ಗುಜರಾತ್: ರೈಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ, ಅತ್ಯಾಚಾರದ ಸಂಶಯ

ಕೆಲದಿನಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಚಿತ್ರಹಿಂಸೆಗೊಳಗಾಗಿದ್ದ ಉತ್ತರ ಪ್ರದೇಶದ ಹತ್ರಾಸ್ 19 ವರ್ಷದ ಯುವತಿ ಇಂದು ಬೆಳಿಗ್ಗೆ ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಗಳು, ಮೂಳೆ ಮುರಿತ ಮತ್ತು ನಾಲಿಗೆ ತುಂಡಾಗಿದ್ದ ಯುವತಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದು, ನಿನ್ನೆ ದೆಹಲಿಗೆ ತೆರಳುವವರೆಗೂ ಆಕೆಯನ್ನು ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿಡಲಾಗಿತ್ತು.

ಸೆಪ್ಟೆಂಬರ್ 14 ರಂದು ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಾಸ್ ಎಂಬ ಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಯುವತಿ ತನ್ನ ಹೊಲದಲ್ಲಿ ಕುಟುಂಬದೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಸ್ಥಳದಿಂದ ಆಕೆಯ ಬಟ್ಟೆಯಿಂದಲೇ ಕಟ್ಟಿ ಪಕ್ಕದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಲಾಗಿತ್ತು.

ಈ ಪ್ರಕರಣದ ನಾಲ್ವರು ಅತ್ಯಾಚಾರ ಆರೋಪಿಗಳು ಸದ್ಯ ಜೈಲಿನಲ್ಲಿದ್ದಾರೆ. ಮೃತ ಯುವತಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ, ಅತ್ಯಾಚಾರ ಆರೋಪಿಗಳು ಮೇಲ್ಜಾತಿಯವರು ಎನ್ನಲಾಗಿದೆ. ಈ ಘಟನೆ ಇತ್ತೀಚಿನ ತಿಂಗಳುಗಳಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಅತ್ಯಾಚಾರ, ಕೊಲೆ, ಕಿರುಕುಳ ಪ್ರಕರಣಗಳಿಗೆ ಇನ್ನೊಂದು ಸೇರ್ಪಡೆ; ವೈದ್ಯಕೀಯ ವಿದ್ಯಾರ್ಥಿನಿ ಶವ ಪತ್ತೆ

ಉತ್ತರ ಪ್ರದೇಶ ಪೊಲೀಸರು ಆರಂಭದಲ್ಲಿ ಸಂತ್ರಸ್ತರ ಮನವಿಗೆ ಸ್ಪಂದಿಸಲಿಲ್ಲ. ಆದರೆ ಸಾರ್ವಜನಿಕರ ಆಕ್ರೋಶದ ನಂತರ ಮಾತ್ರ ಪ್ರತಿಕ್ರಿಯಿಸಿದ್ದಾರೆ ಎಂದು ಯುವತಿಯ ಕುಟುಂಬ ಆರೋಪಿಸಿದೆ

”ನನ್ನ ತಾಯಿ, ಸಹೋದರಿ ಮತ್ತು ಅಣ್ಣ ಹುಲ್ಲನ್ನು ತರಲೆಂದು ಹೊಲಕ್ಕೆ ಹೋಗಿದ್ದರು. ನನ್ನ ಅಣ್ಣ ಹುಲ್ಲಿನ ಕಟ್ಟಿನೊಂದಿಗೆ ಮೊದಲು ಮನೆಗೆ ಹಿಂತಿರುಗಿದ್ದಾನೆ. ಆದರೆ ನನ್ನ ತಾಯಿ ಮತ್ತು ಸಹೋದರಿ ಸ್ವಲ್ಪ ದೂರದಲ್ಲೇ ಹುಲ್ಲನ್ನು ಕತ್ತರಿಸುತ್ತಿದ್ದರು. ಸಮಯದಲ್ಲಿ ನಾಲ್ಕರಿಂದ ಐದು ಜನ ಹಿಂದಿನಿಂದ ಬಂದು ದುಪ್ಪಟಾವನ್ನು ನನ್ನ ತಂಗಿಯ ಕುತ್ತಿಗೆಗೆ ಬಿಗಿದು ಸಜ್ಜೆ ಹೊಲಕ್ಕೆ ಎಳೆದೊಯ್ದಿದ್ದಾರೆ” ಎಂದು ಯುವತಿಯ ಸೋದರ ತಿಳಿಸಿದ್ದಾರೆ.

“ನಂತರ ಆಕೆ ಕಾಣಿಸುತ್ತಿಲ್ಲದಿರುವುದನ್ನು ಗಮನಿಸಿದ ನನ್ನ ತಾಯಿ ಸುತ್ತ ಮುತ್ತ ಹುಡುಕಾಡಿದ್ದಾರೆ. ಆಗ ನನ್ನ ತಂಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಕೆಯ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎಂದು ನಾವು ಪೊಲೀಸರಿಗೆ ತಿಳಿಸಿದರೂ ಅವರು ತಕ್ಷಣಕ್ಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಾಲ್ಕೈದು ದಿನಗಳ ನಂತರ  ದೂರು ದಾಖಲಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮತ್ತೊಂದು ಘಟನೆ; 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ!

ಮೊದಲು ಆಕೆಯನ್ನು ಏಮ್ಸ್‌ಗೆ ಕರೆದೊಯ್ಯಲಾಗುವುದು ಎಂದು ನಮಗೆ ತಿಳಿಸಲಾಯಿತು ಆದರೆ ಆಕೆಯನ್ನು ಸಫ್ದರ್ಜಂಗ್‌ಗೆ ಕರೆದೊಯ್ಯಲಾಯಿತು. ಆಕೆಯ ಕುತ್ತಿಗೆಯ ಮೂರು ಮೂಳೆಗಳು ಮುರಿದಿದ್ದವು. ಆಕೆಗೆ ಉಸಿರಾಡಲು ತೊಂದರೆಯಾಗುತ್ತಿತ್ತು ಎಂದು ಮೃತ ಯುವತಿಯ ಸಹೋದರ ತಿಳಿಸಿದ್ದಾರೆ.

ಕುಟುಂಬದ ಆರೋಪವನ್ನು ತಳ್ಳಿಹಾಕಿರುವ ಯುಪಿ ಪೊಲೀಸರು ನಾವು ಕುಟುಂಬಕ್ಕೆ ತಕ್ಷಣ ನೆರವು ನೀಡಿದ್ದೇವೆ ಎಂದಿದ್ದಾರೆ. ಇಂದು ಮಾತನಾಡಿರುವ ಹತ್ರಾಸ್ ಡಿಎಂ ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ನಾಲ್ವರು ಆರೋಪಿಗಳನ್ನು ಎಸ್‌ಸಿ /ಎಸ್‌ಟಿ ಕಾಯ್ದೆಯಡಿ ಬಂಧಿಸಲಾಗಿದೆ ಎಂದಿದ್ದಾರೆ. ಜೊತೆಗೆ ಆಕೆಯ ನಾಲಿಗೆ ಕತ್ತರಿಸಲ್ಪಟ್ಟಿರಲಿಲ್ಲ ಎಂದು ಹೇಳಿದ್ದಾರೆ.

 

ನಾಲ್ವರು ಆರೋಪಿಗಳಾದ ಸಂದೀಪ್, ರಾಮು, ಲವ್ಕುಶ್ ಮತ್ತು ರವಿ ಮೇಲೆ ಸಾಮೂಹಿಕ ಅತ್ಯಾಚಾರ, ಸೆಕ್ಷನ್ 302 (ಕೊಲೆ) ಮತ್ತು ಎಸ್‌ಸಿ / ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳನ್ನು ಹಾಕಲಾಗಿದೆ. ಇತ್ತ ಮೃತ ಯುವತಿಯ ಸಹೋದರ ಪೊಲೀಸ್ ತನಿಖೆ ಸಮಾಧಾನ ತಂದಿಲ್ಲ, ನಮಗೆ ನ್ಯಾಯ ಬೇಕು ಎಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಲಾಕಪ್ ಡೆತ್: ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಪ್ರಕರಣ ದಾಖಲು!

LEAVE A REPLY

Please enter your comment!
Please enter your name here