Homeಮುಖಪುಟಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

- Advertisement -
- Advertisement -

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ) ಯಾರೂ ಕೈ ಹಾಕುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಒಮ್ಮೆ ಅಧಿಕಾರದ ಗದ್ದುಗೆ ಭದ್ರವಾಗುತ್ತಿದ್ದಂತೆ, ಚುನಾವಣಾ ಪ್ರದರ್ಶನಗಳು ಬದಿಗೆ ಸರಿದು ನೀತಿಗಳು (ಅಜೆಂಡಾ) ಮುಂಚೂಣಿಗೆ ಬಂದವು. ಪರಿಣಾಮವಾಗಿ, ಹೊಸ ಸರ್ಕಾರವು ಶಾಲಾ ಮಧ್ಯಾಹ್ನದ ಬಿಸಿಯೂಟದಲ್ಲಿ ಇನ್ನು ಮುಂದೆ ಮೊಟ್ಟೆಗಳನ್ನು ನೀಡದಿರಲು ನಿರ್ಧರಿಸಿದೆ.

ಪಶ್ಚಿಮ ಬಂಗಾಳದ ಹೊಸ ಸರ್ಕಾರವು ಕೋಲ್ಕತ್ತಾದ ಸುಮಾರು 1,800 ಶಾಲೆಗಳ ಮಧ್ಯಾಹ್ನದ ಬಿಸಿಯೂಟದ ಜವಾಬ್ದಾರಿಯನ್ನು ಇಸ್ಕಾನ್ (ISKCON) ಮತ್ತು ಅದರ ‘ಅನ್ನಾಮೃತ ಫೌಂಡೇಶನ್’ಗೆ ವಹಿಸಿದೆ. ಇಸ್ಕಾನ್ ಸಂಪೂರ್ಣ ಸಸ್ಯಾಹಾರಿ ಅಡುಗೆಮನೆಯನ್ನು ನಡೆಸುವುದರಿಂದ, ಮಕ್ಕಳ ಪ್ರೊಟೀನ್ ಅಗತ್ಯವನ್ನು ಪೂರೈಸಲು ಮೊಟ್ಟೆಗಳ ಬದಲಿಗೆ ಪನ್ನೀರ್, ಸೋಯಾ, ರಾಜ್ಮಾ ಮತ್ತು ಬೇಳೆಕಾಳುಗಳನ್ನು ನೀಡಲಾಗುತ್ತದೆ ಎಂದು ಹೇಳಿದೆ.

ನಿಜ ಹೇಳಬೇಕೆಂದರೆ, ಇಸ್ಕಾನ್ ಸಂಸ್ಥೆಯಿಂದ ಏನನ್ನು ನಿರೀಕ್ಷಿಸಬಹುದೋ ಅದನ್ನೇ ಅದು ಮಾಡಿದೆ. ಸಸ್ಯಾಹಾರಿ ಆಹಾರಕ್ಕೆ ತನ್ನ ಸದ್ಧಾಂತಿಕ ಬದ್ಧತೆಯನ್ನು ಅದು ಎಂದಿಗೂ ಮುಚ್ಚಿಟ್ಟಿಲ್ಲ. ಧಾರ್ಮಿಕ ಸಂಸ್ಥೆಯೊಂದು ತನ್ನ ನಂಬಿಕೆಗಳನ್ನು ಪ್ರತಿಬಿಂಬಿಸುವ ಆಹಾರವನ್ನೇ ಬಡಿಸಬೇಕು ಎಂದು ಹಠ ಹಿಡಿದಿರುವುದು ಇದೇ ಮೊದಲೇನಲ್ಲ. ‘ಅಕ್ಷಯ ಪಾತ್ರೆ ಫೌಂಡೇಶನ್’ ಕೂಡ ವರ್ಷಗಳಿಂದ ಇಂತಹುದೇ ನಿಲುವನ್ನು ಸಮರ್ಥಿಸಿಕೊಳ್ಳುತ್ತಾ ಬಂದಿದೆ. ಆದರೆ, ಸರ್ಕಾರದ ಕಲ್ಯಾಣ ಯೋಜನೆಯಡಿ ಮಕ್ಕಳು ಏನನ್ನು ತಿನ್ನಬೇಕು ಎಂಬುದನ್ನು ಸಿದ್ಧಾಂತಗಳು ನಿರ್ಧರಿಸಬೇಕೇ ಎಂದು ಪೌಷ್ಟಿಕಾಂಶ ತಜ್ಞರು ನಿರಂತರವಾಗಿ ಪ್ರಶ್ನಿಸುತ್ತಲೇ ಬಂದಿದ್ದಾರೆ.

ತಾವು ನೇಮಿಸಿಕೊಳ್ಳುವ ಸಂಸ್ಥೆಯ ಆಹಾರದ ನಂಬಿಕೆಗಳನ್ನು ಸರ್ಕಾರ ಪಾಲಿಸಬೇಕಾದ ಯಾವುದೇ ಅಗತ್ಯವಿಲ್ಲ. ಮಧ್ಯಾಹ್ನದ ಬಿಸಿಯೂಟ ಎನ್ನುವುದು ಯಾವುದೋ ಧಾರ್ಮಿಕ ದಾನ-ಧರ್ಮವಲ್ಲ. ಅದು ಸ್ವತಂತ್ರ ಭಾರತದ ಅತ್ಯಂತ ಯಶಸ್ವಿ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ. ಮಕ್ಕಳನ್ನು ಶಾಲೆಗೆ ಬರುವಂತೆ ಮಾಡಲು, ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಮತ್ತು ಬಡತನವು ಮಗುವಿನ ತಟ್ಟೆಯನ್ನು ಹಾಗೂ ಭವಿಷ್ಯವನ್ನು ನಿರ್ಧರಿಸಬಾರದು ಎಂಬ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ. ಆದ್ದರಿಂದ, ಈ ಬಿಸಿಯೂಟದ ಮೆನು ಸಾರ್ವಜನಿಕ ಆರೋಗ್ಯ ಮತ್ತು ಮಕ್ಕಳ ಅಗತ್ಯಗಳಿಗೆ ಪೂರಕವಾಗಿರಬೇಕೇ ಹೊರತು ಧರ್ಮಕ್ಕಲ್ಲ. ಇದಕ್ಕೆ ಮೊಟ್ಟೆಗಳೇ ಅತ್ಯಂತ ಸೂಕ್ತ ಪರಿಹಾರವಾಗಿದೆ.

ಆದರೆ ಭಾರತದಲ್ಲಿ ಆಗಾಗ ಯಾವುದೋ ಒಂದು ಮೂಲೆಯಲ್ಲಿ ಮೊಟ್ಟೆಯೊಂದಿಗೆ ರಾಜಕೀಯ ವಿವಾದವನ್ನು ಎಳೆದು ತರಲಾಗುತ್ತದೆ. ಮೊಟ್ಟೆ ಎನ್ನುವುದು ಯಾವುದೇ ದೊಡ್ಡ ಭಾವನೆಯನ್ನು ಪ್ರಚೋದಿಸದಷ್ಟು ಸಾಮಾನ್ಯವಾದದ್ದು ಮತ್ತು ನಿರ್ಲಕ್ಷಿಸಲಾಗದಷ್ಟು ಪೌಷ್ಟಿಕಾಂಶದ್ದು. ಅದು ಭಾರತದ ಬಹುತೇಕ ಭಾಗಗಳಲ್ಲಿ ಅಗ್ಗವಾಗಿ, ಎಲ್ಲರಿಗೂ ಒಪ್ಪಿತವಾಗಿ, ಬೇಯಿಸಲು ಸುಲಭವಾಗಿ ಮತ್ತು ಅತ್ಯಂತ ಪೌಷ್ಟಿಕವಾಗಿರುವ ಕಾರಣಕ್ಕಾಗಿಯೇ ಇಷ್ಟು ವರ್ಷಗಳ ಕಾಲ ಬಿಸಿಯೂಟದ ವ್ಯವಸ್ಥೆಯಲ್ಲಿ ಉಳಿದುಕೊಂಡಿದೆ. ಅದಕ್ಕಾಗಿಯೇ ಸರ್ಕಾರಗಳು ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆಯನ್ನು ಆಯ್ಕೆ ಮಾಡಿಕೊಂಡಿದ್ದವು.

ಈಗ, ಇಸ್ಕಾನ್ ಸಂಸ್ಥೆಯು ಮೊಟ್ಟೆಗೆ ಪರ್ಯಾಯವಾಗಿ ಸೋಯಾ ಮತ್ತು ಪನ್ನೀರ್ ಅನ್ನು ನೀಡುತ್ತಿದೆ. ಆದರೆ ಇವೆರಡೂ ಮೊಟ್ಟೆಗೆ ಸಮಾನ ಪರ್ಯಾಯಗಳಲ್ಲ ಎಂದು ವೈದ್ಯರು ದಶಕಗಳಿಂದಲೂ ಹೇಳುತ್ತಲೇ ಬಂದಿದ್ದಾರೆ. ಮೊಟ್ಟೆಗಳಲ್ಲಿ ಅತ್ಯಂತ ಅಮೂಲ್ಯವಾದ ಪೌಷ್ಟಿಕಾಂಶಗಳಿವೆ ಎಂಬುದು ವಿಜ್ಞಾನ. ಆದರೆ ‘ನವ ಭಾರತ’ದಲ್ಲಿ ರಾಜಕೀಯಕ್ಕೆ ವಿಜ್ಞಾನವೇ ಅತ್ಯಂತ ದೊಡ್ಡ ಎದುರಾಳಿಯಾಗಿದೆ.

ಆಹಾರ, ವಿಜ್ಞಾನ ಮತ್ತು ನಂಬಿಕೆ

ಉತ್ತರ ಭಾರತದ ಇತರ ರಾಜ್ಯಗಳಿಗಿಂತ ಪಶ್ಚಿಮ ಬಂಗಾಳ ಆಹಾರದೊಂದಿಗಿನ ಸಂಬಂಧ ತೀರಾ ಭಿನ್ನವಾದುದು ಎಂಬುದನ್ನು ಬಿಜೆಪಿ ಚುನಾವಣಾ ಪ್ರಚಾರದ ಸಮಯದಲ್ಲಿ ಚೆನ್ನಾಗಿಯೇ ಅರಿತಿತ್ತು. ಬಂಗಾಳದಲ್ಲಿ ಆಹಾರಕ್ಕೆ ವಿಭಿನ್ನವಾದ ಗೌರವವಿದೆ. ಅಲ್ಲಿ ಮೀನನ್ನು ವಧುವಿಗೆ ಉಡುಗೊರೆಯಾಗಿ ನೀಡಬಹುದು, ದೇವತೆಗಳಿಗೆ ನೈವೇದ್ಯವಾಗಿ ಅರ್ಪಿಸಬಹುದು ಮತ್ತು ಯಾವುದೇ ವಿವಾದವಿಲ್ಲದೆ ಮಧ್ಯಾಹ್ನದ ಊಟಕ್ಕೆ ಬೇಯಿಸಬಹುದು. ಆದರೆ ಬಂಗಾಳದ ಹೊರಗೆ, ಹಿಂದೂ ಧರ್ಮವನ್ನು ಒಂದೇ ಒಂದು ಸಸ್ಯಾಹಾರಿ ಚೌಕಟ್ಟಿಗೆ ತರಲು ಹಠ ಹಿಡಿದಿರುವವರಿಗೆ ಇದು ಆಘಾತವನ್ನುಂಟು ಮಾಡುತ್ತದೆ.

ಆದರೆ ಬಂಗಾಳಿ ಅಡುಗೆಮನೆಗೆ ಎಂದಿಗೂ ಇಂತಹ ಆತಂಕವಿರಲಿಲ್ಲ. ಬಂಗಾಳದ ಸಂಸ್ಕೃತಿಯ ವೈಶಿಷ್ಟ್ಯ ಅಡಗಿರುವುದು ಯಾವುದನ್ನೂ ಹೊರಗಿಡುವುದರಲ್ಲಲ್ಲ, ಬದಲಿಗೆ ಎಲ್ಲವನ್ನೂ ಒಳಗೊಳ್ಳುವುದರಲ್ಲಿ; ಮಡಿವಂತಿಕೆಯಲ್ಲಲ್ಲ, ಬದಲಿಗೆ ಆಹಾರದ ಮೇಲಿನ ಪ್ರೀತಿಯಲ್ಲಿ. ಅಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳು ನೈತಿಕತೆಯ ಚೌಕಟ್ಟಿಗೆ ಸಿಲುಕದೆ ಒಟ್ಟಿಗೆ ಸಹಬಾಳ್ವೆ ನಡೆಸುತ್ತಿವೆ.

ಹಾಗಾಗಿಯೇ, ಬಂಗಾಳಿಗಳ ‘ಮೀನು-ಊಟದ’ ಈ ಸಹಜ ಗುಣವನ್ನು ಅರಿತಿದ್ದ ರಾಜಕಾರಣಿಗಳು, ಚುನಾವಣಾ ಪ್ರಚಾರದ ಸಮಯದಲ್ಲಿ ಸಾಸಿವೆ ಎಣ್ಣೆಯ ರುಚಿಯನ್ನು ತಕ್ಷಣವೇ ಒಪ್ಪಿಕೊಂಡರು. ಬಿಜೆಪಿ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನಿನ ರುಚಿ ನೋಡಿದರು, ಏಕೆಂದರೆ ಬಂಗಾಳದ ಆಹಾರ ಪದ್ಧತಿಯನ್ನು ಬಲವಂತವಾಗಿ ಶರಣಾಗಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ತಿಳಿದಿತ್ತು. ಈ ರೀತಿ ನಟಿಸದೇ ಇದ್ದರೆ ಚುನಾವಣೆಯಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದು ಅವರಿಗೆ ಗೊತ್ತಿತ್ತು.

ಆದರೆ, ಒಮ್ಮೆ ಅಧಿಕಾರಕ್ಕೆ ಬಂದ ಮೇಲೆ ಅವರ ಆಡಳಿತದ ಶೈಲಿಯೇ ಸಂಪೂರ್ಣ ಬದಲಾಗಿದೆ. ಶಾಲಾ ಬಿಸಿಯೂಟದಿಂದ ಮೊಟ್ಟೆಯನ್ನು ಹೊರದೂಡಿರುವುದು, ಅಧಿಕಾರ ಸಿಕ್ಕ ತಕ್ಷಣ ಸಾಂಕೇತಿಕ ಭರವಸೆಗಳು ಹೇಗೆ ಸೈದ್ಧಾಂತಿಕ ಹಿತಾಸಕ್ತಿಗಳಿಗೆ ಬಲಿಯಾಗುತ್ತವೆ ಎಂಬುದನ್ನು ತೋರಿಸುತ್ತದೆ. ದುರಂತವೆಂದರೆ, ಮಕ್ಕಳಿಗೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ, ಅವರು ಈ ರಾಜಕೀಯ ಜಗಳದ ಮಧ್ಯೆ ದಾಳವಾಗುತ್ತಿದ್ದಾರೆ.

ಕಲ್ಯಾಣ ಯೋಜನೆಗಳು ಅಸ್ತಿತ್ವದಲ್ಲಿ ಇರುವುದು ಸರ್ಕಾರಗಳು ನಂಬಿಕೆಗಳಿಗಿಂತ ಫಲಿತಾಂಶಗಳಿಗೆ ಆದ್ಯತೆ ನೀಡಬೇಕು ಎಂಬ ಕಾರಣಕ್ಕಾಗಿ. ಬಾಲ್ಯದ ದೈನಂದಿನ ಆಹಾರದಲ್ಲಿ ಮೊಟ್ಟೆಗಳು ಅತ್ಯಗತ್ಯ ಎಂದು ವಿಜ್ಞಾನ ಮತ್ತು ವೈದ್ಯರು ಹೇಳಿದ ಮೇಲೆ ಆ ವಿಷಯ ಅಲ್ಲಿಗೇ ಮುಗಿಯಬೇಕಿತ್ತು. ಅದನ್ನು ನಂಬಿಕೊಂಡಿರುವ ಬಡ ಮಕ್ಕಳಿಗೆ ಅದನ್ನು ತಲುಪಿಸುವುದು ಮಾತ್ರ ಸರ್ಕಾರದ ಕೆಲಸವಾಗಿರಬೇಕು.

“ಊಟದ ವಿಷಯದಲ್ಲಿ ಧರ್ಮ ಅಥವಾ ನಂಬಿಕೆಯನ್ನು ಎಲ್ಲಿಯವರೆಗೆ ಇಟ್ಟುಕೊಳ್ಳಬೇಕು ಮತ್ತು ಮಕ್ಕಳ ಆರೋಗ್ಯದ ವಿಷಯ ಬಂದಾಗ ವಿಜ್ಞಾನಕ್ಕೆ ಹೇಗೆ ಬೆಲೆ ಕೊಡಬೇಕು ಎಂಬ ವಿವೇಕ ಬಂಗಾಳದ ಜನರಿಗೆ ಚೆನ್ನಾಗಿ ಗೊತ್ತಿದೆ.” ಎಂಬ ಮಾತು ನಿಜವಾಗಲಿ. ಮಕ್ಕಳ ತಟ್ಟೆಗೆ ಕೈ ಹಾಕಿರುವ ಬಿಜೆಪಿಗೆ ಪಾಠವಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...