Homeಮುಖಪುಟಹತ್ರಾಸ್ ಸಂತ್ರಸ್ತೆ ತನ್ನ ಅಂತಿಮ ವಿಡಿಯೋದಲ್ಲಿ ಹೇಳಿದ್ದೇನು? ಪೋಸ್ಟ್‌ಮಾರ್ಟಂ ವರದಿ ಸುಳ್ಳೇ?

ಹತ್ರಾಸ್ ಸಂತ್ರಸ್ತೆ ತನ್ನ ಅಂತಿಮ ವಿಡಿಯೋದಲ್ಲಿ ಹೇಳಿದ್ದೇನು? ಪೋಸ್ಟ್‌ಮಾರ್ಟಂ ವರದಿ ಸುಳ್ಳೇ?

ಸಂತ್ರಸ್ತೆಯ ಈ ವೀಡಿಯೋ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿ ಸ್ವತಃ ತಾನೇ ಹೇಳಿರುವ ವೀಡಿಯೋ ವೈರಲ್ ಆಗುತ್ತಿದೆ. ಆದರೆ ಪೋಸ್ಟ್‌ಮಾರ್ಟಂ ರಿಪೋರ್ಟ್ ಅತ್ಯಾಚಾರ ನಡೆದಿಲ್ಲ ಎಂದು ಹೇಳುತ್ತದೆ. ಹೆಚ್ಚಿನ ವಿವಿರ ಇಲ್ಲಿದೆ.

- Advertisement -
- Advertisement -

ಹತ್ರಾಸ್ ಸಂತ್ರಸ್ತೆ ಮನಿಷಾ ಅಂತಿಮವಾಗಿ ಮಾತನಾಡಿದ್ದಾಳೆ ಎನ್ನಲಾಗುತ್ತಿರುವ ವಿಡಿಯೋ ಸದ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, “ತಾನು ಇಬ್ಬರು ಪುರುಷರಿಂದ ಅತ್ಯಾಚಾರಕ್ಕೆ ಒಳಗಾಗಿದ್ದೇನೆ” ಎಂದು ಹೇಳಿರುವುದು ದಾಖಲಾಗಿದೆ.

“ತನ್ನನ್ನು ಇಬ್ಬರು ಅತ್ಯಾಚಾರ ಮಾಡಿದರು. ನನ್ನ ತಾಯಿ ಬರುವುದನ್ನು ನೋಡಿ ಇನ್ನಿಬ್ಬರು ಓಡಿ ಹೋದರು. ಅವರು ಈ ಮೊದಲೇ ನನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದರು. ಆದರೆ ಆಗ ನಾನು ತಪ್ಪಿಸಿಕೊಂಡಿದ್ದೆ” ಎಂದು ಹೇಳುತ್ತಾ, ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ 4 ಆರೋಪಿಗಳಲ್ಲಿ ಒಬ್ಬನಾದ ರವಿ ಎಂಬ ಆರೋಪಿಯ ಹೆಸರನ್ನು ಉಲ್ಲೇಖಿಸಿದ್ದಾಳೆ.

ಇದನ್ನೂ ಓದಿ: ಹತ್ರಾಸ್ ಕುರಿತು ನೀವು ದನಿಯೆತ್ತದಿದ್ದರೆ..: ರಮ್ಯಾ ದಿವ್ಯಸ್ಪಂದನ ಮನವಿ ಮಾಡಿದ್ದೇನು?

ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ: ಕೊಲೆಗೀಡಾದ ಯುವತಿಯ ಪೋಸ್ಟ್‌ಮಾರ್ಟಂ ರಿಪೋರ್ಟ್ ಏನು ಹೇಳುತ್ತಿದೆ?

ಸೆಪ್ಟೆಂಬರ್ 22 ರಂದು ಯುವತಿಯ ಹೇಳಿಕೆಯನ್ನು ರೆಕಾರ್ಡ್ ಮಾಡಿದ್ದ ಸರ್ಕಲ್ ಅಧಿಕಾರಿ ಬ್ರಹ್ಮ್ ಸಿಂಗ್, ಈ ವಿಡಿಯೋ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ದಲಿತ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರದ ಈ ಅಂಕಿ-ಅಂಶಗಳನ್ನು ನೋಡಿ: ನೀವೇ ಪ್ರಶ್ನಿಸಿಕೊಳ್ಳಿ

ಈ ಹೇಳಿಕೆಯನ್ನು ದಾಖಲಿಸಿದ ಸಮಯದಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದ ಜವಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (JNMC), ಇದನ್ನು ಮರಣದ ಅಂತಿಮ ಹೇಳಿಕೆಯಲ್ಲ ಎಂದು ಹೇಳಿದ್ದು, ಇದನ್ನು ಆಕೆ ವಾರ್ಡ್‌ನಲ್ಲಿದ್ದಾಗ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಿದೆ.

ಆದರೆ ಇದಕ್ಕೆ ವಿರುದ್ಧವಾಗಿ ಯುವತಿಯ ಪೋಸ್ಟ್‌ಮಾರ್ಟಂ ವರದಿಯಲ್ಲಿ ಅತ್ಯಾಚಾರವೇ ನಡೆದಿಲ್ಲ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಸಾಮೂಹಿಕ ಅತ್ಯಾಚಾರ ಮತ್ತು ಮಾರಣಾಂತಿಕ ಹಲ್ಲೆಗೊಳಗಾಗಿ ಸಾವನಪ್ಪಿದ ದಲಿತ ಯುವತಿಯ ಪೋಸ್ಟ್‌ಮಾರ್ಟಂ ವರದಿಯ ಪ್ರಕಾರ, “ಕತ್ತು ಹಿಸುಕಲಾಗಿದ್ದು, ಆಕೆಯ ಬೆನ್ನುಮೂಳೆ ಮುರಿದಿತ್ತು” ಎಂದು ತಿಳಿದುಬಂದಿದೆ. ಆದರೆ ಅಂತಿಮ ವರದಿಯಲ್ಲಿ ಅತ್ಯಾಚಾರ ನಡೆದಿರುವುದರ ಬಗ್ಗೆ ಉಲ್ಲೇಖವಿಲ್ಲ!

ದೆಹಲಿ ಆಸ್ಪತ್ರೆ ನೀಡಿರುವ ಪೋಸ್ಟ್‌ಮಾರ್ಟಂ ವರದಿಯಲ್ಲಿ, “ಹಲ್ಲೆ ಮಾಡಿರುವವರು ಆಕೆಯ ಕತ್ತನ್ನು ಹಿಸುಕಲು ಪ್ರಯತ್ನಿಸಿದ್ದಾರೆ. ಆದರೆ ಅದು ಆಕೆಯ ಸಾವಿಗೆ ಕಾರಣವಾಗಿಲ್ಲ. ಬೆನ್ನುಮೂಳೆಗೆ ಬಲವಾದ ಹೊಡೆತ ಬಿದ್ದಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ” ಎಂದು ಉಲ್ಲೇಖಿಸಲಾಗಿದೆ.

ಈಗ ಹತ್ರಾಸ್ ಸಂತ್ರಸ್ತೆ ಹೇಳಿಕೆ ನಿಡಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಸರ್ಕಾರ ಮತ್ತು ಪೊಲೀಸರ ವರ್ತನೆಯ ಮೇಲೆ ಅನುಮಾನ ಸೃಷ್ಟಿಯಾಗುತ್ತಿದೆ. ಈ  ನಿಟ್ಟಿನಲ್ಲಿ ನಮ್ಮ ಮುಂದೆ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಯುವತಿಯ ಕುಟುಂಬವನ್ನು ದೂರವಿಟ್ಟು, ನಡುರಾತ್ರಿ ಆಕೆಯನ್ನು ಸುಟ್ಟಿದ್ದು? ಏಮ್ಸ್‌ಗೆ ಸೂಚಿಸಿದ್ದರೂ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದು? ಸರ್ಕಾರ ಮತ್ತು ಅಧಿಕಾರಿಗಳ ವರ್ತನೆ? ಕುಟುಂಬಕ್ಕೆ ಗೃಹಬಂಧನ? ಅಧಿಕಾರಿಗಳ ಬೆದರಿಕೆ? ಯುವತಿಯ ಸಹೋದರನ ಹೇಳಿಕೆ? ಮಧ್ಯಮಗಳಿಗೆ ನಿರ್ಬಂಧ? ಮುಂತಾದ ನೂರಾರು ಪ್ರಶ್ನೆಗಳು ಉದ್ಭವಿಸುತ್ತವೆ.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 20 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐಗೆ ತನಿಖೆ ನಡೆಸಲು ವಹಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ಶನಿವಾರ ಸಂಜೆ ತಿಳಿಸಿದೆ. ನಿನ್ನೆ ರಾತ್ರಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹತ್ರಾಸ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಆದೇಶ ಹೊರಬಿದ್ದಿದೆ.


ಇದನ್ನೂ ಓದಿ: ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು: NCRB

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನೂನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...