Homeಮುಖಪುಟಕ್ರಿಶ್ಚಿಯನ್ನರ ಮೇಲೆ ಹಿಂಸಾಚಾರ: ಉತ್ತರ ಪ್ರದೇಶದಲ್ಲೇ ಹೆಚ್ಚು

ಕ್ರಿಶ್ಚಿಯನ್ನರ ಮೇಲೆ ಹಿಂಸಾಚಾರ: ಉತ್ತರ ಪ್ರದೇಶದಲ್ಲೇ ಹೆಚ್ಚು

2021ರಲ್ಲಿ ಭಾರತದಾದ್ಯಂತ 500ಕ್ಕೂ ಹೆಚ್ಚು ಪ್ರಕರಣಗಳು ನಡೆದಿರುವುದನ್ನು ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ದಾಖಲಿಸಿದೆ. 102 ಪ್ರಕರಣಗಳು ಉತ್ತರ ಪ್ರದೇಶ ಒಂದರಲ್ಲೇ ವರದಿಯಾಗಿವೆ.

- Advertisement -
- Advertisement -

2011ರ ಜನಗಣತಿಯ ಪ್ರಕಾರ ಭಾರತದ ಎಲ್ಲಾ ರಾಜ್ಯಗಳ ಪೈಕಿ ಉತ್ತರ ಪ್ರದೇಶವು ಅತಿ ಕಡಿಮೆ ಪ್ರಮಾಣದಲ್ಲಿ ಕ್ರಿಶ್ಚಿಯನ್ನರನ್ನು ಹೊಂದಿರುವ ಎರಡನೇ ರಾಜ್ಯವಾಗಿದೆ. ಆದರೆ ಕ್ರಿಶ್ಚಿಯನ್ನರ ಮೇಲೆ ಅತಿಹೆಚ್ಚು ಹಲ್ಲೆಗಳಾಗುತ್ತಿರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮುಂಚೂಣಿಯಲ್ಲಿದೆ.

65,000ಕ್ಕೂ ಹೆಚ್ಚು ಚರ್ಚ್‌ಗಳ ರಾಷ್ಟ್ರೀಯ ಒಕ್ಕೂಟವಾಗಿರುವ ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶದಲ್ಲಿ 2018 ಮತ್ತು 2019ರಲ್ಲಿ ಕ್ರಿಶ್ಚಿಯನ್ನರ ವಿರುದ್ಧ ಅತಿ ಹೆಚ್ಚು ಹಿಂಸಾಚಾರದ ಪ್ರಕರಣಗಳು ದಾಖಲಾಗಿವೆ ಎಂದು ‘ನ್ಯೂಸ್‌ಲಾಂಡ್ರಿ’ ವರದಿ ಮಾಡಿದೆ.

ಮಾನವ ಹಕ್ಕುಗಳ ಸಂಸ್ಥೆಯಾದ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ (ಯುಸಿಎಫ್‌), ಕ್ರಿಶ್ಚಿಯನ್ನರ ವಿರುದ್ಧದ ಹಿಂಸಾಚಾರದ ಅಂಕಿಅಂಶಗಳನ್ನು ಸಂಗ್ರಹಿಸುತ್ತಿದೆ. 2021ರಲ್ಲಿ ಭಾರತದಾದ್ಯಂತ 500ಕ್ಕೂ ಹೆಚ್ಚು ಪ್ರಕರಣಗಳು ನಡೆದಿರುವುದನ್ನು ಈ ಸಂಸ್ಥೆ ದಾಖಲಿಸಿದೆ. ಇವುಗಳಲ್ಲಿ 102 ಪ್ರಕರಣಗಳು ಉತ್ತರ ಪ್ರದೇಶ ಒಂದರಲ್ಲೇ ವರದಿಯಾಗಿವೆ.

“2021ರಲ್ಲಿ ಉತ್ತರ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ” ಎಂದು ಇಎಫ್‌ಐನ ರೆವರೆಂಡ್ ವಿಜಯೇಶ್ ಲಾಲ್ ಹೇಳಿದ್ದಾರೆ. ಸಾಮಾನ್ಯವಾಗಿ, ಭಾರತದಲ್ಲಿ ಕ್ರಿಶ್ಚಿಯನ್ನರ ವಿರುದ್ಧದ ಒಟ್ಟು ಹಿಂಸಾಚಾರದ ಪ್ರಕರಣಗಳ ಸಂಖ್ಯೆ 100 ಮತ್ತು 200ರ ನಡುವೆ ಸುಳಿದಾಡುತ್ತದೆ ಎನ್ನುವ ಅವರು, “2021ರಲ್ಲಿ, ಈ ಅಂಕಿ ಅಂಶವು ಎರಡು ಪಟ್ಟು ಹೆಚ್ಚಾಗಿದೆ. ಯುಪಿ, ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗಳು ಇರುವುದರಿಂದ ಈ ವರ್ಷ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ” ಎಂದು ತಿಳಿಸಿದ್ದಾರೆ.

ಏರುತ್ತಿರುವ ಗ್ರಾಫ್

1951ರಲ್ಲಿ ಸ್ಥಾಪನೆಯಾದ ಇಎಫ್‌ಐ, ಕ್ರಿಶ್ಚಿಯನ್ನರ ವಿರುದ್ಧದ ಹಿಂಸಾಚಾರದ ಪ್ರಕರಣಗಳ ದಾಖಲೆಯನ್ನು 1998ನೇ ಇಸವಿಯಿಂದಲೂ ನಿರ್ವಹಿಸುತ್ತಿದೆ. ಗುಜರಾತ್‌ನ ಡ್ಯಾಂಗ್ಸ್‌ನಲ್ಲಿ ಕ್ರಿಶ್ಚಿಯನ್ನರ ವಿರುದ್ಧ ಮಾರಣಾಂತಿಕವಾಗಿ 1998ನೇ ಇಸವಿಯಲ್ಲಿ ದಾಳಿ ಮಾಡಲಾಗಿತ್ತು. ಜನವರಿ 1999ರಲ್ಲಿ, ಕ್ರಿಶ್ಚಿಯನ್ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಪುತ್ರರನ್ನು ಒಡಿಶಾದಲ್ಲಿ ಬಜರಂಗದಳದ ಸದಸ್ಯರು ಸುಟ್ಟು ಕೊಂದಿದ್ದರು.

ಇಎಫ್‌ಐನ ದಾಖಲೆಗಳು ಸಾಮಾನ್ಯವಾಗಿ ಯುಸಿಎಫ್‌‌ಗಿಂತ ಹೆಚ್ಚಿನ ಸಂಖ್ಯೆಯನ್ನು ತೋರಿಸುತ್ತವೆ. ಯುಸಿಎಫ್‌‌ 2015 ರಿಂದ ಈ ಡೇಟಾವನ್ನು ಸಂಗ್ರಹಿಸುತ್ತಿದೆ. ಇಎಫ್‌ಐ ಒಂದು ದೊಡ್ಡ ಸಂಸ್ಥೆಯಾಗಿರುವುದರಿಂದ ಹಿಂಸಾಚಾರದ ಹೆಚ್ಚಿನ ಪ್ರಕರಣಗಳನ್ನು ಪರಿಶೀಲಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಯುಸಿಎಫ್‌ ಸಂಸ್ಥಾಪಕ ಎ.ಸಿ.ಮೈಕೆಲ್‌. ಯುಸಿಎಫ್‌‌ ಮತ್ತು ಇಎಫ್‌ಐನ ಎರಡೂ ದಾಖಲೆಗಳ ಗ್ರಾಫ್ ಮಾತ್ರ ಸ್ಥಿರವಾಗಿ ಏರುತ್ತಿದೆ.

“ಹೆಚ್ಚಿನ ದಾಖಲಾದ ಘಟನೆಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತವೆ. ಸಾಮಾನ್ಯವಾಗಿ ಪ್ರಾರ್ಥನಾ ಕೂಟಗಳ ಸಮಯದಲ್ಲಿ ಸಂಭವಿಸುತ್ತವೆ. 2021ರಲ್ಲಿ ದೃಢೀಕರಿಸಲ್ಪಟ್ಟ 505 ಹಿಂಸಾಚಾರದ ಪ್ರಕರಣಗಳ ಪೈಕಿ 420 ಪ್ರಕರಣಗಳು ಗ್ರಾಮೀಣ ಪ್ರದೇಶಗಳಲ್ಲಿ ದಾಖಲಾಗಿವೆ” ಎನ್ನುತ್ತಾರೆ ಮೈಕೆಲ್‌.

“ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಮಧ್ಯಪ್ರದೇಶದ ನಾಲ್ಕು ರಾಜ್ಯಗಳಲ್ಲಿ ಅತಿ ಹೆಚ್ಚು ದಾಳಿಗಳು ದಾಖಲಾಗಿವೆ” ಎನ್ನುತ್ತಾರೆ ಅವರು.

ಉತ್ತರ ಪ್ರದೇಶದಲ್ಲಿ 2018ರಿಂದ ಕ್ರಿಶ್ಚಿಯನ್ನರ ವಿರುದ್ಧದ ಹಿಂಸಾಚಾರ ಏರಿಕೆಯಾಗಿರುವುದನ್ನು ಇಎಫ್‌ಐ ಅಂಕಿಅಂಶಗಳು ತೆರೆದಿಟ್ಟಿವೆ. 2020 ಮತ್ತು 2021ರ ಅಂಕಿ-ಅಂಶಗಳನ್ನು ಇಎಫ್‌ಐ ಇನ್ನೂ ಬಿಡುಗಡೆ ಮಾಡಿಲ್ಲ.

ದಾಖಲೆ ಸೃಷ್ಟಿಸುತ್ತಿದೆ

ಲಾಲ್ ಅವರ ಪ್ರಕಾರ, ಇಎಫ್‌ಐ ದಾಖಲಿಸಿದ ಪ್ರಕರಣಗಳಲ್ಲಿ ಶೇಕಡಾ 10ಕ್ಕಿಂತ ಕಡಿಮೆ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಥಮ ಮಾಹಿತಿ ವರದಿಯನ್ನು ಆಧರಿಸಿವೆ.

“ದಾಳಿಗೊಳಗಾದ ಕ್ರಿಶ್ಚಿಯನ್ನರು ಈ ನೆಲದಲ್ಲೇ ಬದುಕಬೇಕಾದ್ದರಿಂದ ಎಫ್‌ಐಆರ್‌ ದಾಖಲಿಸಲು ಭಯಬೀಳುತ್ತಾರೆ. ಎಫ್‌ಐಆರ್‌ ದಾಖಲಾಗದೆ ಇರುವುದಕ್ಕೆ ಪೊಲೀಸರ ಅಸಹಕಾರವು ಎರಡನೇ ಕಾರಣವಾಗಿದೆ. ಪೊಲೀಸರು ಎಲ್ಲವನ್ನೂ ಮುಚ್ಚಿಹಾಕಿ ಸಂತ್ರಸ್ತರಿಗೆ ರಾಜಿ ಮಾಡಿಕೊಳ್ಳಲು ಹೇಳುವುದರಲ್ಲಿ ಉತ್ಸುಕರಾಗಿದ್ದಾರೆ. ಬಲಿಪಶುವಾದ ಕ್ರಿಶ್ಚಿಯನ್ನರ ವಿರುದ್ಧ ಆರೋಪಗಳನ್ನು ಹೊರಿಸಿದ ನಂತರ ರಾಜೀ ಸಂಧಾನ ನಡೆಸುವುದನ್ನು ಕಾಣಬಹುದು” ಎನ್ನುತ್ತಾರೆ ಲಾಲ್‌.

ವರದಿ ಕೃಪೆ: ನ್ಯೂಸ್‌ಲಾಂಡ್ರಿ


ಇದನ್ನೂ ಓದಿರಿ: ರಾಜ್ಯದಲ್ಲಿ ಕ್ರಿಶ್ಚಿಯನ್ನರ ಮೇಲೆ ದಾಳಿ: ಕಳೆದ 11 ತಿಂಗಳಲ್ಲಿ 39 ಪ್ರಕರಣ ದಾಖಲು- ಪಿಯುಸಿಎಲ್‌ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಆಂಧ್ರದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲಾಗಿದೆ ಎಂಬ...

0
"ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಲು ಕಾಂಗ್ರೆಸ್ ಆಂಧ್ರ ಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕಡಿಮೆ ಮಾಡಿದೆ. ಇದೊಂದು ಪ್ರಮುಖ ಯೋಜನೆಯಾಗಿದ್ದು, ಇದನ್ನು ಇಡೀ ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಬಯಸಿದೆ" ಎಂದು ಟೋಂಕ್‌ನಲ್ಲಿ ಮಂಗಳವಾರ (ಏ.23)...