ತಿದೆ ಎಂದು ಬಂಗಾರಿ ಹೇಳಿದ್ದಾರೆ.

ಇದನ್ನು ಓದಿ: ಅಸ್ಸಾಂ: ಬಿಜೆಪಿ  ಸಂಸದರ ಮನೆಯಲ್ಲಿ ಬಾಲಕನ ಮೃತದೇಹ ಪತ್ತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...