HomeಮುಖಪುಟWFI ಚುನಾವಣೆ: ಮತದಾರರ ಪಟ್ಟಿಯಿಂದ ಬ್ರಿಜ್‌ಭೂಷಣ್, ಪುತ್ರನ ಹೆಸರು ಕೈಬಿಟ್ಟ ಫೆಡರೇಶನ್

WFI ಚುನಾವಣೆ: ಮತದಾರರ ಪಟ್ಟಿಯಿಂದ ಬ್ರಿಜ್‌ಭೂಷಣ್, ಪುತ್ರನ ಹೆಸರು ಕೈಬಿಟ್ಟ ಫೆಡರೇಶನ್

- Advertisement -
- Advertisement -

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೆಸರು ಹಾಗೂ ಅವರ ಪುತ್ರ ಕರಣ್ ಹೆಸರನ್ನು ಮುಂಬರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಚುನಾವಣೆಯ ಮತದಾರರ ಪಟ್ಟಿಯಿಂದ ತಗೆದುಹಾಕಲಾಗಿದೆ.

ಲೈಂಗಿಕ ಕಿರುಕುಳದ ಆರೋಪದಡಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನಾ ನಿರತ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರು ಕಳೆದ ತಿಂಗಳು ಕ್ರೀಡಾ ಸಚಿವರಾದ ಅನುರಾಗ್ ರಾಕೂರ್ ಅವರೊಂದಿಗೆ ಸಭೆ ನಡೆಸಿ ಬ್ರಿಜ್ ಭೂಷಣ್ ಅವರ ಕುಟುಂಬದಿಂದ ಯಾರೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದರು.

”ನಮ್ಮ ಕುಟುಂಬವನ್ನು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ(ಕುಸ್ತಿ) ಚುನಾವಣೆಯಿಂದ ಹೊರಗಿಡಬೇಕು, ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಯಾವುದೇ ವಿವಾದಗಳು ಮತ್ತೆ ಸೃಷ್ಟಿಯಾಗುವುದು ಬೇಡ” ಎಂದು ಬ್ರಿಜ್ ಭೂಷಣ ಹೇಳಿದ್ದಾರೆ.

ಮಂಗಳವಾರ ಅಂತಿಮಗೊಳಿಸಲಾದ ಚುನಾವಣಾ ಮತದಾರರ ಪಟ್ಟಿಯಲ್ಲಿ ಬ್ರಿಜ್ ಭೂಷಣ್ ಅವರ ಅಳಿಯನ ಒಬ್ಬರ ಹೆಸರು ಕಾಣಿಸಿಕೊಂಡಿದೆ. ಉಳಿದಂತೆ ಮತ್ತೊಬ್ಬ ಅಳಿಯ, ಮಾಜಿ ಜಂಟಿ:ಕಾರ್ಯದರ್ಶಿ ಆದಿತ್ಯ ಪುತಾಪ್ ಸಿಂಗ್ ಕೂಡ ಪಟ್ಟಿಯಿಂದ ಕೈ ಬಿಡಲಾಗಿದೆ.

ವರದಿಗಳ ಪ್ರಕಾರ, ಗಬ್ಬು ಎಫ್‌ಐ 25 ರಾಜ್ಯ ಘಟಕಗಳಿಂದ ಒಟ್ಟು 50 ಸದಸ್ಯರನ್ನು ಹೊಂದಿದ ಅಧ್ಯಕ್ಷರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲು ಇದೇ ಆಗಸ್ಟ್1 ಕೊನೆಯ ದಿನಾಂಕವಾಗಿದೆ. ಮರುದಿನ ನಾಮಪತ್ರಗಳ ಪರಿಶೀಲನೆ ನಡೆಸಿ, ಆಗಸ್ಟ್ 7ರಂದು ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು, ಅಗತ್ಯವಿದ್ದಲ್ಲಿ ಆಗಸ್ಟ್ 12 ರಂದು ಮತದಾನ ನಡೆಯಲಿದೆ.

ಪ್ರತಿ ರಾಜ್ಯ ಘಟಕದಿಂದ ಇಬ್ಬರು ಪ್ರತಿನಿಧಿಗಳಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ. ಉತ್ತರ ಪ್ರದೇಶದ ಕೈಸರ್‌ಗುಂಜ್‌ನ ಸಂಸದ ಬ್ರಿಜ್‌ಭೂಷಣ್ ಸಿಂಗ್, ಲೈಂಗಿಕ ಕಿರುಕುಳದ ಅನೇಕ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು ಪ್ರಸ್ತುತ ಜಾಮೀನಿನ ಮೇಲೆ ಇದ್ದಾರೆ. ಅವರು ಈಗಾಗಲೇ ಪದಾಧಿಕಾರಿಯಾಗಿ 12 ವರ್ಷಗಳನ್ನು ಪೂರ್ಣಗೊಳಿಸಿರುವುದರಿಂದ ಅವರು ಸ್ಪರ್ಧಿಸಲು ಅರ್ಹರಲ್ಲ, ಇದು ರಾಷ್ಟ್ರೀಯ ಕ್ರೀಡಾ ಸಂಹಿತೆಯ ಪ್ರಕಾರ ಅನುಮತಿಸಲಾದ ಗರಿಷ್ಠ ಅವಧಿಯಾಗಿದೆ. ಅದರಂತೆ ಯುಪಿಯ ರಾಜ್ಯ ಘಟಕವನ್ನು ಪ್ರೇಮ್ ಕುಮಾರ್ ಮಿಶ್ರಾ ಮತ್ತು ಸಂಜಯ್ ಸಿಂಗ್ ಪ್ರತಿನಿಧಿಸಲಿದ್ದಾರೆ.

ಇದನ್ನೂ ಓದಿ: ಬ್ರಿಜ್ ಭೂಷಣ್‌ಗೆ ಜಾಮೀನು ನೀಡುವುದನ್ನು ದೆಹಲಿ ಪೊಲೀಸರೇಕೆ ವಿರೋಧಿಸಲಿಲ್ಲ? – ಸಂಸದೆ ಮಹುವ ಮೊಯಿತ್ರ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...