Homeಮುಖಪುಟ8ನೇ ತರಗತಿ ಡ್ರಾಪ್‌ಔಟ್ ನಕಲಿ ವೈದ್ಯನಿಂದ ಸಿಸೇರಿಯನ್: ತಾಯಿ, ಹಸುಗೂಸು ಸಾವು

8ನೇ ತರಗತಿ ಡ್ರಾಪ್‌ಔಟ್ ನಕಲಿ ವೈದ್ಯನಿಂದ ಸಿಸೇರಿಯನ್: ತಾಯಿ, ಹಸುಗೂಸು ಸಾವು

- Advertisement -
- Advertisement -

ಕೇವಲ 8ನೇ ತರಗತಿ ಓದಿ ಅರ್ಧಕ್ಕೆ ಶಾಲೆ ಬಿಟ್ಟು, ತಾನು ಡಾಕ್ಟರ್‌ ಎಂದು ಹೇಳಿಕೊಂಡಿದ್ದ ವ್ಯಕ್ತಿ, ಕ್ಷೌರದ ರೇಜರ್ ಬ್ಲೇಡ್ ಬಳಸಿ ಮಹಿಳೆಗೆ “ಸಿಸೇರಿಯನ್” ಮಾಡಿದ ಪರಿಣಾಮ, ತಾಯಿ-ಹಸುಗೂಸು ಇಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಂನಲ್ಲಿ ನಡೆದಿದೆ.

ಎಂಟನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ 30 ವರ್ಷದ ರಾಜೇಂದ್ರ ಶುಕ್ಲಾ ಮತ್ತು ಮಾ ಶಾರದಾ ಆಸ್ಪತ್ರೆಯ ಮಾಲೀಕ ರಾಜೇಶ್ ಸಾಹ್ನಿ ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಶಸ್ತ್ರ ಚಿಕಿತ್ಸಕ ಎಂದು ಹೇಳಿಕೊಂಡಿರುವ ರಾಜೇಂದ್ರ ಶುಕ್ಲಾ ಗರ್ಭಿಣಿಯ ಆಪರೇಷನ್ ಮಾಡಿದ, ಒಂದು ಗಂಟೆಯಲ್ಲಿ ತಾಯಿ-ಮಗು ಇಬ್ಬರು ಪ್ರಾಣ ಬಿಟ್ಟಿದ್ದಾರೆ.

ಸುಲ್ತಾನಪುರ ಜಿಲ್ಲೆಯ ಸೈನಿ ಗ್ರಾಮದಲ್ಲಿರುವ ಮಾ ಶಾರದಾ ಖಾಸಗಿ ನರ್ಸಿಂಗ್ ಹೋಂ ಇಟ್ಟುಕೊಂಡಿರುವ ಈ ಇಬ್ಬರೂ ಕೂಡ ವೈದ್ಯಕೀಯ ಶಿಕ್ಷಣ ಪಡೆದಿಲ್ಲ. ಆರೋಪಿ ರಾಜೇಂದ್ರ ಶುಕ್ಲಾ ಎಂಟನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದರೇ, ಮಾ ಶಾರದಾ ಆಸ್ಪತ್ರೆಯ ಮಾಲೀಕ ರಾಜೇಶ್ ಸಾಹ್ನಿ 12ನೇ ತರಗತಿ ವ್ಯಾಸಂಗ ಮಾಡಿದ್ದಾರೆ.

ಇದನ್ನೂ ಓದಿ: ಅಸ್ಸಾಂ ವಿಧಾನಸಭಾ ಚುನಾವಣೆ – ಕಾಂಗ್ರೆಸ್ ಪ್ರಣಾಳಿಕೆ ಇಂದು ಬಿಡುಗಡೆ; ನೀಡಿದ ಭರವಸೆಗಳೇನು? 

ಪ್ರಕರಣದ ಬಗ್ಗೆ  ರಾಜರಾಂ ಎಂಬ ಸೈನಿ ಗ್ರಾಮಸ್ಥ ತನ್ನ ಪತ್ನಿ ಪೂನಂ (33) ಮತ್ತು ನವಜಾತ ಶಿಶು ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ದೂರ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ರಾಜೇಂದ್ರ ಶುಕ್ಲಾ ಮತ್ತು ರಾಜೇಶ್ ಸಾಹ್ನಿ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಸುಲ್ತಾನಪುರ ಎಸ್ಪಿ ಅರವಿಂದ ಚತುರ್ವೇದಿ ತಿಳಿಸಿದ್ದಾರೆ.

“ಈ ಮಾ ಶಾರದಾ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಲು ಯಾವುದೇ ಮೂಲಸೌಕರ್ಯಗಳಿಲ್ಲದ ಮತ್ತು ಇದೊಂದು ನೋಂದಾಯಿಸದ ಆಸ್ಪತ್ರೆ ಎಂದು ನಾವು ಕಂಡುಕೊಂಡಿದ್ದೇವೆ. ಸಿಸೇರಿಯನ್ ನಡೆಸಲು ಕ್ವಾಕ್ಸ್ ರೇಜರ್ ಬ್ಲೇಡ್‌ಗಳನ್ನು ಬಳಸಲಾಗಿದೆ” ಎಂದು ಅರವಿಂದ ಚತುರ್ವೇದಿ ಹೇಳಿದ್ದಾರೆ.

“ಬುಧವಾರ ರಾತ್ರಿ ಗರ್ಭಿಣಿ ಪೂನಂ ಹೆರಿಗೆ ನೋವಿನಲ್ಲಿರುವಾಗ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು,  ದೀಹ್ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಶಸ್ತ್ರಚಿಕಿತ್ಸ ವೇಳೆ ಪೂನಂಗೆ ರಕ್ತಸ್ರಾವ ಹೆಚ್ಚಾದಾಗ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಆರೋಪಿ ರಾಜೇಂದ್ರ ಶುಕ್ಲಾ ತಿಳಿಸಿದ್ದರು. ಹತ್ತಿರದಲ್ಲಿ ಆಕೆಗೆ ಚಿಕಿತ್ಸೆ ನೀಡಲು ಯಾವುದೇ ಆಸ್ಪತ್ರೆಯಿಲ್ಲದ ಕಾರಣ, ಆಕೆಯನ್ನು 140 ಕಿ.ಮೀ ದೂರದಲ್ಲಿ ಲಕ್ನೋದ ಕೆಜಿಎಂಯು ಕೇಂದ್ರಕ್ಕೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ಆಕೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಅಕ್ರಮ ಚಿಕಿತ್ಸಾಲಯಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರು ಮುಖ್ಯ ವೈದ್ಯಕೀಯ ಅಧಿಕಾರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: ರಾಜ್ಯದ ಥಿಯೇಟರ್‌ಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವೆಂಬ ಪ್ರಸ್ತಾಪವಿಲ್ಲ: ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಉತ್ತರ ಪ್ರದೇಶದಲ್ಲಿ ಎಲ್ಲ ರೀತಿಯ ಅಪರಾಧಗಳೂ ವಿಜೃಂಭಿಸುತ್ತಿವೆ.

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...