Homeಅಂತರಾಷ್ಟ್ರೀಯಗಾಝಾದಲ್ಲಿ ಹತ್ಯಾಕಾಂಡ ನಡೆಸುತ್ತಿರುವ ಇಸ್ರೇಲ್‌ಗೆ 26 ಬಿಲಿಯನ್‌ ನೆರವು ಪ್ಯಾಕೇಜ್‌ ಅನುಮೋದಿಸಿದ ಅಮೆರಿಕ

ಗಾಝಾದಲ್ಲಿ ಹತ್ಯಾಕಾಂಡ ನಡೆಸುತ್ತಿರುವ ಇಸ್ರೇಲ್‌ಗೆ 26 ಬಿಲಿಯನ್‌ ನೆರವು ಪ್ಯಾಕೇಜ್‌ ಅನುಮೋದಿಸಿದ ಅಮೆರಿಕ

- Advertisement -
- Advertisement -

ಗಾಝಾದಲ್ಲಿ ಮಕ್ಕಳು, ಮಹಿಳೆಯರ ಸೇರಿದಂತೆ ಸಾವಿರಾರು ಮಂದಿಯ ಹತ್ಯಾಕಾಂಡವನ್ನು ನಡೆಸಿ ಕ್ರೌರ್ಯವನ್ನು ಮೆರೆದಿದ್ದ ಇಸ್ರೇಲ್‌ಗೆ ನೆರವು ನೀಡುವುದನ್ನು ಅಮೆರಿಕ ಮುಂದುವರಿಸಿದ್ದು, ಇಸ್ರೇಲ್‌ಗೆ 26 ಬಿಲಿಯನ್‌ ಮೌಲ್ಯದ ನೆರವು ಪ್ಯಾಕೇಜ್‌ನ್ನು ಅಮೆರಿಕ ಅನುಮೋದಿಸಿದೆ ಎಂದು ವರದಿಯಾಗಿದೆ.

ಗಾಝಾದ ಮೇಲೆ ದಾಳಿ ನಡೆಸಲು ಅಮೆರಿಕ ಈ ಮೊದಲು ಇಸ್ರೇಲ್‌ಗೆ ಯುದ್ಧ ವಿಮಾನಗಳು ಮತ್ತು ಶಸ್ತ್ರಾಸ್ತ್ರವನ್ನು ಕಳುಹಿಸಿಕೊಟ್ಟಿತ್ತು. ಇದಕ್ಕೆ ಅಂತರಾಷ್ಟ್ರೀಯ ಸಮುದಾಯ ಸೇರಿದಂತೆ ಅಮೆರಿಕದ ಪ್ರಜೆಗಳೇ ಬೈಡನ್‌ಗೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಗಾಝಾದಲ್ಲಿ ಹತ್ಯಾಕಾಂಡವನ್ನು ನಡೆಸುವ ಇಸ್ರೇಲ್‌ಗೆ ಬೆಂಬಲಿಸದಂತೆ ಅಮೆರಿಕದಲ್ಲಿ ಪ್ರತಿಭಟನೆ ನಡೆದಿದ್ದವು, ಆದರೆ ಇದೀಗ ಮತ್ತೆ ಇಸ್ರೇಲ್‌ಗೆ ಅಮೆರಿಕ ನೆರವನ್ನು ಘೋಷಿಸಿದೆ.

ಇಸ್ರೇಲ್‌ ಗಾಝಾ ಮೇಲೆ ದಾಳಿ ನಡೆಸಿ ಕಳೆದ ಆರು ತಿಂಗಳಲ್ಲಿ ನಡೆಸಿದ ಹತ್ಯಾಕಾಂಡಕ್ಕೆ 34,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇದೀಗ ಗಾಝಾದಲ್ಲಿನ ತುರ್ತು ಸೇವಾ ಘಟಕಗಳು ಖಾನ್ ಯೂನಿಸ್‌ನಲ್ಲಿರುವ ನಾಸರ್ ವೈದ್ಯಕೀಯ ಸಂಕೀರ್ಣದಲ್ಲಿರುವ ಅವಶೇಷಗಳಡಿಯಿಂದ 50 ಪ್ಯಾಲೆಸ್ತೀನ್‌ ನಾಗರಿಕರ ಶವಗಳನ್ನು ವಶಪಡಿಸಿಕೊಂಡಿದೆ.

ಗಾಝಾದ ದಕ್ಷಿಣದ ನಗರವಾದ ರಫಾದ ಮೇಲೆ ಇಸ್ರೇಲ್‌ ದಾಳಿಯ ನಂತರ ಕೊಲ್ಲಲ್ಪಟ್ಟ ಎಂಟು ಪ್ಯಾಲೆಸ್ತೀನಿಯಾದವರಲ್ಲಿ ಓರ್ವ ಗರ್ಭಿಣಿ ಮಹಿಳೆ ಮತ್ತು ಆರು ಮಕ್ಕಳು ಸೇರಿದ್ದಾರೆ. ಮಹಿಳೆಯ ಗರ್ಭದಲ್ಲಿರುವ ಮಗುವನ್ನು ರಕ್ಷಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ನೂರ್ ಶಮ್ಸ್ ನಿರಾಶ್ರಿತರ ಶಿಬಿರದ ಮೇಲೆ ದಾಳಿಯ ಸಮಯದಲ್ಲಿ ಇಸ್ರೇಲ್‌ ಪಡೆಗಳು 14 ಜನರನ್ನು ಕೊಂದಿವೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ, ನಬ್ಲಸ್‌ನ ದಕ್ಷಿಣಕ್ಕೆ ಹಿಂಸಾಚಾರದಲ್ಲಿ ಗಾಯಗೊಂಡ ಪ್ಯಾಲೆಸ್ತೀನಿಯನ್ನರನ್ನು ತಲುಪಲು ಪ್ರಯತ್ನಿಸುತ್ತಿದ್ದ ಆಂಬ್ಯುಲೆನ್ಸ್ ಚಾಲಕನನ್ನು ಗುಂಡಿಕ್ಕಿ ಕೊಂದಿದ್ದಾರೆ.

ಇಸ್ರೇಲ್‌ ಪಡೆಗಳು. ಆಕ್ರಮಿತ ವೆಸ್ಟ್ ಬ್ಯಾಂಕ್‌ನ ತುಲ್ಕರೆಮ್‌ನಲ್ಲಿರುವ ನೂರ್ ಶಮ್ಸ್ ನಿರಾಶ್ರಿತರ ಶಿಬಿರದ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದೆ. ರಫಾ ನಗರದ ಮಧ್ಯಭಾಗದಲ್ಲಿರುವ ಮನೆಯೊಂದರ ಮೇಲೆ ಇಸ್ರೇಲ್‌ ಬಾಂಬ್ ದಾಳಿ ನಡೆಸಿದ ಪರಿಣಾಮವಾಗಿ ಮೂವರು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಇಸ್ತಾನ್‌ಬುಲ್‌ನಲ್ಲಿ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರನ್ನು ಭೇಟಿಯಾದರು. ಯುಎಸ್‌ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗಾಝಾದ ಮೇಲಿನ ಯುದ್ಧ ಮತ್ತು ಇರಾನ್‌ನೊಂದಿಗಿನ ಉದ್ವಿಗ್ನತೆಯ ಮಧ್ಯೆ ಇಸ್ರೇಲ್‌ಗೆ 26 ಬಿಲಿಯನ್‌ ನಿಧಿಯನ್ನು ಅಂಗೀಕರಿಸಿದೆ ಎಂದು ವರದಿಯಾಗಿದೆ.

ಅಕ್ಟೋಬರ್ 7ರಿಂದ ಗಾಝಾದ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯಲ್ಲಿ ಕನಿಷ್ಠ 34,049 ಪ್ಯಾಲೆಸ್ತೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಮತ್ತು 76,901 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.  ಸಾವಿರಾರು ಕಟ್ಟಡಗಳು ಇಸ್ರೇಲ್‌ ದಾಳಿಗೆ ನೆಲಸಮವಾಗಿದ್ದು, ಲಕ್ಷಾಂತರ ಜನರು ಆಶ್ರಯವನ್ನು ಕಳೆದುಕೊಂಡು ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ಇದನ್ನು ಓದಿ: ಕನ್ನಡಿಗರಿಗೆ ಕೊಟ್ಟ ‘ಖಾಲಿ ಚೊಂಬಿ’ಗೆ ಕನ್ನಡಿಗರಿಂದ ‘ಖಾಲಿ ಕುರ್ಚಿ’ಯ ಉತ್ತರ: ಮೋದಿ ಸಭೆಯಲ್ಲಿ ಕುರ್ಚಿಗಳು ಖಾಲಿ-ಖಾಲಿ; ವಿಡಿಯೋ ಹಂಚಿಕೊಂಡ ಕಾಂಗ್ರೆಸ್

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...