Homeಮುಖಪುಟಮೋದಿ ಮೇಲಿನ ಟೀಕೆ ಸಹಿಸುತ್ತೇವೆ, ಭಾರತದ ಮೇಲಿನ ಟೀಕೆಯನ್ನಲ್ಲ: ಸ್ಮೃತಿ ಇರಾನಿ

ಮೋದಿ ಮೇಲಿನ ಟೀಕೆ ಸಹಿಸುತ್ತೇವೆ, ಭಾರತದ ಮೇಲಿನ ಟೀಕೆಯನ್ನಲ್ಲ: ಸ್ಮೃತಿ ಇರಾನಿ

- Advertisement -
- Advertisement -

ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರು ಇತ್ತೀಚಿಗೆ ಷೇರು ಮಾರುಕಟ್ಟೆಯಲ್ಲಿ ಎದುರಿಸಿದ ತೊಂದರೆಗಳು ‘ಭಾರತದಲ್ಲಿ ಪ್ರಜಾಪ್ರಭುತ್ವದ ಪುನರುಜ್ಜೀವನ’ವನ್ನು ಉತ್ತೇಜಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ’ ಎಂದು ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೊರೊಸ್ ಹೇಳಿದ್ದಾರೆ. ಇದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪ್ರತಿಕ್ರಿಯಿಸಿದ್ದು, “ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸುವ ವಿದೇಶಿ ಶಕ್ತಿಗಳ ವಿರುದ್ದ ಭಾರತೀಯರು ಒಗ್ಗಟ್ಟಾಗಿ ಪ್ರತಿಕ್ರಿಯಿಸಬೇಕು” ಎಂದು ಕರೆ ನೀಡಿದ್ದಾರೆ.

ಭಾರತದ ಮೇಲಿನ ಹೂಡಿಕೆದಾರರ ವಿಶ್ವಾಸಕ್ಕೆ ಹಿಂಡೆನ್‌ಬರ್ಗ್ ರಿಸರ್ಚ್‌ನ ದಾಳಿಯಿಂದ ಧಕ್ಕೆಯುಂಟಾಗಿದೆ. ಇದು ದೇಶದ ನಿಯಂತ್ರಣ ಚೌಕಟ್ಟಿನ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಅದಾನಿ ಜೊತೆಗಿನ ಪ್ರಧಾನಿ ನರೇಂದ್ರ ಮೋದಿಯವರ ಸಂಬಂಧಗಳ ಬಗ್ಗೆ ಪ್ರಶ್ನೆಗಳೂ ಮೂಡಿವೆ ಎಂದು ಸೊರೊಸ್ ಹೇಳಿದರು.

“ಮೋದಿ ಅವರು ಈ ವಿಷಯದ ಬಗ್ಗೆ ಮೌನವಾಗಿದ್ದಾರೆ, ಆದರೆ ಅವರು ವಿದೇಶಿ ಹೂಡಿಕೆದಾರರ ಪ್ರಶ್ನೆಗಳಿಗೆ ಮತ್ತು ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ” ಎಂದು ಸೊರೊಸ್ ಅವರು ಮ್ಯೂನಿಚ್ ಭದ್ರತಾ ಸಮ್ಮೇಳನಕ್ಕೂ ಮುನ್ನ ಹೇಳಿದ್ದಾರೆ. “ಈ ವಿದ್ಯಮಾನ ಒಕ್ಕೂಟ ಸರ್ಕಾರದ ಮೇಲೆ ಮೋದಿಯವರ ಹಿಡಿತವನ್ನು ದುರ್ಬಲಗೊಳಿಸುತ್ತದೆ. ಭಾರತದಲ್ಲಿ ಪ್ರಜಾಸತ್ತಾತ್ಮಕ ಪುನರುಜ್ಜೀವನ ಆಗಬೇಕೆಂದು ನಾನು ನಿರೀಕ್ಷಿಸುತ್ತೇನೆ” ಎಂದಿದ್ದಾರೆ.

ಇದನ್ನೂ ಓದಿ: ಭಾರತದ ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ: ಅದಾನಿ ವಿರುದ್ಧ ಈ ಕ್ರಮ ಯಾಕೆ ಇಲ್ಲ? ಎಂದ ಮೊಯಿತ್ರಾ

ಹೂಡಿಕೆದಾರ ಜಾರ್ಜ್ ಸೊರೊಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಇರಾನಿ, “ಅವರು ಭಾರತಕ್ಕೆ ಸಂಬಂಧಿಸಿದಂತೆ ಕೆಟ್ಟ ಉದ್ದೇಶ ಹೊಂದಿರುವ ‘ಆರ್ಥಿಕ ಯುದ್ಧ ಅಪರಾಧಿ” ಎಂದು ಟೀಕಿಸಿದ್ದಾರೆ.

“ಪ್ರಧಾನಿ ಮೋದಿ ಅವರು ಟೀಕೆಗಳನ್ನು ಸ್ವೀಕರಿಸಬಹುದು, ಆದರೆ ಭಾರತದ ಮೇಲಿನ ಹೇಳಿಕೆಗಳನ್ನು ಸಹಿಸುವುದಿಲ್ಲ” ಎಂದು ಸ್ಮೃತಿ ಇರಾನಿ ಒತ್ತಿ ಹೇಳಿದ್ದಾರೆ. ಈ ವೇಳೆ, ಪ್ರಧಾನಿಯ ಮೇಲಿನ ದಾಳಿಗೆ ಆ ಕೋಟ್ಯಾಧಿಪತಿಯನ್ನು ಬೆಂಬಲಿಸುವ ರಾಜಕೀಯ ಸಂಘಟನೆಗಳಿಗೂ ಕೇಂದ್ರ ಸಚಿವರು ಎಚ್ಚರಿಕೆ ನೀಡಿದ್ದಾರೆ.

“ಬ್ಯಾಂಕ್ ಆಫ್ ಇಂಗ್ಲೆಂಡ್‌ನ್ನು ಮುರಿದವರು ಮತ್ತು ರಾಷ್ಟ್ರದಿಂದ ಆರ್ಥಿಕ ಯುದ್ಧ ಅಪರಾಧಿ ಎಂದು ಹೆಸರಿಸಲ್ಪಟ್ಟ ವ್ಯಕ್ತಿ ಈಗ ಭಾರತೀಯ ಪ್ರಜಾಪ್ರಭುತ್ವವನ್ನು ಮುರಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ವಾಣಿಜ್ಯೋದ್ಯಮಿ ಜಾರ್ಜ್ ಸೊರೊಸ್ ಅವರು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶಿಸುವ ತನ್ನ ದುರುದ್ದೇಶವನ್ನು ಘೋಷಿಸಿದ್ದಾರೆ” ಎಂದು ಕಿಡಿಕಾರಿದರು.

ದೇಶದ ಪ್ರಜಾಪ್ರಭುತ್ವವನ್ನು ಕೆಟ್ಟದಾಗಿ ತೋರಿಸಲು ಪ್ರಯತ್ನಿಸಿದ ಮತ್ತು ಭಾರತದ ಆರ್ಥಿಕತೆಗೆ ಆಕ್ರಮಣವನ್ನು ತಂದ ವ್ಯಕ್ತಿಯ ಉದ್ದೇಶವನ್ನು ಖಂಡಿಸಬೇಕು ಎಂದು ದೇಶದ ಜನರಲ್ಲಿ ಇರಾನಿ ಮನವಿ ಮಾಡಿದ್ದಾರೆ.

“ಅದಾನಿ ಹಗರಣವು ಭಾರತದಲ್ಲಿ ಪ್ರಜಾಸತ್ತಾತ್ಮಕ ಪುನರುಜ್ಜೀವನವನ್ನು ಉಂಟುಮಾಡುತ್ತದೆಯೇ ಎಂಬುದು ಸಂಪೂರ್ಣವಾಗಿ ಕಾಂಗ್ರೆಸ್, ವಿರೋಧ ಪಕ್ಷಗಳು ಮತ್ತು ನಮ್ಮ ಚುನಾವಣಾ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿದೆ. ಇದಕ್ಕೂ ಜಾರ್ಜ್ ಸೊರೊಸ್‌ಗೂ ಯಾವುದೇ ಸಂಬಂಧವಿಲ್ಲ. ನಮ್ಮ ನೆಹರೂವಿಯನ್ ಪರಂಪರೆಯಲ್ಲಿ ಸೊರೊಸ್‌ನಂತಹ ಜನರು ನಮ್ಮ ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಲು ಸಾಧ್ಯವಿಲ್ಲ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...