Homeಅಂತರಾಷ್ಟ್ರೀಯಭಾರತದ ವಿರುದ್ಧ ಕೆನಡಾ ಪ್ರಧಾನಿಯ ಆರೋಪದ ಹಿಂದೆ ಗುಪ್ತಚರ ವರದಿ

ಭಾರತದ ವಿರುದ್ಧ ಕೆನಡಾ ಪ್ರಧಾನಿಯ ಆರೋಪದ ಹಿಂದೆ ಗುಪ್ತಚರ ವರದಿ

- Advertisement -
- Advertisement -

ಖಲಿಸ್ತಾನಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡದ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪದ ಹಿಂದೆ ಗುಪ್ತಚರ ವರದಿ ಇದೆ ಎಂದು ಕೆನಡಾದ ಯುಎಸ್ ರಾಯಭಾರಿ ತಿಳಿಸಿದ್ದಾರೆ.

‘ಫೈವ್ ಐಸ್ ಪಾರ್ಟನರ್ಸ್‌’ ಗುಪ್ತಚರ ವರದಿ ಭಾರತ ಸರ್ಕಾರ ಮತ್ತು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಡುವಿನ ಸಂಭಾವ್ಯ ಸಂಬಂಧದ ಬಗ್ಗೆ ಟ್ರೂಡೊ ಅವರಿಗೆ ತಿಳಿಸಿದೆ ಎಂದು ಕೆನಡಾದಲ್ಲಿ US ರಾಯಭಾರಿ ಡೇವಿಡ್ ಕೊಹೆನ್ ಹೇಳಿರುವ ಬಗ್ಗೆ CTV ನ್ಯೂಸ್ ಚಾನೆಲ್ ವರದಿ ಮಾಡಿದೆ.

‘ಫೈವ್ ಐಸ್’ ನೆಟ್‌ವರ್ಕ್ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ, ಕೆನಡಾ ಮತ್ತು ನ್ಯೂಜಿಲೆಂಡ್‌ ದೇಶಗಳನ್ನು ಒಳಗೊಂಡಿರುವ ಗುಪ್ತಚರ ಒಕ್ಕೂಟವಾಗಿದೆ.

ಕೆನಡಾದ ಯುಎಸ್ ರಾಯಭಾರಿ ಡೇವಿಡ್ ಕೊಹೆನ್ ಅವರು ಕೆನಡಾದ ಸುದ್ದಿ ಚಾನೆಲ್ CTV ಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ. ಆದರೆ ಕೆನಡಾ ಸರ್ಕಾರಕ್ಕೆ ತಿಳಿಸುವ ಗುಪ್ತಚರ ಮಾನವ ಮತ್ತು ಸಿಸಿಟಿವಿ ಆಧಾರಿತವಾಗಿದೆಯೇ ಅಥವಾ ಭಾರತೀಯ ರಾಜತಾಂತ್ರಿಕರ  ಮಾಹಿತಿ ಆಧರಿಸಿದೆಯೇ ಎಂಬುದನ್ನು ಅವರು ವಿವರಿಸಲಿಲ್ಲ.

ಕೆನಡಾದ ಪ್ರಜೆಯಾದ ಖಲಿಸ್ತಾನಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಸಂಭಾವ್ಯ ಕೈವಾಡದ ಬಗ್ಗೆ ಇತ್ತೀಚೆಗೆ ಜಸ್ಟಿನ್ ಟ್ರುಡೊ ಸ್ಫೋಟಕ ಆರೋಪವನ್ನು ಮಾಡಿದ್ದರು.

ಟ್ರುಡೊ ಅವರ ಆರೋಪಗಳನ್ನು ಭಾರತವು ಅಸಂಬದ್ಧ ಎಂದು ತಿರಸ್ಕರಿಸಿದೆ. ಈ ಪ್ರಕರಣದ ಬಳಿಕ ಭಾರತೀಯ ಅಧಿಕಾರಿಯನ್ನು ಕೆನಡಾದಲ್ಲಿ ಉಚ್ಚಾಟನೆ ಮಾಡಲಾಗಿತ್ತು. ಭಾರತವು ಕೆನಡಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ದೇಶಬಿಟ್ಟು ತೆರಳುವಂತೆ ಸೂಚಿಸಿತ್ತು. ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು.

ಇದನ್ನು ಓದಿ: 10 ವರ್ಷದ ಶಾಲಾ ವಿದ್ಯಾರ್ಥಿಗೆ ಅಮಾನುಷವಾಗಿ ಥಳಿಸಿದ ಶಿಕ್ಷಕ: ವಿಡಿಯೋ ವೈರಲ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...