Homeಮುಖಪುಟಉತ್ತರ ಪ್ರದೇಶ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಸುಳಿವು ನೀಡುತ್ತಿರುವ ಬಿಎಸ್‌ಪಿ

ಉತ್ತರ ಪ್ರದೇಶ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಸುಳಿವು ನೀಡುತ್ತಿರುವ ಬಿಎಸ್‌ಪಿ

- Advertisement -
- Advertisement -

2024ರ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ತಯಾರಿ ಆರಂಭಿಸಿವೆ. 15 ವಿರೋಧ ಪಕ್ಷಗಳು ಪಾಟ್ನಾದಲ್ಲಿ ಸಭೆ ಸೇರಿ ಬೃಹತ್ ವಿರೋಧ ಪಕ್ಷಗಳ ಒಕ್ಕೂಟ ಕಟ್ಟುವ ಕುರಿತು ಚರ್ಚೆ ನಡೆಸಿವೆ. ಆದರೆ ಆ ಮಹತ್ವದ ಸಭೆಗೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯವತಿಯವರನ್ನು ಆಹ್ವಾನಿಸಿರಲಿಲ್ಲ. 80 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಪ್ರದೇಶದಲ್ಲಿ ಒಂದು ಕಾಲದಲ್ಲಿ ಬಹುದೊಡ್ಡ ನಾಯಕಿಯಾಗಿದ್ದ, ನಾಲ್ಕು ಬಾರಿ ರಾಜ್ಯದ ಸಿಎಂ ಆಗಿದ್ದ ಮಾಯವತಿಯವರು ತಮ್ಮ ಹಿಂದಿನ ಗತವೈಭವಕ್ಕೆ ತೆರಳುವ ಆಲೋಚನೆಯಲ್ಲಿದ್ದಾರೆ. ಹಾಗಾಗಿ ಬೂತ್ ಮಟ್ಟದಿಂದ ಚುನಾವಣಾ ತಯಾರಿ ಶುರು ಮಾಡಿರುವ ಅವರು ಸ್ವತಂತ್ರವಾಗಿ ಬಿಎಸ್‌ಪಿ ಲೋಕಸಭಾ ಚುನಾವಣೆ ಎದುರಿಸುತ್ತದೆ ಎಂದು ಘೋಷಿಸಿದ್ದರೂ ಸಹ ಕಡೆ ಕ್ಷಣದಲ್ಲಿ ಕಾಂಗ್ರೆಸ್ ಜೊತೆಗೂಡಿ ಚುನಾವಣೆ ಎದುರಿಸಲು ಯೋಚಿಸುತ್ತಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ಅಂಕಣ ಪ್ರಕಟಿಸಿದೆ.

2004ರ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಬಿಎಸ್‌ಪಿ ಪಕ್ಷವು 80ರಲ್ಲಿ 19 ಸ್ಥಾನಗಳಲ್ಲಿ ಜಯ ಗಳಿಸಿತ್ತು. 2009ರಲ್ಲಿ ತೃತೀಯ ರಂಗದೊಂದಿಗೆ ಮೈತ್ರಿ ಮಾಡಿಕೊಂಡು 20 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಆದರೆ 2014ರಲ್ಲಿ ಬಿಎಸ್‌ಪಿ ಒಂದೂ ಸ್ಥಾನ ಗೆಲ್ಲದೆ ಧೂಳಿಪಟವಾಗಿತ್ತು. 2019ರಲ್ಲಿ ಮಹಾಘಟಬಂಧನ್ ಮೈತ್ರಿಕೂಟ ಮಾಡಿಕೊಂಡು ಸಮಾಜವಾದಿ ಪಕ್ಷದ ಜೊತೆಗೂಡಿ ಸ್ಪರ್ಧಿಸಿ 10 ಸ್ಥಾನಗಳನ್ನು ಗೆದ್ದುಕೊಂಡಿದೆ.

ವಿಧಾನಸಭಾ ಚುನಾವಣೆಗಳಿಗೆ ಬಂದರೆ 2002ರಲ್ಲಿ 403 ವಿಧಾನಸಭಾ ಸ್ಥಾನಗಳ ಪೈಕಿ 98ರಲ್ಲಿ ಬಿಎಸ್‌ಪಿ ಜಯ ಗಳಿಸಿತ್ತು. 2007ರಲ್ಲಿ 206 ಸ್ಥಾನಗಳಲ್ಲಿ ಗೆದ್ದು ಸ್ವತಂತ್ರವಾಗಿ ಅಧಿಕಾರ ಹಿಡಿದಿತ್ತು. 2012ರಲ್ಲಿ 80 ಸ್ಥಾನಗಳಿಗೆ ಕುಸಿದ ಬಿಎಸ್‌ಪಿಯು 2017ರಲ್ಲಿ ಕೇವಲ 19 ಸ್ಥಾನಗಳಿಗೆ ಸೀಮತಗೊಂಡಿತ್ತು. 2022ರಲ್ಲಿ ಇನ್ನೂ ಕುಸಿದು ಕೇವಲ 1 ಸ್ಥಾನವನ್ನಷ್ಟೇ ಪಡೆದಿದೆ.

ತಮ್ಮ ಭಾಷಣಗಳಲ್ಲಿ ಕಾಂಗ್ರೆಸ್ ಬಗ್ಗೆ ಮೃದು ಧೋರಣೆ ಅನುಸರಿಸುವಂತೆ ನಮ್ಮ ನಾಯಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಬಿಎಸ್‌ಪಿ ಮೂಲಗಳು ತಿಳಿಸಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ. ಪಾಟ್ನಾ ಸಭೆಗೆ ಕೆಲವು ದಿನಗಳ ಮೊದಲು ಯುಪಿ ನಾಯಕರೊಂದಿಗಿನ ಸಭೆಯ ನಂತರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ಮಾಯಾವತಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ವಿರುದ್ಧ ವಾಗ್ದಾಳಿ ನಡೆಸಿದ್ದರು, ಆದರೆ ಕಾಂಗ್ರೆಸ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. “ಕಾಂಗ್ರೆಸ್ ವಿರುದ್ಧ ಬಲವಾದ ಪದಗಳಿಂದ ದಾಳಿ ಮಾಡಬೇಡಿ ಎಂದು ನಾಯಕರಿಗೆ ಅನೌಪಚಾರಿಕವಾಗಿ ತಿಳಿಸಲಾಗಿದೆ. ಭವಿಷ್ಯಕ್ಕಾಗಿ ಪಕ್ಷವು ಮೈತ್ರಿಯ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡಿದೆ ಎಂದು ಬಿಎಸ್ಪಿ ನಾಯಕರೊಬ್ಬರು ಹೇಳಿದರು.

ಬಿಎಸ್‌ಪಿ ಸಂಸದರೊಬ್ಬರು, “ಬಿಎಸ್‌ಪಿ ಕಾಂಗ್ರೆಸ್‌ಗೆ ಮೃದು ಧೋರಣೆ ತೋರುತ್ತಿದೆ. ಮತ್ತು ಈ ಆಯ್ಕೆಯನ್ನು ಸಹ ಅನ್ವೇಷಿಸಬೇಕು. 2024 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಮೈತ್ರಿ ಆಯ್ಕೆ ಎಂದು ಪರಿಗಣಿಸಬಹುದು” ಎಂದಿದ್ದಾರೆ.

ಆದರೆ ಮಾಯಾವತಿಯವರು ಈ ಬಗ್ಗೆ ಎನನ್ನೂ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಅವರು ವಿರೋಧ ಪಕ್ಷಗಳ ಐಕ್ಯತೆಯ ಪಾಟ್ನಾ ಸಭೆಯಿಂದ ದೂರ ಉಳಿದಿದ್ದಲ್ಲದೆ, ಮನಸ್ಸು ಒಂದಾಗದೇ ಕೇವಲ ಕೈಕುಲುಕಿದರೆ ಲಾಭವಿಲ್ಲ ಎಂದು ಟೀಕಿಸಿದ್ದರು. ಜೂನ್ 15 ರಂದು ಅವರು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದರು.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಯಾವ ಮೈತ್ರಿಗಳು ಸಹ ನಿರೀಕ್ಷಿತ ಫಲಿತಾಂಶ ಪಡೆದಿಲ್ಲ. ಏಕೈಕ ಬಿಜೆಪಿ ಪಕ್ಷ ಮಾತ್ರ ಭರ್ಜರಿ ಫಲಿತಾಂಶ ಪಡೆದು ಸತತವಾಗಿ ಅಧಿಕಾರಿ ಹಿಡಿಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ಪಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸುತ್ತವೆಯೇ ಇಲ್ಲ ಮೈತ್ರಿಗೆ ಮುಂದಾಗುತ್ತವೆಯೇ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

ಇದನ್ನೂ ಓದಿ: ತಮಿಳುನಾಡಿನಂತೆ ಕರ್ನಾಟಕವೂ NEP ತಿರಸ್ಕರಿಸಬೇಕು: ಕಣ್ಕಟ್ಟು ಪುಸ್ತಕದ ಕುರಿತ ಸಂವಾದದಲ್ಲಿ ಎಸ್‌.ಜಿ ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...