Homeಮುಖಪುಟವಿಶಾಖಪಟ್ಟಣ ಆಂಧ್ರಪ್ರದೇಶದ ಹೊಸ ರಾಜಧಾನಿ: ಸಿಎಂ ಜಗನ್ ಘೋಷಣೆ

ವಿಶಾಖಪಟ್ಟಣ ಆಂಧ್ರಪ್ರದೇಶದ ಹೊಸ ರಾಜಧಾನಿ: ಸಿಎಂ ಜಗನ್ ಘೋಷಣೆ

- Advertisement -
- Advertisement -

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ವಿಶಾಖಪಟ್ಟಣವನ್ನು ರಾಜ್ಯದ ಹೊಸ ರಾಜಧಾನಿಯಾಗಲಿದೆ ಎಂದು ಘೋಷಿಸಿದ್ದಾರೆ.

ಈ ಬಗ್ಗೆ ಮಂಗಳವಾರ ದೆಹಲಿಯಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟದ ದುಂಡುಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ”ನಮ್ಮ ರಾಜಧಾನಿ ವಿಶಾಖಪಟ್ಟಣಕ್ಕೆ ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ನಾನು ಕೂಡ ಅಲ್ಲಿಗೆ ಶಿಫ್ಟ್ ಆಗುತ್ತೇನೆ. ಆಂಧ್ರಪ್ರದೇಶದಲ್ಲಿ ವ್ಯಾಪಾರ ಮಾಡುವುದು ಎಷ್ಟು ಸುಲಭ ಎಂಬುದನ್ನು ನೋಡಲು ನಿಮಗೆ ಮತ್ತು ನಿಮ್ಮ ಸಹೋದ್ಯೋಗಿಗಳಿಗೆ ನಾನು ಆಹ್ವಾನ ನೀಡುತ್ತಿದ್ದೇನೆ” ಎಂದು ಸಿಎಂ ರೆಡ್ಡಿ ಹೇಳಿದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು, ವ್ಯಾಪಾರವನ್ನು ಸುಲಭಗೊಳಿಸಲು ರಾಜ್ಯವು ಹೇಗೆ ಸತತವಾಗಿ ಮೂರು ಬಾರಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಒತ್ತಿ ಹೇಳಿದರು.

ಮಾರ್ಚ್ 3 ಮತ್ತು 4 ರಂದು ಎಪಿಯ ಕಾರ್ಯಕಾರಿ ರಾಜಧಾನಿಯಾಗಲಿದೆ ಎಂದು ಸಿಎಂ ಹೇಳಿದ ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗುವ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ ಹೂಡಿಕೆದಾರರನ್ನು ಸ್ವಾಗತಿಸಿದ ಅವರು, ಈ ಕಾರ್ಯಕ್ರಮವು ರಾಜ್ಯದ ಸಾಮರ್ಥ್ಯ ಮತ್ತು ಲಭ್ಯವಿರುವ ಅವಕಾಶಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಇದನ್ನೂ ಓದಿ: ತಿರುಪತಿ ದೇವಸ್ಥಾನ: 12.75 ಟನ್‌ ಚಿನ್ನ; ₹16 ಸಾವಿರ ಕೋಟಿ ಠೇವಣಿ; ಒಟ್ಟು ₹2.5 ಲಕ್ಷ ಕೋಟಿಗೂ ಅಧಿಕ…

ಮಾರ್ಚ್ 3 ಮತ್ತು 4 ರಂದು ವಿಶಾಖಪಟ್ಟಣಂ ಆಂದ್ರಪ್ರದೇಶದ ಕಾರ್ಯನಿರ್ವಾಹಕ ರಾಜಧಾನಿಯಾಗಲಿದೆ. ಈ ಕಾರ್ಯಕ್ರಮವು ರಾಜ್ಯದ ಸಾಮರ್ಥ್ಯ ಮತ್ತು ಲಭ್ಯವಿರುವ ಅವಕಾಶಗಳ ಸಮೃದ್ಧಿಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಹಾಗಾಗಿ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ ಹೂಡಿಕೆದಾರರನ್ನು ಸ್ವಾಗತಿಸಲಾಗುತ್ತಿದೆ ಎಂದು ಸಿಎಂ ಹೇಳಿದರು.

2021-22ರ ಆರ್ಥಿಕ ವರ್ಷದಲ್ಲಿ ಆಂಧ್ರ ಪ್ರದೇಶವು 11.43% ವರ್ಷದಿಂದ ವರ್ಷಕ್ಕೆ GSDP ಬೆಳವಣಿಗೆ ದರದೊಂದಿಗೆ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಉದ್ಯಮ-ಸ್ನೇಹಿ ಸರ್ಕಾರವಿದೆ. ಹಾಗಾಗಿ ಆಂಧ್ರ ಪ್ರದೇಶವು ಯಾವಾಗಲೂ ಪ್ರಪಂಚದಾದ್ಯಂತದ ವ್ಯವಹಾರಗಳಿಗೆ ಆಕರ್ಷಕ ಆಯ್ಕೆಯಾಗಿದೆ. ನಾವು ಎಲ್ಲಾ ಅನುಮೋದನೆಗಳನ್ನು 21 ದಿನಗಳಿಗಿಂತ ಕಡಿಮೆ ಸಮಯದಲ್ಲೇ ತೆಗೆದುಕೊಳ್ಳುತ್ತದೆ, ಹೀಗಾಗಿ ವ್ಯಾಪಾರ ಮಾಡಲು ಸುಲಭವಾಗುತ್ತದೆ ಎಂದು ಸಿಎಂ ಹೇಳಿದರು.

ರಾಜ್ಯದ ಭವಿಷ್ಯದ ದೃಷ್ಟಿಯಿಂದ ವಿಕೇಂದ್ರೀಕೃತ ಅಭಿವೃದ್ಧಿಯಲ್ಲಿರುವುದರಿಂದ ವಿಶಾಖಪಟ್ಟಣವನ್ನು ರಾಜ್ಯದ ಆಡಳಿತದ ಕೇಂದ್ರವನ್ನಾಗಿ ಈ ಹಿಂದೆಯೇ ರೆಡ್ಡಿ ಸ್ಪಷ್ಟಪಡಿಸಿದ್ದರು.

ವಿಶಾಖಪಟ್ಟಣವು ಪ್ರಧಾನ ಕಛೇರಿಯಾಗಿ, ರಾಜ್ಯದ ರಾಜ್ಯಪಾಲರ ನೆಲೆಯೂ ಆಗಿರುತ್ತದೆ. ಆದರೆ ಶಾಸಕಾಂಗವು ಅಮರಾವತಿಯಿಂದ ಕಾರ್ಯನಿರ್ವಹಿಸುತ್ತದೆ. 1956 ರಲ್ಲಿ ಆಂಧ್ರವನ್ನು ಹಿಂದಿನ ಮದ್ರಾಸ್ ರಾಜ್ಯದಿಂದ ಪ್ರತ್ಯೇಕಿಸಿದಾಗ ರಾಜಧಾನಿಯಾಗಿದ್ದ ಕರ್ನೂಲ್‌ಗೆ ಹೈಕೋರ್ಟ್ ಅನ್ನು ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದ್ದರು.

ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಕಾರ್ಯಗಳ ಸ್ಥಾನಗಳನ್ನು ರಾಜ್ಯಾದ್ಯಂತ ವಿತರಿಸುವುದು, ಸಮಾನವಾದ ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ರೆಡ್ಡಿ ನಂಬಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...