Homeಮುಖಪುಟಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು: NCRB

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು: NCRB

ಕ್ರೈಮ್ಸ್ ಇನ್ ಇಂಡಿಯಾ -2019ರ ವರದಿಯ ಪ್ರಕಾರ, ಹಿಂದಿನ (2018) ವರ್ಷಕ್ಕಿಂತ 2019ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಶೇಕಡಾ 7.3 ರಷ್ಟು ಹೆಚ್ಚಾಗಿದೆ.

- Advertisement -
- Advertisement -

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2019ರಲ್ಲಿ ಪ್ರತಿದಿನ ಸರಾಸರಿ 87 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಒಟ್ಟು 4,05,861 ಪ್ರಕರಣಗಳು ದಾಖಲಾಗಿವೆ. ಇದು, ಹಿಂದಿನ ವರ್ಷಕ್ಕಿಂತ (2018) ಶೇ. 7 ರಷ್ಟು ಹೆಚ್ಚಾಗಿದೆ.

ಕ್ರೈಮ್ಸ್ ಇನ್ ಇಂಡಿಯಾ -2019ರ ವರದಿಯ ಪ್ರಕಾರ, ಹಿಂದಿನ (2018) ವರ್ಷಕ್ಕಿಂತ 2019ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಶೇಕಡಾ 7.3 ರಷ್ಟು ಹೆಚ್ಚಾಗಿದೆ. ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಪ್ರಮಾಣವು 2019 ರಲ್ಲಿ ಪ್ರತಿ ಒಂದು ಲಕ್ಷ ಮಹಿಳೆಯರಲ್ಲಿ, ಶೇಕಡಾ 62.4 ರಷ್ಟಿದ್ದು, ಇದು 2018 ರ ಶೇಕಡಾ 58.8ಕ್ಕಿಂತ ಹೆಚ್ಚಾಗಿದೆ. 2018 ರಲ್ಲಿ ದೇಶದಲ್ಲಿ 3,78,236 ಅಪರಾಧ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಬೀದಿಬದಿ ಮಲಗಿದ್ದ ನಿರ್ಗತಿಕ ಮಹಿಳೆಯ ಹತ್ಯೆ, ಅತ್ಯಾಚಾರ: ಹಾಸನದಲ್ಲೊಂದು ಅಮಾನುಷ ಕೃತ್ಯ

ಆದರೆ, 2018 ರಲ್ಲಿ ದೇಶಾದ್ಯಂತ 33,356 ಅತ್ಯಾಚಾರಗಳು ದಾಖಲಾಗಿದ್ದು, 2017 ರಲ್ಲಿ 32,559 ರಷ್ಟಿತ್ತು ಎಂಬುದಾಗಿ ಅಂಕಿಅಂಶಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

“ಈ ಪ್ರಕರಣಗಳಲ್ಲಿ ಹೆಚ್ಚಿನವು (ಶೇಕಡಾ 30.9) ಭಾರತೀಯ ದಂಡ ಸಂಹಿತೆಯಡಿ ‘ಪತಿ ಅಥವಾ ಅವರ ಸಂಬಂಧಿಕರಿಂದ ಕ್ರೌರ್ಯ’ದ ಸೆಕ್ಷನ್ ಅಡಿಯಲ್ಲಿ ದಾಖಲಾಗಿದ್ದು, ನಂತರದ ಸ್ಥಾನದಲ್ಲಿ, ‘ಮಹಿಳೆಯರ ಮೇಲಿನ ಹಲ್ಲೆ’ (ಶೇಕಡಾ 21.8), ‘ಮಹಿಳೆಯರ ಅಪಹರಣ (ಶೇ 17.9) ಎಂದು 2019 ರ NCRB ಅಂಕಿಅಂಶಗಳು ತಿಳಿಸಿವೆ.

NCRB ಸಂಗ್ರಹಿಸಿದ ಅಂಕಿ ಅಂಶಗಳ ಪ್ರಕಾರ, ಮಕ್ಕಳ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿಯೂ ಹೆಚ್ಚಳವಾಗಿವೆ. 2018 ಕ್ಕಿಂತ 2019 ರಲ್ಲಿ ಶೇಕಡಾ 4.5 ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮತ್ತೊಂದು ಘಟನೆ; 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ!

2019 ರಲ್ಲಿ ಒಟ್ಟು 1.48 ಲಕ್ಷ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 46.6 ರಷ್ಟು ಅಪಹರಣ ಪ್ರಕರಣಗಳು ಮತ್ತು 35.3 ರಷ್ಟು ಪ್ರಕರಣಗಳು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿವೆ.

ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ NCRB, ದೇಶಾದ್ಯಂತದ ಅಪರಾಧ ದತ್ತಾಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸುತ್ತದೆ. 36 ರಾಜ್ಯಗಳು ಮತ್ತು 53 ಮೆಟ್ರೋಪಾಲಿಟನ್ ನಗರಗಳಿಂದ ಅಂಕಿಅಂಶಗಳನ್ನು ಒಟ್ಟುಗೂಡಿಸಿದ ನಂತರ ಸಂಸ್ಥೆ ಮೂರು ಸಂಪುಟಗಳ ವರದಿಯನ್ನು ಸಂಗ್ರಹಿಸಿ, ಬಿಡುಗಡೆ ಮಾಡಿದೆ.


ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಯುಪಿ ದಲಿತ ಯುವತಿ ಆಸ್ಪತ್ರೆಯಲ್ಲಿ ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...